ಮಹದೇವಪುರ; ಕಸದ ರಾಶಿಯ ಆಗರ!
ಮೈಸೂರು

ಮಹದೇವಪುರ; ಕಸದ ರಾಶಿಯ ಆಗರ!

June 4, 2020

ಮೈಸೂರು, ಜೂ.3(ವೈಡಿಎಸ್)- ಒಂದೆಡೆ ಕೊರೊನಾ ಸೋಂಕಿನ ಭಯ. ಮತ್ತೊಂ ದೆಡೆ ವಿಲೇವಾರಿಯಾಗದ ಕಸದ ರಾಶಿ ಕೊಳೆತು ದುರ್ವಾಸನೆ ಬೀರುತ್ತಿದ್ದು, ಮಹದೇವ ಪುರ ನಿವಾಸಿಗಳಲ್ಲಿ ಅನಾರೋಗ್ಯದ ಭೀತಿ…

ಜೆ.ಪಿ.ನಗರ ರೈಲ್ವೆ ಗೇಟ್ ಬಳಿಯ ಮಹ ದೇವಪುರದಿಂದ ಮುನಿಸ್ವಾಮಿ ನಗರದವ ರೆಗೆ ರಸ್ತೆಯ ಎರಡೂ ಬದಿ ಕಸದ ರಾಶಿ ಬಿದ್ದಿದ್ದು, ಶ್ರೀರಾಂಪುರ ಗ್ರಾಪಂ ವಿಲೇವಾರಿ ಗೋಜಿಗೇ ಹೋಗಿಲ್ಲ. ಇಲ್ಲಿನ ಯಾವುದೇ ಬ್ಲಾಕ್‍ಗೆ ಹೋದರೂ ಕಸದ ರಾಶಿಯೇ ಆಹ್ವಾನಿಸುತ್ತದೆ. ಮಹದೇವಪುರ ಕಸದ ರಾಶಿಯ ಆಗರವಾಗಿದೆ.

ಕಸದ ರಾಶಿ: ಸಾರ್ವಜನಿಕರು ಮನೆ ಕಸವನ್ನು ಪ್ಲಾಸ್ಟಿಕ್ ಕವರ್‍ಗಳಲ್ಲಿ ತುಂಬಿ ತಂದು ರಸ್ತೆಬದಿ ಬಿಸಾಡಿ ಹೋಗುತ್ತಾರೆ. ರಸ್ತೆಬದಿ ಹಾಗೂ ನರ್ಮ್ ಯೋಜನೆಯಡಿ ನಿರ್ಮಿಸಿರುವ ಸಮುಚ್ಛಯಗಳ ನಿವಾಸಿಗಳು ಮನೆಯ ತ್ಯಾಜ್ಯವನ್ನು ಕಟ್ಟಡದ ಹಿಂಭಾಗ ದಲ್ಲೇ ಬಿಸಾಡುವುದರಿಂದ ಕಸದ ರಾಶಿಯಾ ಗಿದೆ. ಆಹಾರ ಅರಸಿ ಬರುವ ಬೀಡಾಡಿ ದನ ಗಳು ಕಸವನ್ನು ರಸ್ತೆಯಲ್ಲೆಲ್ಲಾ ಹರಡುವು ದರಿಂದ ದುರ್ವಾಸನೆ ಬೀರುತ್ತಿದ್ದು, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಮುಚ್ಚಿದ ಚರಂಡಿ: ಮುನಿಸ್ವಾಮಿ ನಗ ರದ ನಿವಾಸಿಗಳು ಮನೆಯ ತ್ಯಾಜ್ಯವನ್ನು ಅರಳೀಮರದ ಬಳಿಯ ಚರಂಡಿಯಲ್ಲಿ ಬಿಸಾಡುತ್ತಿದ್ದು, ಮಳೆನೀರ ಚರಂಡಿ ಪೂರ್ಣ ಮುಚ್ಚಿ ಹೋಗಿದೆ. ಮಳೆಯ ನೀರು ಹರಿಯಲು ಸಾಧ್ಯವಾಗದೆ ಚರಂಡಿಯಲ್ಲೇ ನಿಲ್ಲುತ್ತಿರುವುದರಿಂದ ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ.

ಕಸಕ್ಕೆ ಬೆಂಕಿ: ರಸ್ತೆ ಬದಿಯಲ್ಲಿನ ಕಸಕ್ಕೆ ಕಿಡಿ ಗೇಡಿಗಳು ಬೆಂಕಿ ಹಾಕುತ್ತಿದ್ದು, ವಾಯು ಮಾಲಿನ್ಯ ಜತೆಗೆ ಸುತ್ತಲಿನ ನಿವಾಸಿಗಳಲ್ಲಿ ಅನಾರೋಗ್ಯ ಭೀತಿ ಕಾಡುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಕಸ ವಿಲೇವಾರಿ ಮಾಡಿಸು ವಂತೆ ನಿವಾಸಿಗಳು ಮನವಿ ಮಾಡಿದ್ದಾರೆ.

Translate »