ನವದೆಹಲಿ, ನ.3- ನ.1ರಿಂದ ಎಲ್‍ಪಿಜಿ ಬುಕಿಂಗ್‍ನಲ್ಲಿ ಹಲವು ಬದಲಾವಣೆಗಳಾ ಗಿದ್ದು, ಬುಕ್ಕಿಂಗ್ ಮಾಡುವುದಕ್ಕೆ ಬಳಕೆ ಮಾಡುವ ನಂಬರ್ ಸಹ ಬದಲಾವಣೆ ಯಾಗಿದೆ. ವಾಟ್ಸ್‍ಆಪ್ ಮೂಲಕವೂ ಗ್ಯಾಸ್ ಬುಕ್ ಮಾಡುವ ಸೌಲಭ್ಯ ಜಾರಿಗೆ ತರಲಾ ಗಿದ್ದು, ವಾಟ್ಸ್‍ಆಪ್ ಮೂಲಕ ಸಿಲಿಂಡರ್ ಗಳನ್ನು ಬುಕ್ಕಿಂಗ್ ಮಾಡುವ ಬಗ್ಗೆ ಮಾಹಿತಿ ಹೀಗಿದೆ. 5 ವಿವಿಧ ರೀತಿಗಳಲ್ಲಿ ಸಿಲಿಂ ಡರ್ ಬುಕ್ ಮಾಡಲು ಅವಕಾಶವಿದೆ.
1. ಗ್ಯಾಸ್ ಏಜೆನ್ಸಿ ಡಿಸ್ಟ್ರಿಬ್ಯೂಟರ್ ಮೂಲಕ ಬುಕ್ ಮಾಡಬಹುದು. 2. ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸಿಲಿಂಡರ್ ಬುಕ್ ಮಾಡಬಹುದಾಗಿದೆ. 3. ಆನ್‍ಲೈನ್ ಮೂಲಕ https://iocl.com/Products /Indanegas.aspx ಬುಕ್ಕಿಂಗ್ ಮಾಡ ಬಹುದಾಗಿದೆ. 4. ಸಂಸ್ಥೆಯ ವಾಟ್ಸ್‍ಆಪ್ ನಂಬರ್‍ಗೆ ಟೆಕ್ಸ್ಟ್ ಮಾಡುವ ಮೂಲಕ ವಾಟ್ಸ್‍ಆಪ್‍ನಲ್ಲಿ ಬುಕ್ ಮಾಡಬಹುದಾಗಿದೆ.
5. ಇಂಡೇನ್ ಆಪ್ ಮೂಲಕ ಬುಕ್ಕಿಂಗ್
ವಾಟ್ಸ್‍ಆಪ್ ಬುಕ್ಕಿಂಗ್ ಬಗ್ಗೆ ಮಾಹಿತಿ ಹೀಗಿದೆ. 7718955555 ನಂಬರ್ ಮೂಲಕ ಇಂಡೇನ್ ಗ್ರಾಹಕರು ಎಲ್‍ಪಿಜಿ ಬುಕ್ ಮಾಡಬಹುದಾಗಿದ್ದು, ವಾಟ್ಸ್‍ಆಪ್ ಮೂಲಕ ಬುಕ್ ಮಾಡುವುದಕ್ಕೂ ಇದೇ ನಂಬರ್ ಬಳಕೆ ಮಾಡಬಹುದಾಗಿದೆ. ವಾಟ್ಸ್‍ಆಪ್ ನಲ್ಲಿ ಖಇಈIಐಐ ಎಂದು ಟೈಪ್ ಮಾಡಿ ನೋಂದಾಯಿತ ನಂಬರ್ ಮೂಲಕವೇ ವಾಟ್ಸ್‍ಆಪ್ ಮೆಸೇಜ್ ಕಳಿಸಿ ಬುಕ್ ಮಾಡ ಬಹುದಾಗಿದೆ. ದೃಢೀಕರಣ ಕೋಡ್‍ನ್ನು ಎಸ್‍ಎಂಎಸ್ ಮೂಲಕ ಕಳಿಸಬಹು ದಾಗಿದೆ. ಡೆಲಿವರಿ ವ್ಯಕ್ತಿಗೆ ಒಟಿಪಿಯನ್ನು ನೀಡಿದ ಬಳಿಕಷ್ಟೇ ಸಿಲಿಂಡರ್ ಸಿಗಲಿದೆ.