ಲಾಕ್‍ಡೌನ್ ನಿಯಮ ಉಲ್ಲಂಘನೆ: ಇಬ್ಬರು ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲು
ಮೈಸೂರು

ಲಾಕ್‍ಡೌನ್ ನಿಯಮ ಉಲ್ಲಂಘನೆ: ಇಬ್ಬರು ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲು

April 19, 2020

ಮೈಸೂರು,ಏ.18(ಎಸ್‍ಬಿಡಿ)- ನಿಯಮ ಉಲ್ಲಂಘಿಸಿದ ಇಬ್ಬರು ವ್ಯಾಪಾರಿಗಳ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಲಾಕ್‍ಡೌನ್ ಹಿನ್ನೆಲೆ ಮೈಸೂರು ನಗರ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಸಮಯ ನಿಗದಿಗೊಳಿಸಿ, ಪೊಲೀಸ್ ಆಯುಕ್ತ ಚಂದ್ರ ಗುಪ್ತ ಆದೇಶಿಸಿದ್ದಾರೆ. ದೇವರಾಜ ಮೊಹಲ್ಲಾ ಸೀಬಯ್ಯ ರಸ್ತೆ, 2ನೇ ಕ್ರಾಸ್‍ನಲ್ಲಿರುವ ರಾಮ್‍ದೇವ್ ಇಂಪೆಕ್ಸ್ ಹಾಗೂ ಸಂತೇ ಪೇಟೆಯಲ್ಲಿರುವ ಧನಲಕ್ಷ್ಮೀ ಎಂಟರ್ ಪ್ರೈಸಸ್ ಅಂಗಡಿ ಮಾಲೀಕರು ಏ.16ರಂದು ಮುಂಜಾನೆ 5 ಗಂಟೆಗೆ ವ್ಯಾಪಾರ ಆರಂಭಿ ಸುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ.

ದೇವರಾಜ ಠಾಣೆ ಸಬ್‍ಇನ್‍ಸ್ಪೆಕ್ಟರ್ ರಾಜು ಹಾಗೂ ಎಎಸ್‍ಐ ಉಮೇಶ್‍ಮೂರ್ತಿ ಗಸ್ತಿ ನಲ್ಲಿದ್ದಾಗ ನಿಗದಿತ ಸಮಯಕ್ಕಿಂತ ಮುಂಚಿತ ವಾಗಿ ಅಂಗಡಿ ತೆರೆದಿರುವುದು ಗೊತ್ತಾಗಿದ್ದು, ಈ ಸಂಬಂಧ ಪ್ರತ್ಯೇಕ ದೂರು ನೀಡಿದ್ದಾರೆ.

Translate »