ಕೋವಿಡ್‍ನಿಂದ ನಷ್ಟ: ಹೋಟೆಲ್ ಉದ್ಯಮಕ್ಕೆ  ನೆರವಾಗಲು ಉದ್ಯಮಿ ಎನ್.ಸಂದೇಶ್ ಸಿಎಂಗೆ ಮನವಿ
ಮೈಸೂರು

ಕೋವಿಡ್‍ನಿಂದ ನಷ್ಟ: ಹೋಟೆಲ್ ಉದ್ಯಮಕ್ಕೆ ನೆರವಾಗಲು ಉದ್ಯಮಿ ಎನ್.ಸಂದೇಶ್ ಸಿಎಂಗೆ ಮನವಿ

June 18, 2021

ಮೈಸೂರು,ಜೂ.17(ಆರ್‍ಕೆಬಿ)-ಕೋವಿಡ್-19 ಸಂಕಷ್ಟಕ್ಕೆ ಒಳಗಾಗಿರುವ ಹೋಟೆಲ್ ಉದ್ಯಮಕ್ಕೆ, ಇಲ್ಲಿನ ಕೆಲಸಗಾರರು, ಪ್ರವಾಸಿ ಮಾರ್ಗದರ್ಶಕರಿಗೆ ಸರ್ಕಾರ ನೆರವು ಘೋಷಿಸುವಂತೆ ಹೋಟೆಲ್ ಉದ್ಯಮಿ ಎನ್.ಸಂದೇಶ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಹೋಟೆಲ್ ಉದ್ದಿಮೆ ಇಂದು ಒಂದು ಕೈಗಾ ರಿಕೋದ್ಯಮದಂತೆ ಬೆಳೆದು ನಿಂತಿದೆ. ಪ್ರವಾಸೋ ದ್ಯಮದ ಜೊತೆ ಜೊತೆಯಾಗಿ ರಾಜ್ಯದ ಖಜಾನೆಗೆ ಗಣನೀಯ ಪ್ರಮಾಣದಲ್ಲಿ ತನ್ನ ಪಾಲಿನ ಆರ್ಥಿಕ ಕೊಡುಗೆ ನೀಡುತ್ತಿದೆ. ಆದರೆ ಕೋವಿಡ್ ಪರಿಸ್ಥಿತಿ ಯಿಂದಾಗಿ ಕಳೆದ ಒಂದೂವರೆ ವರ್ಷದಿಂದ ಹೆಚ್ಚು ಕಡಿಮೆ ಮುಚ್ಚಿದಂತಿರುವ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಸರ್ಕಾರದ ಆದೇಶದ ಮೇರೆಗೆ 6-7 ತಿಂಗಳ ಕಾಲ ಲಾಕ್‍ಡೌನ್, ಸುಮಾರು 3 ತಿಂಗಳ ಭಾಗಶಃ ಲಾಕ್‍ಡೌನ್, ರಾತ್ರಿ ಕಫ್ರ್ಯೂ, ಕೊರೊನಾ ಭೀತಿಯಿಂದ ಪ್ರವಾಸಿಗರು, ಸಾರ್ವಜನಿ ಕರು ಹೋಟೆಲ್‍ಗಳ ಕಡೆಗೆ ತಿರುಗಿ ನೋಡದಿರು ವುದರಿಂದ ಹೋಟೆಲ್‍ಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಆದ್ದರಿಂದ ಹೋಟೆಲ್ ಉದ್ಯಮದ ನೆರವಿಗೆ ಧಾವಿಸಿ, ಉದ್ಯಮ ಉಳಿಸಿ, ಬೆಳೆಸಲು ಸಹಕರಿಸುವಂತೆ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

ಹೋಟೆಲ್‍ಗಳಿಗೆ ನೀಡಿರುವ ಬಾರ್ ಲೈಸೆನ್ಸ್‍ಗೆ ವಾರ್ಷಿಕ 10 ಲಕ್ಷಕ್ಕೂ ಹೆಚ್ಚು ಲೈಸೆನ್ಸ್ ಅಂದರೆ ಸನ್ನದು ಹಣ ಪಾವತಿಸ ಬೇಕಾಗಿದ್ದು, ಕೊರೊನಾ ಪರಿಸ್ಥಿತಿಯಿಂದ ವ್ಯಾಪಾರ ವ್ಯವಹಾರವಿಲ್ಲದೆ, ಹೋಟೆಲ್‍ನ ಅಟ್ಯಾಚ್ಡ್ ಬಾರ್‍ಗಳು ಮುಚ್ಚಿ, ಹೋಟೆಲ್‍ಗಳು ಭಾರೀ ನಷ್ಟ ದಲ್ಲಿ ನಡೆಯುತ್ತಿವೆ. ಹೀಗಾಗಿ ಪ್ರಸಕ್ತ ವರ್ಷಕ್ಕೆ ಹೋಟೆಲ್ ಉದ್ಯಮಕ್ಕೆ ನೀಡಿರುವ ಹೋಟೆಲ್ ಬಾರ್ ಲೈಸೆನ್ಸ್ ಶುಲ್ಕ ಮನ್ನಾ ಮಾಡಬೇಕು. ಮಹಾನಗರಪಾಲಿಕೆಗೆ ಪ್ರತೀ ವರ್ಷ ಹೋಟೆಲ್ ಕಟ್ಟಡಗಳ ಲಕ್ಷಾಂತರ ರೂ. ಆಸ್ತಿ ತೆರಿಗೆ ಕಟ್ಟುತ್ತಾ ಬಂದಿರುವ ನಮಗೆ ಈ ಬಾರಿ ಕೋವಿಡ್‍ನಿಂದಾಗಿ ವ್ಯಾಪಾರ, ವಹಿ ವಾಟಿಲ್ಲದೆ ಹೋಟೆಲ್ ಕೊಠಡಿಗಳು ವರ್ಷ ವಿಡೀ ಖಾಲಿ ಬಿದ್ದು ನಷ್ಟ ಅನುಭವಿಸಿವೆ. ಹೀಗಾಗಿ ಇಷ್ಟೊಂದು ಪ್ರಮಾಣದ ಆಸ್ತಿ ತೆರಿಗೆ ಪೂರ್ಣ ಪಾವತಿ ಕಷ್ಟವಾಗಿದೆ. ಆದ್ದ ರಿಂದ ಪ್ರಸಕ್ತ ಸಾಲಿಗೆ ಹೋಟೆಲ್ ಕಟ್ಟಡದ ಆಸ್ತಿತೆರಿಗೆಯನ್ನು ಪೂರ್ಣ ಮನ್ನಾ ಅಥವಾ ವಿನಾಯಿತಿ ನೀಡಬೇಕು.
ಹೋಟೆಲ್ ಉದ್ಯಮ ಸಾವಿರಾರು ಕಾರ್ಮಿಕ ರಿಗೆ ಉದ್ಯೋಗ ನೀಡಿ ಅವರ ಕುಟುಂಬಕ್ಕೆ ಜೀವನಾ ಧಾರ ಎನಿಸಿದೆ. ಈಗ ನಷ್ಟಕ್ಕೆ ಸಿಲುಕಿರುವ ಹೋಟೆಲ್ ಉದ್ಯಮ, ಇದುವರೆಗೆ ಹೋಟೆಲ್ ಉದ್ದಿಮೆದಾರರು ನೌಕರರ ಯೋಗಕ್ಷೇಮ ನೋಡಿಕೊಂಡು, ಕೈಲಾದ ನೆರವು ನೀಡುತ್ತಾ ಬಂದಿದ್ದಾರೆ. ಆದ್ದರಿಂದ ಆಟೋ, ಟ್ಯಾಕ್ಸಿ ಚಾಲಕರು, ಕುಶಲಕರ್ಮಿಗಳು, ಮೊದಲಾ ದವರಿಗೆ ನೀವು ಘೋಷಿಸಿರುವ ಪ್ಯಾಕೇಜ್ ಮಾದರಿ ಯಲ್ಲಿಯೇ ಹೋಟೆಲ್ ಉದ್ಯಮದ ಕಾರ್ಮಿಕರು, ಕೆಲಸಗಾರರಿಗೂ ಪ್ಯಾಕೇಜ್ ಘೋಷಿಸುವ ಮೂಲಕ ಅವರ ನೆರವಿಗೆ ಧಾವಿಸಬೇಕು.
ಹೋಟೆಲ್ ಮತ್ತು ಪ್ರವಾಸೋದ್ಯಮ ಜೊತೆಜೊತೆ ಯಾಗಿಯೇ ಸಾಗುವ ಉದ್ಯಮವಾಗಿದ್ದು, ಅದ ರಲ್ಲೂ ಮೈಸೂರಿನಂತಹ ಪ್ರವಾಸಿ ಕೇಂದ್ರದಲ್ಲಿ ಪ್ರವಾ ಸೋದ್ಯಮ ಅವಲಂಬಿಸಿ ಸಾವಿರಾರು ಜನ ಸರ್ಕಾರ ದಿಂದ ಮನ್ನಣೆ ಪಡೆದ ಅಧಿಕೃತ ನೋಂದಾಯಿತ ಪ್ರವಾಸಿ ಮಾರ್ಗದರ್ಶಕರು ಸಂಕಷ್ಟಕ್ಕೀಡಾಗಿದ್ದಾರೆ. ನಗರಕ್ಕೆ ಬರುವ ಪ್ರವಾಸಿಗರನ್ನು ಪ್ರವಾಸಿ ತಾಣಗಳಿಗೆ ಕರೆದೊಯ್ದು ಗೈಡ್ ಮಾಡಿ ಅವರು ನೀಡುವ ಅತ್ಯಲ್ಪ ಹಣದಿಂದ ಜೀವನ ಸಾಗಿಸಿಕೊಂಡು ಬರುತ್ತಿ ದ್ದಾರೆ. ಇಂದು ಪ್ರವಾಸಿಗರಿಲ್ಲದೆ ಬೀದಿಗೆ ಬಿದ್ದಿರುವ ಅವರಿಗೆ ಸರ್ಕಾರ ಪ್ಯಾಕೇಜ್ ಘೋಷಿಸಿ, ನೆರವಾಗ ಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

Translate »