ಮುರುಘಾ ಮಠದಲ್ಲಿಮಹಜರ್
News

ಮುರುಘಾ ಮಠದಲ್ಲಿಮಹಜರ್

September 5, 2022

ಚಿತ್ರದುರ್ಗ, ಸೆ.4- ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪೆÇೀಕ್ಸೋ ಪ್ರಕರಣಎದುರಿಸುತ್ತಿರುವ ಮುರುಘಾ ಶ್ರೀಗಳ ಪ್ರಕರಣದಲ್ಲಿ ಪೆÇಲೀ ಸರು ಭಾನುವಾರ ಮಠದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.

ಸಂತ್ರಸ್ತ ಬಾಲಕಿಯರು ಸೂಚಿಸಿದ್ದ ಪ್ರತೀ ಸ್ಥಳ ದಲ್ಲೂ ಪೆÇಲೀಸರು ಪರಿಶೀಲನೆ ಮಾಡಿದ್ದಾರೆ. ಸ್ವಾಮೀಜಿಕೊಠಡಿ, ಸ್ನಾನದಕೋಣೆ, ಕೊಠಡಿ ಮುಂಭಾಗ, ಸ್ಕೈ ವಾಕ್ ಸಮೀಪ ಹಾಗೂ ಹಾಸ್ಟೆಲ್ ಬಳಿ ಪೆÇಲೀ ಸರು ಸ್ಥಳ ಮಹಜರು ಮಾಡಿದ್ದಾರೆ. ಮಹಜರು ವೇಳೆ ಕೃತ್ಯಕ್ಕೆ ಸಂಬಂಧಿಸಿದ ಕೆಲ ಸಾಕ್ಷ್ಯಗಳ ಮಾಹಿತಿಯನ್ನೂ ಪೆÇಲೀಸರುಕಲೆಹಾಕಿದ್ದಾರೆ. ಕೊಠಡಿಯಲ್ಲಿಇದ್ದ ಕೆಲವು ಬಟ್ಟೆಗಳನ್ನು ಪೆÇಲೀಸರು ಈ ವೇಳೆ ವಶಕ್ಕೆ ಪಡೆದುಕೊಂಡಿದ್ದಾರೆ. ಅದರೊಂದಿಗೆ ಮಠದ ಸಿಬ್ಬಂದಿಯನ್ನೂ ವಿಚಾರಣೆ ನಡೆಸಿ, ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಮುರುಘಾ ಶ್ರೀಗಳ ಕೋಣೆಗೆಯಾರೆಲ್ಲಾ ಹೋಗುತ್ತಿದ್ದರು. ಅವರಕೋಣೆಗೆಯಾರಿಗೆಲ್ಲಾ ಪ್ರವೇಶವಿತ್ತುಎನ್ನುವ ಮಾಹಿತಿಯನ್ನು ಪೆÇಲೀಸರು ಪಡೆದುಕೊಂಡಿದ್ದಾರೆ. ಕೋಣೆಗೆಯಾರಿಗೆಲ್ಲ ಅವಕಾಶ ಇತ್ತು, ಬಾಲಕಿಯರು ಹೋಗುತ್ತಿದ್ದರೆ, ಅವ ರನ್ನುಯಾರುಕರ್ಕೊಂಡು ಹೋಗುತ್ತಿದ್ದರುಎನ್ನುವುದರ ಮಾಹಿತಿ ಸಂಗ್ರಹ ಮಾಡಿದ್ದಾರೆ. ಮಹಜರು ಮುಗಿಸಿ ಮಠದಿಂದ ಸ್ವಾಮೀಜಿಯನ್ನು ಡಿವೈಎಸ್ಪಿ ಕಚೇರಿಗೆ ಪೆÇಲೀಸರುಕರೆದೊಯ್ದಿದ್ದಾರೆ. ಈ ವೇಳೆ ಶ್ರೀಗಳು ಕಣ್ಣೀರಿಟ್ಟಿದ್ದಾರೆ.

Translate »