ವಿದ್ಯಾರಣ್ಯಪುರಂ ಚಿನ್ನದ ಅಂಗಡಿ ದೋಚಲು ೩ ದಿನ ಮುನ್ನವೇ ಸ್ಕೆಚ್!
ಮೈಸೂರು

ವಿದ್ಯಾರಣ್ಯಪುರಂ ಚಿನ್ನದ ಅಂಗಡಿ ದೋಚಲು ೩ ದಿನ ಮುನ್ನವೇ ಸ್ಕೆಚ್!

August 27, 2021

ಸಿಸಿ ಕ್ಯಾಮರಾದಲ್ಲಿ ಖದೀಮರು ಹೊಂಚು ಹಾಕಿದ ದೃಶ್ಯ ಸೆರೆ

ಮೈಸೂರು, ಆ.೨೬(ಎಂಟಿವೈ)-ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಕಳೆದ ಸೋಮವಾರ ಚಿನ್ನಾಭರಣ ಅಂಗಡಿಯಲ್ಲಿ ದರೋಡೆ ಮಾಡಿ, ಗ್ರಾಹಕನನ್ನು ಗುಂಡಿಟ್ಟು ಹತ್ಯೆ ಮಾಡಿದ ದುಷ್ಕರ್ಮಿಗಳು ಅದಕ್ಕೂ ೩ ದಿನ ಮುನ್ನಾ ವರಮಹಾಲಕ್ಷಿö್ಮ ಹಬ್ಬ ದಂದೇ ಈ ಅಂಗಡಿ ಯಲ್ಲಿ ದರೋಡೆ ಮಾಡಲು ಸಂಚು ರೂಪಿಸಿ ವಿಫಲ ರಾಗಿದ್ದರು ಎಂಬುದು ಬೆಳ ಕಿಗೆ ಬಂದಿದೆ.

ವಿದ್ಯಾರಣ್ಯಪುರAನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್‌ನ ಸಿಸಿ ಕ್ಯಾಮರಾ ಫುಟೇಜ್‌ಗಳನ್ನು ಪರಿ ಶೀಲಿಸುತ್ತಿದ್ದ ವೇಳೆ ಪೊಲೀಸರಿಗೆ ಈ ವಿಷಯ ತಿಳಿದಿದೆ. ವರಮಹಾಲಕ್ಷ್ಮಿ ಹಬ್ಬದ ದಿನವಾದ ಆ.೨೦ರಂದು ಈ ದುಷ್ಕರ್ಮಿಗಳು ಇದೇ ಚಿನ್ನದ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಹೇಳಲಾಗಿದೆ. ಅಂದು ಅಂಗಡಿಗೆ ಬಂದಿದ್ದ ದುಷ್ಕರ್ಮಿಗಳು ದರೋಡೆ ನಡೆಸಲು ಯತ್ನಿಸಿ ವಿಫಲರಾದರೇ ಅಥವಾ ಸ್ಕೆಚ್ ಹಾಕಲು ಎಂಬುದರ ಬಗ್ಗೆ ಖಚಿತವಾಗಿಲ್ಲವಾದರೂ ಘಟನೆಗೂ ೩ ದಿನ ಮುನ್ನಾ ದುಷ್ಕರ್ಮಿಗಳು ಬಂದಿರುವುದAತೂ ಖಚಿತಪಟ್ಟಿದೆ.

ಓರ್ವ ಪೊಲೀಸರ ವಶಕ್ಕೆ?: ಚಿನ್ನಾಭರಣ ಅಂಗಡಿಯಲ್ಲಿ ದೊರೆತ ಬೆರಳಚ್ಚು ಆಧಾರದ ಮೇರೆಗೆ ಮುಂಬೈ ಮೂಲದ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಇದನ್ನು ಪೊಲೀಸರು ಅಲ್ಲಗಳೆದಿದ್ದಾರೆ.

Translate »