ಲವ್ ಜಿಹಾದ್, ಉಗ್ರಗಾಮಿ ಕೃತ್ಯಗಳ ಬಗ್ಗೆ ತನಿಖೆಗಾಗಿ ಪ್ರತಿಭಟನೆ
ಕೊಡಗು

ಲವ್ ಜಿಹಾದ್, ಉಗ್ರಗಾಮಿ ಕೃತ್ಯಗಳ ಬಗ್ಗೆ ತನಿಖೆಗಾಗಿ ಪ್ರತಿಭಟನೆ

August 19, 2021

ವಿರಾಜಪೇಟೆ, ಆ.18- ಕರ್ನಾಟಕ ರಾಜ್ಯ ಸೇರಿದಂತೆ ನೆರೆಯ ರಾಜ್ಯಗಳಲ್ಲಿ ನಡೆಯು ತ್ತಿರುವ ಲವ್ ಜಿಹಾದ್ ತಡೆಗಟ್ಟುವಲ್ಲಿ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಜರುಗಿಸು ವಂತೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ತಾಲೂಕು ಘಟಕದ ವತಿಯಿಂದ ವಿರಾಜಪೇಟೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಯೋಗಾ ನಂದ ಅವರಿಗೆ ಮನವಿ ಸಲ್ಲಿಸಲಾಯಿತು.

ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹೇಶ್ ಮಾತ ನಾಡಿ, ಮುಗ್ಧ ಹಿಂದೂ ಯುವತಿಯ ರನ್ನು ಆಸೆ ಅಮಿಷಗಳಿಗೆ ಬಲಿಯಾಗಿಸಿ, ಮೋಹಕವಾದ ಮಾತುಗಳಿಂದ ಬಲೆಗೆ ಬೀಳಿಸಿಕೊಂಡು ನಂತರದಲ್ಲಿ ಕೊಲೆ ಮಾಡು ವುದು ಜಿಹಾದಿಗಳ ಕೃತ್ಯವಾಗಿದೆ. ಇಸ್ಲಾಂ ಮತೀಯವಾದಿಗಳು ಲವ್ ಜಿಹಾದ್ ತರಬೇತಿ ನೀಡಿ ವಿದೇಶಿ ಹಣವನ್ನು ನೀಡುತ್ತಿರು ವುದು ತನಿಖೆಗಳಿಂದ ತಿಳಿದು ಬಂದಿದೆ.
ರಾಷ್ಟ್ರೀಯ ತನಿಖಾ ದಳದ ಅಧಿಕಾರಿ ಗಳು ಕಾಶ್ಮೀರ, ಕೇರಳ ಹಾಗೂ ರಾಜ್ಯದ ಮಂಗಳೂರು ಉಲ್ಲಾಳದಲ್ಲಿ ಇತ್ತೀಚೆಗೆ ದಾಳಿ ನಡೆಸಿ ಐವರನ್ನು ಬಂಧಿಸಿದ ಬೆನ್ನಲ್ಲೇ ಉತ್ತರ ಕನ್ನಡ ಭಟ್ಕಳದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಕೊಡಗಿನ ಕಾಫಿ ತೋಟಗಳನ್ನು ಗುರಿಯಾಗಿಸಿಕೊಂಡು ಕೃತ್ಯಗಳನ್ನು ಎಸಗಲು ಸಂಚು ರೂಪಿತವಾಗು ತ್ತಿದೆ. ಇಂತಹ ಗಂಭೀರವಾದ ಸಮಸ್ಯೆ ಯನ್ನು ಮಟ್ಟಹಾಕಲು ಉತ್ತರಪ್ರದೇಶ ಸರ್ಕಾರವು ಜಾರಿಗೆ ತಂದಿರುವ ಕಾನೂನು ಎಲ್ಲಾ ರಾಜ್ಯಗಳಲ್ಲಿಯು ಜಾರಿಯಾಗ ಬೇಕು ಹಾಗೂ ರಾಷ್ಟ್ರೀಯ ತನಿಖಾ ದಳದ ಶಾಖೆಗಳು ಆರಂಭಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಸಂಘ ಟನೆಯ ಮೂಲಕ ಆಗ್ರಹಿಸುತ್ತಿರುವುದಾಗಿ ಮಹೇಶ್ ಹೇಳಿದರು.

ಲವ್ ಜಿಹಾದ್ ಮಾಡುವರ ವಿರುದ್ಧ, ಜಿಹಾದಿಗಳ, ಉಗ್ರ ಸಂಘಟನೆಗಳ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರಲ್ಲದೆ, ಕರಾವಳಿ ಭಾಗದಲ್ಲಿ ಹೆಚ್ಚುತ್ತಿ ರುವ ಲವ್ ಜಿಹಾದ್ ಮತ್ತು ಉಗ್ರಗಾಮಿ ಕೃತ್ಯ ಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸು ವಂತೆ ಮನವಿಯಲ್ಲಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಜಿ.ಅಯ್ಯಣ್ಣ, ಜಿಲ್ಲಾ ಮಾತೃ ಸುರಕ್ಷಾ ಸಂಯೋಜಕ ರಾದ ತಿಮ್ಮಯ್ಯ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಪರ್ಕ ಪ್ರಮುಖ್ ಪ್ರಿನ್ಸ್ ಗಣಪತಿ, ತಾಲೂಕು ಹಿಂ.ಜಾ.ವೇ ಯ ಅಧ್ಯಕ್ಷ ಬಿ.ಎನ್.ಯೋಗೇಶ್, ಪ್ರಧಾನ ಕಾರ್ಯದರ್ಶಿ ಅನೀಲ್ ಸಿದ್ದಾಪುರ, ಮಾತೃ ಸುರಕ್ಷಾ ತಾಲೂಕು ಸಂಯೋಜಕಿ ರಶ್ಮೀ, ನಿಧಿ ಪ್ರಮುಖ್ ಗಣೇಶ್, ಸಂಪರ್ಕ ಪ್ರಮುಖ್ ರವಿ ಹಾಗೂ ಕಾರ್ಯಕರ್ತರುಗಳು ಹಾಜರಿದ್ದರು.

Translate »