ಬಿತ್ತನೆ, ಕ್ರಿಮಿನಾಶಕ ಬಳಕೆ; ರೈತರಿಗೆ ತಜ್ಞರ ಸಲಹೆ
ಮೈಸೂರು

ಬಿತ್ತನೆ, ಕ್ರಿಮಿನಾಶಕ ಬಳಕೆ; ರೈತರಿಗೆ ತಜ್ಞರ ಸಲಹೆ

November 4, 2020

ಮೈಸೂರು, ನ.3(ಆರ್‍ಕೆಬಿ)- ರೈತರು ನವೆಂಬರ್‍ನಲ್ಲಿ ಕಬ್ಬು ಬಿತ್ತನೆ ಮಾಡಬಹು ದಾಗಿದೆ. ಅಲ್ಲದೇ, ಸೋಯಾ ಅವರೆ, ಅವರೆ, ಕಡಲೆ, ಬೆಳ್ಳುಳ್ಳಿ, ಟೊಮ್ಯಾಟೊ, ಆಲೂಗಡ್ಡೆ, ಬದನೆ, ಮೆಣಸಿನಕಾಯಿ, ಎಲೆಕೋಸು, ಹೂಕೋಸು, ಮೂಲಂಗಿ, ಗೆಡ್ಡೆಕೋಸು ಬಟಾಣಿ, ಕಲ್ಲಂಗಡಿ, ಕ್ಯಾರೆಟ್ ಮೊದಲಾದ ತೋಟಗಾರಿಕೆ ಬೆಳೆಗಳ ಬಿತ್ತನೆ ಮಾಡಬಹುದಾಗಿದೆ ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಪಿ.ಪ್ರಕಾಶ್ ಕೃಷಿಕರಿಗೆ ಸಲಹೆ ನೀಡಿದ್ದಾರೆ.

ಭತ್ತ ಬೆಳವಣಿಗೆ ವೇಳೆ ಬರುವ ಬೆಂಕಿ ರೋಗದ ಹತೋಟಿಗಾಗಿ ಕಾರ್ಬೆಂಡ ಜಿಮ್ 4 ಗ್ರಾಂ ಔಷಧಿಯನ್ನು 1 ಲೀ. ನೀರಿನಲ್ಲಿ ಅಥವಾ ಟ್ರೈಸೈಕ್ಲೆಜೋಲ್ 0.6 ಗ್ರಾಂ ಔಷಧಿಯನ್ನು 1 ಲೀ. ನೀರಿನಲ್ಲಿ ಅಥವಾ ಎಡಿಫೆನ್‍ಪೋಸ್ 1 ಮಿ.ಲೀ. ಔಷಧಿಯನ್ನು 1 ಲೀ. ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. 1 ಎಕರೆಗೆ 250 -300 ಲೀ. ಔಷಧಿಯ ದ್ರಾವಣ ಬೇಕಾಗುತ್ತದೆ.

ಶುಂಠಿ ಬೆಳವಣಿಗೆ ವೇಳೆ ಕಂಡು ಬರುವ ಗೆಡ್ಡೆ ಕೊಳೆರೋಗದ ಹತೋಟಿಗೆ ಶೇ.1ರ ಬೋರ್ಡೊ ದ್ರಾವಣ ಅಥವಾ 3 ಗ್ರಾಂ ಇಂಡೋಫಿಲ್-ಎಂ-45 ಔಷಧಿಯನ್ನು 1 ಲೀ. ನೀರಿನಲ್ಲಿ ಮಿಶ್ರಣ ಮಾಡಿ ಸಿಂಪ ಡಿಸಬೇಕು. ಮೆಣಸಿನಕಾಯಿ ಹೂ ಬಿಡುವ ಥಿಪ್ಸ್ ಮತ್ತು ನುಸಿ ಮೋಡಕವಿದ ವಾತಾ ವರಣ ಇರುವುದರಿಂದ ಮೆಣಸಿನಕಾಯಿ ಬೆಳೆಯಲ್ಲಿ ನುಸಿ ಮತ್ತು ಥಿಪ್ಸ್ ಕಂಡು ಬಂದಿದ್ದು, ಇದರ ಹತೋಟಿಗೆ ರೋಗರ್ 1.7 ಮಿ.ಲೀ. ಮತ್ತು ಡೈಕೋಪಾತ್ 2.5 ಮಿ.ಲೀ. ಔಷಧಿಯನ್ನು 1 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಬದನೆಕಾಯಿ ಟೊಂಗೆ ಮತ್ತು ಕಾಯಿ ಕೊರಕದ ನಿಯಂತ್ರಣಕ್ಕಾಗಿ ಒಣಗಿದ ಟೊಂಗೆಗಳನ್ನು ಹುಳು ಸಮೇತ ಕಿತ್ತು ನಾಶಪಡಿಸಬೇಕು. ನಂತರ ಲೀಟರ್ ನೀರಿಗೆ ನಿಂಬಿಸಿಡಿನ್ 5 ಮಿ.ಲೀ. ಔಷಧಿ ಬೆರೆಸಿ ಬೆಳೆಗೆ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪಿ.ಪ್ರಕಾಶ್, ಸಹ ಸಂಶೋ ಧಕ ಎನ್.ನರೇಂದ್ರಬಾಬು ಅವರ ಮೊ. 94498 69914, ದೂ. 0821-2591 267 / ಮೊ: 9343532154 ಸಂಪರ್ಕಿಸ ಬಹುದು ಎಂದು ಪ್ರಕಟಣೆ ತಿಳಿಸಿದೆ.

 

 

 

Translate »