ಕರಿಕಲ್ಲು ಸಾಗಿಸುತ್ತಿದ್ದ ಲಾರಿ ವಶ
ಮೈಸೂರು

ಕರಿಕಲ್ಲು ಸಾಗಿಸುತ್ತಿದ್ದ ಲಾರಿ ವಶ

May 1, 2021

ಹುಣಸೂರು, ಏ.30 (ಕೆಕೆ)- ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನ ಹೊಸಹಳ್ಳಿ ವಲಯದಂಚಿನಲ್ಲೇ ಅಕ್ರಮ ಗಣಿಗಾರಿಕೆ ನಡೆಸಿ, ಕರಿಕಲ್ಲು ಸಾಗಿಸುತ್ತಿದ್ದ ಲಾರಿಯನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ವಲಯದ ಇ.ಪಿ.ಟಿ. ಯಂಚಿನ ಮುದಗನೂರು ಅಗಸಕಟ್ಟೆ ಬಳಿ ಕೆಲವು ದಿನಗಳಿಂದ ಅಕ್ರಮವಾಗಿ ಕರಿಕಲ್ಲು ಗಣಿಗಾರಿಕೆ ನಡೆ ಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ನಾಗರಹೊಳೆ ಉದ್ಯಾ ನವನದ ರಸ್ತೆಯ ಹೊಸಪೆಂಜ ಹಳ್ಳಿ ಬಳಿ ಕರಿಕಲ್ಲು ಸಾಗಿಸುತ್ತಿದ್ದ ಲಾರಿಯನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಅರಣ್ಯ ಸಂಚಾರಿ ದಳದ ಡಿಸಿಎಫ್ ಪೂವಯ್ಯ ತಿಳಿಸಿದ್ದಾರೆ.

ಸ್ಥಳದಲ್ಲೇ ವಾಹನ- ಪರಿಕರಗಳ ವಶ: ಅಕ್ರಮವಾಗಿ ಕರಿಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ವಿಷಯ ತಿಳಿದು ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ಇತ್ತು, ಸ್ಥಳದಲ್ಲಿದ್ದ ಜೆಸಿಬಿ, ಡ್ರಿಲ್ಲಿಂಗ್ ಯಂತ್ರ, ಕರಿಕಲ್ಲು ಸೇರಿದಂತೆ ಎಲ್ಲಾ ಪರಿಕರಗಳನ್ನು ಸೀಜ್ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗುವುದು ಎಂದು ತಹಸೀಲ್ದಾರ್ ಬಸವರಾಜ್ ತಿಳಿಸಿದ್ದಾರೆ.
ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆ ಸಲುವಾಗಿ ಅರಣ್ಯದಂಚಿನಲ್ಲಿ ಯಾವುದೇ ಗಣಿಗಾರಿಕೆ ನಡೆಯುವುದು ನಿಷಿದ್ದವಾಗಿದ್ದರೂ ಇಲ್ಲಿ ರಾಜಾರೋಷವಾಗಿ ಗಣಿಗಾರಿಕೆ ನಡೆಸಿ, ಹಲವಾರು ಲೋಡ್ ನಷ್ಟು ಕರಿಕಲ್ಲು ಸಾಗಣೆಯಾಗಿರುವುದು ತಿಳಿದಿದ್ದರೂ ಯಾವುದೇ ಕ್ರಮ ವಹಿಸದಿರುವುದು ಅನುಮಾನಕ್ಕೆಡೆ ಮಾಡಿದೆ. ಇವರಿಗೆ ಅನುಮತಿ ನೀಡಿದವರು ಯಾರು? ಎಷ್ಟು ದಿನದಿಂದ ಇದು ನಡೆಯುತ್ತಿದೆ. ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಪೆÇಲೀಸ್ ಇಲಾಖೆಗಳ ಕಣ್ತಪ್ಪಿಸಿ ಈ ರೀತಿ ಲೂಟಿ ಮಾಡಿ ದ್ದಾದರೂ ಹೇಗೆ? ಎಂಬುದರ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಈ ಎಲ್ಲಾ ಸತ್ಯಾಸತ್ಯತೆಗಳು ಇಲಾಖಾ ತನಿಖೆಯಿಂದ ಹೊರ ಬೀಳಬೇಕಾಗಿದೆ.

Translate »