ಪೊಲೀಸರಿಗೆ ಉಪಹಾರ ವಿತರಣೆ
ಮೈಸೂರು

ಪೊಲೀಸರಿಗೆ ಉಪಹಾರ ವಿತರಣೆ

May 1, 2021

ತಿ.ನರಸೀಪುರ, ಏ. 30 (ಎಸ್‍ಕೆ)- ಕೊರೊನಾ ಕಫ್ರ್ಯೂ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಪೆÇಲೀಸರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ವರುಣಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ತಾಯೂರು ಪ್ರಕಾಶ್ ಬಣ್ಣಿಸಿದರು.
ಪಟ್ಟಣ ಪೆÇಲೀಸ್ ಠಾಣೆಯ ಸಿಬ್ಬಂದಿಗೆ ಬೆಳಗಿನ ಉಪಹಾರ ವಿತರಿಸಿ ಅವರು ಮಾತನಾಡಿದರು.

ಕೊರೊನಾ ಮಹಾಮಾರಿ ತಾಲೂಕಿ ನಲ್ಲಿಯೂ ತನ್ನ ಕಬಂಧ ಬಾಹು ಚಾಚಿದ್ದು, ಜನತೆ ತೀವ್ರವಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವು ನೋವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ಸರ್ಕಾರ ಕೊರೊನಾಕ್ಕೆ ಕಡಿವಾಣ ಹಾಕುವ ಸಲುವಾಗಿ 14 ದಿನಗಳ ಕಫ್ರ್ಯೂ ಜಾರಿ ಮಾಡಿದೆ. ಇದರಿಂದ ಪೆÇಲೀಸರಿಗೆ ಹೆಚ್ಚಿನ ಕರ್ತವ್ಯದ ಹೊರೆ ಬೀಳಲಿದ್ದು, ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಎಲ್ಲರು ಮಾಡಬೇಕಿದೆ.

ಕಫ್ರ್ಯೂ ವೇಳೆ ಎಲ್ಲೆಂದರಲ್ಲಿ ಪೆÇಲೀ ಸರು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಸರಿಯಾದ ಸಮಯಕ್ಕೆ ಅವರಿಗೆ ಊಟ ತಿಂಡಿ ಸಿಗದ ಕಾರಣ ಕೊರೊನಾ ವಾರಿಯರ್‍ಗಳಾಗಿರುವ ಅವರಿಗೆ ತೊಂದರೆ ಯಾಗಬಾರದೆಂಬ ದೃಷ್ಟಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಇದೇ ರೀತಿ ಅನುಕೂಲ ಸ್ಥರು, ಉದ್ದಿಮೆದಾರರು ಮತ್ತಿತರರು ಪೆÇಲೀಸ ರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡ ಬೇಕಿದೆ ಎಂದು ಕರೆ ನೀಡಿದರು.

ಸರ್ಕಲ್ ಇನ್ಸ್‍ಪೆಕ್ಟರ್ ಎನ್.ಜಿ. ಕೃಷ್ಣಪ್ಪ, ಸಬ್ ಇನ್ಸ್‍ಪೆಕ್ಟರ್ ಹೆಚ್.ಡಿ.ಮಂಜು, ವಾಲ್ಮೀಕಿ ಒಕ್ಕೂಟದ ತಾಲೂಕು ಅಧ್ಯಕ್ಷ ಕೃಷ್ಣಮೂರ್ತಿ, ತಲಕಾಡು ಮಹದೇವ, ಯಡದೊರೆ ಮಹೇಶ್ ನಾಯಕ್, ಛಾಯಾಪತಿ, ಗ್ರಾಪಂ ಸದಸ್ಯರಾದ ಸತೀಶ್, ನಾಗೇಶ್ ನಾಯ್ಕ, ಮಹೇಶ್, ಇಂಡವಾಳು ಪ್ರಕಾಶ್ ಹಾಜರಿದ್ದರು.

Translate »