ರಾಜ್ಯ ಸರ್ಕಾರದ ನಿರ್ಲಕ್ಷ್ಯ: ಕೊರೊನಾ 2ನೇ ಅಲೆಗೆ ಅಪಾರ ಜೀವಬಲಿ
ಮೈಸೂರು

ರಾಜ್ಯ ಸರ್ಕಾರದ ನಿರ್ಲಕ್ಷ್ಯ: ಕೊರೊನಾ 2ನೇ ಅಲೆಗೆ ಅಪಾರ ಜೀವಬಲಿ

May 1, 2021

ಮೈಸೂರು,ಏ.30(ಎಂಟಿವೈ)-ಕೊರೊನಾ 2ನೇ ಅಲೆಯ ತೀವ್ರತೆ ಬಗ್ಗೆ ಮುಂಚಿತವಾಗಿಯೇ ತಜ್ಞರ ಸಮಿತಿ ಎಚ್ಚರಿ ಸಿದ್ದರೂ, ಭ್ರಷ್ಟಾಚಾರ ನಡೆಸುವ ಏಕೈಕ ಉದ್ದೇಶ ದಿಂದ ರಾಜ್ಯ ಸರ್ಕಾರ ನಿರ್ಲಕ್ಷಿಸಿದ ಪರಿಣಾಮವಾಗಿ ಇಂದು ಜನರು ಸಂಕಷ್ಟ ಕ್ಕೀಡಾಗಿದ್ದಾರೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ನಿರ್ಲಕ್ಷ್ಯದ ಪರಮಾವಧಿಯಿಂದಾಗಿ ಜನಸಾಮಾನ್ಯರು ಸೋಂಕಿಗೆ ಬಲಿಯಾಗುತ್ತಿದ್ದಾರೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿರುವುದನ್ನು ಆಡಳಿತ ಪಕ್ಷದ ಶಾಸಕರಾದ ಎ.ಹೆಚ್.ವಿಶ್ವನಾಥ್, ಬಸನ ಗೌಡ ಪಾಟೀಲ್ ಯತ್ನಾಳ್ ಅವರೇ ಬಹಿರಂಗ ಪಡಿಸಿದ್ದಾರೆ ಎಂದರು. ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ.ಮಂಜುನಾಥ್, ಡಾ.ದೇವಿಪ್ರಸಾದ್ ಶೆಟ್ಟಿ ಮತ್ತಿ ತರರಿದ್ದ ತಜ್ಞರ ಸಮಿತಿ 2ನೇ ಅಲೆ ಅಪ್ಪಳಿಸಲಿ ರುವ ಬಗ್ಗೆ ರಾಜ್ಯ ಸರ್ಕಾರಕ್ಕೆ 2020ರ ನವೆಂಬರ್ ನಲ್ಲೇ ಎಚ್ಚರಿಸಿತ್ತು. ತಜ್ಞರ ಮಾತನ್ನು ಲೆಕ್ಕಕ್ಕೆ ತೆಗೆದು ಕೊಳ್ಳದ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿಲ್ಲ. ಪರಿಣಾಮ ಇಂದು 2ನೇ ಅಲೆ ತೀವ್ರ ಸ್ವರೂಪದಲ್ಲಿ ಕಾಡುತ್ತಿದೆ. ಸೋಂಕಿಗೆ ಯುವಜನರೇ ಹೆಚ್ಚಾಗಿ ಬಲಿ ಯಾಗುತ್ತಿದ್ದಾರೆ. ಆಕ್ಸಿಜನ್, ವೆಂಟಿಲೇಟರ್ ಸೌಲಭ್ಯವಿಲ್ಲದೆ ಸಾವನ್ನ ಪ್ಪುತ್ತಿದ್ದಾರೆ. ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ವೈದ್ಯರು, ನರ್ಸ್‍ಗಳ ಕೊರತೆ ಇದೆ. ಸೋಂಕು ಸ್ಫೋಟಗೊಂಡು ಜನರು ಬಲಿಯಾಗುತ್ತಿರುವುದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.

ಕೇರಳ ಮಾದರಿ: ಕೇರಳದಲ್ಲಿ ಕೈಗೊಂಡ ಕ್ರಮಗಳನ್ನು ಕರ್ನಾಟಕದಲ್ಲಿ ಕೈಗೊಳ್ಳಲಿಲ್ಲ. ಕೇರಳ ಸರ್ಕಾರ ಮೊದಲ ಅಲೆಗೆ ಎಚ್ಚೆತ್ತು ವೈದ್ಯರು, ನರ್ಸ್ ಸೇರಿದಂತೆ ಆರೋಗ್ಯ ಸಿಬ್ಬಂದಿಗಳ ನೇಮಕ ಮಾಡಿತು. ಆಕ್ಸಿಜನ್ ಪ್ಲಾಂಟ್ ನಿರ್ಮಿಸಿ ದಾಸ್ತಾನು ಇಟ್ಟುಕೊಂಡಿತು. ಪರಿಣಾಮ ಸಾವಿನ ಸಂಖ್ಯೆ ಕಡಿಮೆ ಇದೆ. ಕೊರೊನಾ ನಿರ್ವಹಣೆಯಲ್ಲಿ ಕೇರಳ ಮಾದರಿ ಎನಿಸಿದೆ ಎಂದರು.

