ಸರ್ಕಾರದಿಂದ ರೈತ-ಶ್ರೀಸಾಮಾನ್ಯರ ವಿರೋಧಿ ನಡೆ ಆರೋಪ; ಜೂ.5ರಂದು ರೈತರ ಪ್ರತಿಭಟನೆ
ಮೈಸೂರು

ಸರ್ಕಾರದಿಂದ ರೈತ-ಶ್ರೀಸಾಮಾನ್ಯರ ವಿರೋಧಿ ನಡೆ ಆರೋಪ; ಜೂ.5ರಂದು ರೈತರ ಪ್ರತಿಭಟನೆ

June 2, 2020

ಮೈಸೂರು, ಜೂ.1(ಪಿಎಂ)- ಎಪಿಎಂಸಿ ಹಾಗೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗಳನ್ನು ಖಂಡಿಸಿ ಹಾಗೂ ಸರ್ಕಾರಗಳು ರೈತ ಪರವಾದ ನಡೆಯನ್ನು ಅನು ಸರಿಸುವಂತೆ ಆಗ್ರಹಿಸಿ ಜೂ.5ರಂದು ರೈತರಿಂದ ಪ್ರತಿ ಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘಟನೆ ಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಮೈಸೂರಿನ ಗನ್‍ಹೌಸ್ ಬಳಿಯ ಕುವೆಂಪು ಉದ್ಯಾ ನವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅಂದು ಬೆಳಗ್ಗೆ 11ಕ್ಕೆ ಮೈಸೂರಿನ ಗನ್‍ಹೌಸ್ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನಗಳಿಗೆ ನ್ಯಾಯ ಯುತ ಬೆಲೆ ಇಲ್ಲದೆ ನಷ್ಟ ಅನುಭವಿಸುವಂತಾಗಿದೆ. ಜೊತೆಗೆ ಈಗ ಕೃಷಿ ಚಟುವಟಿಕೆ ಆರಂಭಿಸಲು ಹಣಕಾಸಿನ ಸಮಸ್ಯೆ ಉಂಟಾಗಿದೆ. ಸಹಕಾರ ಬ್ಯಾಂಕ್‍ಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳು ಬಾಕಿ ಸಾಲ ಪಾವತಿ ಮಾಡಿದವರಿಗೆ ಮಾತ್ರ ಹೊಸ ಸಾಲ ನೀಡಲಾಗುವುದು ಎನ್ನುತ್ತಿವೆ. ಹಳೆ ಸಾಲ ಮನ್ನಾ ಮಾಡಿ ಕೂಡಲೇ ಎಲ್ಲ ರೈತರಿಗೆ ಹೊಸ ಸಾಲ ನೀಡಬೇಕು ಎಂದು ಒತ್ತಾಯಿಸಿದರು.

ರೈತರು ಸಂಕಷ್ಟದ ಸಂದರ್ಭದಲ್ಲಿ ಇರುವಾಗಲೇ ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ, ಕಾಪೆರ್Ç ರೇಟ್ ಕಂಪನಿಗಳ ಹಿತರಕ್ಷಣೆಗೆ ಮುಂದಾಗಿದೆ. ಅಲ್ಲದೆ, ರಾಜ್ಯದಲ್ಲಿ ಹೊಸ ಭೂ ಸುಧಾರಣೆ ಕಾಯ್ದೆ ಜಾರಿಗೆ ತರುವ ಮೂಲಕ ಉದ್ದಿಮೆದಾರರು, ಕೈಗಾರಿಕೆಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲ ಮಾಡಿ ಕೊಟ್ಟಿದೆ. ರೈತರನ್ನು ಕೃಷಿ ಕ್ಷೇತ್ರದಿಂದ ಒಕ್ಕಲೆಬ್ಬಿಸಿ, ಕಾಪೆರ್Ç ರೇಟ್ ಕೃಷಿ ಮಾದರಿ ಉತ್ತೇಜಿಸಲು ಸರ್ಕಾರ ಇಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತಂದು ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಬಂಡವಾಳಶಾಹಿಗಳಿಗೆ ಈ ವ್ಯವಸ್ಥೆಯನ್ನು ವಹಿಸಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ. ಆ ಮೂಲಕ ಕೃಷಿ ಪಂಪ್‍ಸೆಟ್‍ಗಳಿಗೆ ನೀಡುವ ಉಚಿತ ವಿದ್ಯುತ್‍ಗೆ ಕಡಿವಾಣ ಹಾಕುವ ಹುನ್ನಾರ ನಡೆಸಲಾಗಿದೆ. ಎಲ್ಲಾ ಕೃಷಿ ಪಂಪ್‍ಸೆಟ್ ರೈತರು ಕೇಂದ್ರದ ಈ ನಡೆ ವಿರುದ್ಧ ಹೋರಾಡಲು ಸಜ್ಜಾಗಬೇಕು ಎಂದು ಮನವಿ ಮಾಡಿದರು.

ಗ್ರಾಮೀಣ ಪ್ರದೇಶದ ಮಹಿಳಾ ಸ್ವ-ಸಹಾಯ ಸಂಘ ಗಳು ಖಾಸಗಿ ಫೈನಾನ್ಸ್‍ಗಳಿಂದ ಸಾಲ ಪಡೆದಿವೆ. ಆದರೆ ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟ ಪರಿಸ್ಥಿತಿ ಇದ್ದರೂ ಸಾಲ ಮರು ಪಾವತಿಗೆ ಒತ್ತಡ ತರಲಾಗುತ್ತಿದೆ. 2021ರ ಮಾರ್ಚ್‍ವರೆಗೆ ಸಾಲ ಮರು ಪಾವತಿಗೆ ಅವಕಾಶ ಕಲ್ಪಿಸ ಬೇಕು. ಲಕ್ಷಾಂತರ ಯುವ ಜನತೆ ನಗರಗಳಿಂದ ಹಳ್ಳಿಗಳಿಗೆ ಮರಳಿದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸಲು ನರೇಗಾ ಯೋಜನೆಯನ್ನು ಕೃಷಿ ಕ್ಷೇತ್ರಕ್ಕೂ ವಿಸ್ತರಿಸಬೇಕು ಎಂದರು.

ಜಮೀನು ಅಡಮಾನವಿಟ್ಟು ಸಾಲಸೋಲ ಮಾಡಿ ಮದುವೆ ಗಾಗಿ ಕಲ್ಯಾಣ ಮಂಟಪಗಳಿಗೆ ಹಲವರು ಮುಂಗಡವಾಗಿ ಹಣ ಕಟ್ಟಿದ್ದಾರೆ. ಆದರೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದುವೆ ನಡೆದಿಲ್ಲವಾದರೂ ಕಲ್ಯಾಣ ಮಂಟಪದ ಮಾಲೀಕರು ಹಣ ಹಿಂತಿರುಗಿಸುತ್ತಿಲ್ಲ. ಅಂತಹ ಮಾಲೀಕರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿ ಮುಂಗಡ ಹಣ ವಾಪಸ್ ಕೊಡಿಸಬೇಕು ಎಂದು ಆಗ್ರಹಿಸಿದರು.

ಗ್ರಾಮೀಣ ಭಾಗದಲ್ಲಿ ಗೃಹ ಬಳಕೆಯ ವಿದ್ಯುತ್ ಶುಲ್ಕ ವನ್ನು ಅವೈಜ್ಞಾನಿಕವಾಗಿ ದುಬಾರಿಯಾಗಿ ವಿಧಿಸಲಾಗಿದೆ. ಹೀಗೆ ದುಪ್ಪಟ್ಟು ಶುಲ್ಕ ವಸೂಲು ಮಾಡುವುದನ್ನು ಕೈಬಿಟ್ಟು, ಲಾಕ್‍ಡೌನ್ ಅವಧಿಯ ಗೃಹ ಬಳಕೆಯ ವಿದ್ಯುತ್ ಶುಲ್ಕ ಮನ್ನಾ ಮಾಡಬೇಕು. ಖಾಸಗಿ ಶಾಲೆಗಳ ಮುಖ್ಯಸ್ಥರು ವಿದ್ಯಾರ್ಥಿಗಳ ಪೆÇೀಷಕರಿಗೆ ಶಾಲೆಗಳ ಆರಂಭಕ್ಕೂ ಮುನ್ನವೇ ಶಾಲಾ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರಲ್ಲದೆ, ಈ ಎಲ್ಲದರ ಸಂಬಂಧ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. ಸಂಘಟನೆಯ ಮುಖಂಡರಾದ ಅತ್ತಳ್ಳಿ ದೇವರಾಜ್, ಪಿ.ಸೋಮಶೇಖರ್, ಕಿರಗಸೂರು ಶಂಕರ್, ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಸಿದ್ದೇಶ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »