ಎಲ್‍ಪಿಜಿ ದರ ಏರಿಕೆ: ಜೂನ್ ಮೊದಲ ದಿನವೇ ಸಾರ್ವಜನಿಕರಿಗೆ ಶಾಕ್ ನೀಡಿದ ಸರ್ಕಾರ!
ಮೈಸೂರು

ಎಲ್‍ಪಿಜಿ ದರ ಏರಿಕೆ: ಜೂನ್ ಮೊದಲ ದಿನವೇ ಸಾರ್ವಜನಿಕರಿಗೆ ಶಾಕ್ ನೀಡಿದ ಸರ್ಕಾರ!

June 2, 2020

ನವದೆಹಲಿ, ಜೂ. 1- ಎಲ್‍ಪಿಜಿ ದರವನ್ನು ಏರಿಕೆ ಮಾಡುವ ಮೂಲಕ ಜೂನ್ ಮೊದಲ ದಿನವೇ ತೈಲ ಮಾರುಕಟ್ಟೆ ಕಂಪನಿಗಳು ಸಾರ್ವಜನಿಕರಿಗೆ ಶಾಕ್ ನೀಡಿವೆ.

ತೈಲ ಮಾರುಕಟ್ಟೆ ಕಂಪನಿಗಳು (ಹೆಚ್‍ಪಿ, ಬಿಪಿಸಿಎಲ್, ಐಒಸಿ) ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತೀ ಸಿಲಿಂಡರ್‍ಗೆ ರೂ. 12 ಹೆಚ್ಚಿಸಿದೆ. ಇದರ ಬಳಿಕ ದೆಹಲಿ ನಿವಾಸಿಗಳು 14.2 ಕೆಜಿ ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್ ಬೆಲೆ ರೂ. 596ಕ್ಕೆ ಏರಿಕೆಯಾಗಿದೆ. ಈ ಹಿಂದೆ ಮೇ ತಿಂಗಳಿನಲ್ಲಿ ಇದೇ ಸಿಲಿಂಡರ್ ಬೆಲೆ ರೂ. 581.50 ಇತ್ತು. ಇನ್ನು ಕೋಲ್ಕತಾದಲ್ಲಿ ರೂ. 616, ಮುಂಬೈನಲ್ಲಿ 590.50 ಮತ್ತು ಚೆನ್ನೈನಲ್ಲಿ ರೂ. 606.50 ಆಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 19 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆ ಕೂಡ ಏರಿಕೆಯಾಗಿದ್ದು, ಇಂದಿನಿಂದ ಹೊಸ ದರಗಳು ಜಾರಿಗೆ ಬರಲಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಲ್‍ಪಿಜಿ ಸಿಲಿಂಡರ್‍ನ್ನು ರೂ. 1110ರಿಂದ 1139.50ಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು ಜೂನ್‍ನಲ್ಲಿ ಈ ಸಿಲಿಂಡರ್ ದರ ರೂ. 1029.50 ಇತ್ತು. ಇದಲ್ಲದೆ ಇದರ ಬೆಲೆ ಕೋಲ್ಕತಾದಲ್ಲಿ ರೂ. 1193.50, ಮುಂಬೈನಲ್ಲಿ 1087.50 ಮತ್ತು ಚೆನ್ನೈನಲ್ಲಿ ರೂ. 1254.00 ಆಗಿದೆ.

Translate »