ಮನಮೋಹನ್ ಸಿಂಗ್ ಪತ್ರಕ್ಕೆ ವ್ಯಂಗ್ಯ: ಕೊರೊನಾ ಸೋಂಕು ತಡೆಯಲು ಮಾಜಿ ಪ್ರಧಾನಿ ಡಾ. ಮನ ಮೋಹನ್ ಸಿಂಗ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಎಲ್ಲರಿಗೂ ಉಚಿತವಾಗಿ ಲಸಿಕೆ ಹಾಕಿ ಸುವಂತೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ದೊರೆ ಯುವಂತೆ ಮಾಡಬೇಕು ಎಂದು ಸಲಹೆ ನೀಡಿದ್ದರು. ಆದರೆ ಮೋದಿ ಆ ಪತ್ರಕ್ಕೆ ಮನ್ನಣೆ ನೀಡಲಿಲ್ಲ. ಕೇಂದ್ರ ಸಚಿವ ಹರ್ಷವರ್ಧನ್ ವ್ಯಂಗ್ಯವಾಗಿ ಉತ್ತರಿ ಸಿದ್ದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಬರೆದ ಪತ್ರಕ್ಕೆ ಮಾತ್ರ ಮೋದಿ ಅವರೇ ಕರೆ ಮಾಡಿ ಪ್ರತಿಕ್ರಿಯಿಸುತ್ತಾರೆ.

ನೆರವು ಕೇಂದ್ರ: ಕೊರೊನಾ ಹಾವಳಿ ನಿಯಂತ್ರಿ ಸಲು 14 ದಿನಗಳ ಕಫ್ರ್ಯೂ ಜಾರಿಗೊಳಿಸಿದ ಸರ್ಕಾರ, ನೆರವು ಕೇಂದ್ರವನ್ನೇ ತೆರೆದಿಲ್ಲ. ವಸತಿಹೀನರು, ಭಿಕ್ಷುಕರು ಊಟವಿಲ್ಲದೆ ಹಸಿವಿನಿಂದ ಸಾಯು ವಂತಾಗಿದೆ. ಕೂಡಲೇ ನೆರವು ಕೇಂದ್ರ ತೆರೆಯ ಬೇಕು ಎಂದು ಆಗ್ರಹಿಸಿದರು.

ಅಸಂಘಟಿತ ವಲಯ: ಕಫ್ರ್ಯೂದಿಂದಾಗಿ ಅಂಗಡಿ ಗಳಲ್ಲಿ ಕೆಲಸ ಮಾಡುವವರು, ಕೂಲಿ ಕಾರ್ಮಿಕರಿಗೆ ದಿನದ ದುಡಿಮೆ ಇಲ್ಲದೆ ಕಷ್ಟವಾಗಿದೆ. ಹಣ್ಣು, ಹೂವು ಬೆಳೆಗಾರರು ಫಸಲು ಮಾರಲಾಗದೆ ನಷ್ಟಕ್ಕೀಡಾಗಿದ್ದಾರೆ. ಇವರಿಗೆ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯಿ ಸಿದರು. ಸರ್ಕಾರ ಬೇರೆ ಇಲಾಖೆಗಳಿಗೆ ಮೀಸಲಿಟ್ಟ ಅನುದಾನವನ್ನು ಆರೋಗ್ಯ ಸೇವೆಗೆ ಬಳಸಲಿ. ವೆಂಟಿಲೇಟರ್, ಆಕ್ಸಿಜನ್ ಮೊದಲಾದ ವೈದ್ಯಕೀಯ ಪರಿಕರಗಳನ್ನು ಖರೀದಿಸಲಿ ಎಂದು ಸಲಹೆ ನೀಡಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಲಸಿಕೆ ಪೂರೈಸುವುದರಲ್ಲಿ, ಕೊರೊನಾ ನಿರ್ವಹಣೆಗೆ ನೆರವು ನೀಡುವುದರಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ಬಗ್ಗೆ ರಾಜ್ಯದ ಸಂಸದರು ಧ್ವನಿ ಎತ್ತಬೇಕು. ಮೇ ತಿಂಗಳಿಂದಲೇ ಪಡಿತರ ವ್ಯವಸ್ಥೆಯಲ್ಲಿ ತಲಾ 5 ಕೆಜಿ ಅಕ್ಕಿ ವಿತರಿಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್, ಕೆಪಿಸಿಸಿ ವಕ್ತಾರ ಹೆಚ್.ಎ. ವೆಂಕಟೇಶ್, ನಗರ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »