ಮುಂದುವರೆದ `ಎನ್‌ಟಿಎಂ ಶಾಲೆ ಉಳಿಸಿ’ ಹೋರಾಟ
ಮೈಸೂರು

ಮುಂದುವರೆದ `ಎನ್‌ಟಿಎಂ ಶಾಲೆ ಉಳಿಸಿ’ ಹೋರಾಟ

August 27, 2021

ಮೈಸೂರು,ಆ.೨೬(ಪಿಎಂ)- ಮೈಸೂರಿನ ನಾರಾಯಣಶಾಸ್ತಿç ರಸ್ತೆಯಲ್ಲಿರುವ ಮಹಾರಾಣ ಯವರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಎನ್‌ಟಿಎಂಎಸ್) ಉಳಿಸಿಕೊಂಡೇ, ವಿವೇಕ ಸ್ಮಾರಕ ನಿರ್ಮಿಸಬಹುದೆಂಬ ಜಿಲ್ಲಾಡಳಿತದ ವರದಿಯಂತೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿ ಮಹಾರಾಣ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಶಾಲೆ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಈ ಹಿಂದೆ ಜಿಲ್ಲಾಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಶಾಲಾ ಜಾಗವನ್ನು ಹೊರತುಪಡಿಸಿ, ಉಳಿದ ಜಾಗದಲ್ಲಿ ಸ್ಮಾರಕ ನಿರ್ಮಿಸಬಹು ದೆಂದು ವರದಿ ನೀಡಿದ್ದಾರೆ. ಅದರಂತೆಯೇ ಸರ್ಕಾರ ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿದರು. ಶಾಲೆಪರ ಹೋರಾಟಗಾರರಾದ ಪ.ಮಲ್ಲೇಶ್, ಸ.ರ.ಸುದರ್ಶನ, ಮೋಹನ್‌ಕುಮಾರ್‌ಗೌಡ, ಹೊಸಕೋಟೆ ಬಸವರಾಜು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »