ನಾಡಹಬ್ಬದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆಆರೋಗ್ಯ ಮೇಳ
ಮೈಸೂರು

ನಾಡಹಬ್ಬದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆಆರೋಗ್ಯ ಮೇಳ

September 5, 2022

ಮೈಸೂರು,ಸೆ.4-ಕೊರೊನಾ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದ ಸರಳ ಹಾಗೂ ಸಾಂಪ್ರದಾಯಿಕಆಚರಣೆಗಷ್ಟೇ ಸೀಮಿತ ವಾಗಿದ್ದ ನಾಡಹಬ್ಬದಸರಾ ಮಹೋತ್ಸವ ಈ ಬಾರಿಅದ್ಧೂರಿಯಾಗಿಆಚರಿಸಲಾಗುತ್ತಿದ್ದು, ಕೊರೊನಾ ಭಯ ಹೋಗಲಾಡಿ ಸಲು ಜಿಲ್ಲೆಯಎಲ್ಲಾತಾಲೂಕು ಗಳಲ್ಲಿ ಇದೇ ಮೊದಲ ಬಾರಿಗೆ ನವರಾತ್ರಿ ವೇಳೆ ಆರೋಗ್ಯತಪಾಸಣಾ ಶಿಬಿರ ಆಯೋಜಿಸಲುಜಿಲ್ಲಾ ಡಳಿತ ಮುಂದಾಗಿದೆ. ಈ ಬಾರಿದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿರುವುದರಿಂದ ನಾಡಿನ ವಿವಿಧೆಡೆಯಿಂದಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿಗೆಆಗಮಿಸುತ್ತಿರುವುದರಿಂದಜನರಲ್ಲಿರುವಆರೋಗ್ಯದ ಭಯ ಹೋಗಲಾಡಿ ಸುವುದರೊಂದಿಗೆಆರೋಗ್ಯತಪಾಸಣೆ ಮಾಡುವ ನಿಟ್ಟಿನಲ್ಲಿ ಮೈಸೂರು ನಗರ ಸೇರಿದಂತೆಜಿಲ್ಲೆಯ 7 ತಾಲೂಕುಗಳಲ್ಲೂ ಸೆ.26ರಿಂದ ಅ.10ರವರೆಗೂ ಆರೋಗ್ಯ ಮೇಳ ನಡೆಸುವುದಕ್ಕೆಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ಕ್ರಮಕೈಗೊಂಡಿದ್ದು, ಚಿಕಿತ್ಸೆ ಹಾಗೂ ತಪಾಸಣೆಗಾಗಿ ಖಾಸಗಿ ಆಸ್ಪತ್ರೆಗಳ ನೆರವು ಪಡೆಯಲುಚಿಂತಿಸಲಾಗಿದೆ.

ಹೃದ್ರೋಗತಪಾಸಣೆಗೆ ಹೆಚ್ಚು ಆದ್ಯತೆ: ಜಿಲ್ಲಾಡಳಿತ ಹಾಗೂ ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆಸಲು ನಿರ್ಧರಿಸಿರುವ ಆರೋಗ್ಯ ಮೇಳದಲ್ಲಿ ಹೃದ್ರೋಗಕ್ಕೆ ಹೆಚ್ಚಿನಆದ್ಯತೆ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ 25 ವರ್ಷ ಮೇಲ್ಪಟ್ಟವರಿಗೆ ಹೃದಯಾಘಾತಉಂಟಾಗಿ ಮೃತ ಪಡುತ್ತಿರುವ ಹಿನ್ನೆಲೆಯಲ್ಲಿಆರೋಗ್ಯ ಮೇಳದಲ್ಲಿ ಹೃದ್ರೋಗತಪಾಸಣೆಗೆ ಹೆಚ್ಚಿನಆದ್ಯತೆ ನೀಡಲಾಗುತ್ತಿದೆ. 7 ತಾಲೂಕುಗಳ ಪೈಕಿ 6 ತಾಲೂಕುಗಳಲ್ಲೂ ಹೃದ್ರೋಗತಪಾಸಣೆ ಮಾಡಲು ನಿರ್ಧರಿಸಲಾಗಿದೆ. ಇದರೊಂದಿಗೆಕ್ಯಾನ್ಸರ್ ಸೇರಿದಂತೆಇನ್ನಿತರಆರೋಗ್ಯ ಸಮಸ್ಯೆಗಳ ಬಗ್ಗೆಯೂತಪಾಸಣೆ ಮಾಡುವ ಮೂಲಕ ದಸರಾ ಮಹೋತ್ಸವದಲ್ಲಿಜನರು ನಿರ್ಬಯವಾಗಿ ಪಾಲ್ಗೊಳ್ಳುವ ಸಂದೇಶ ನೀಡಲು ಜಿಲ್ಲಾಡಳಿತ ಮುಂದಾಗಿದೆ.

ಎಲ್ಲೆಲ್ಲಿ ಶಿಬಿರ: ಮೈಸೂರು ನಗರ ಸೇರಿದಂತೆಜಿಲ್ಲೆಯ 7 ತಾಲೂಕುಗಳಲ್ಲೂ ನಡೆಸುತ್ತಿರುವಆರೋಗ್ಯ ಮೇಳಕ್ಕೆ ಮೈಸೂರು ನಗರ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಸ್ಥಳ ಗುರುತಿಸಲಾಗಿದೆ. ಮೈಸೂರು ನಗರದಲ್ಲಿಇನ್ನು 2-3 ದಿನಗಳಲ್ಲಿ ಸ್ಥಳ ನಿಗಧಿ ಮಾಡ ಲಾಗುತ್ತದೆ. ಅದಕ್ಕಾಗಿ ಖಾಸಗಿ ಆಸ್ಪತ್ರೆಗಳ ಸಹಕಾರಕೋರಲಾಗಿದೆ. ಇದಕ್ಕಾಗಿ ಖಾಸಗಿ ಆಸ್ಪತ್ರೆಗಳು ಸಮ್ಮತಿಸಿದೆ. ಮೈಸೂರುತಾಲೂಕಿನಜನರಿಗಾಗಿ ಇಲವಾಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾವೇರಿ ಆಸ್ಪತ್ರೆಯ ಸಹಯೋಗದಲ್ಲಿ ಹೃದಯ ಖಾಯಿಲೆ ತಪಾಸಣಾ ಶಿಬಿರ, ಹುಣಸೂರು ಸಾರ್ವಜನಿಕಆಸ್ಪತ್ರೆಯಲ್ಲಿ ಅಪೋಲೋ ಆಸ್ಪತ್ರೆ ನೆರವಿನಲ್ಲಿ ಹೃದಯದಆರೋಗ್ಯತಪಾಸಣೆ, ಟಿ.ನರಸೀಪುರ ತಾಲೂಕಿನ ಸಾರ್ವಜನಿಕಆಸ್ಪತ್ರೆಯಲ್ಲಿ ಸ್ಪಂದನಆಸ್ಪತ್ರೆ ನೆರವಿನೊಂದಿಗೆ ಹೃದಯತಪಾಸಣಾ ಮೇಳ, ಕೆ.ಆರ್.ನಗರತಾಲೂಕಿನ ಸಾರ್ವಜನಿಕಆಸ್ಪತ್ರೆಯಲ್ಲಿ ಮಣಿಪಾಲ್‍ಆಸ್ಪತ್ರೆಯ ನೆರವಿನೊಂದಿಗೆ ಹೃದಯತಪಾಸಣಾ ಮೇಳ, ಪಿರಿಯಾಪಟ್ಟಣತಾಲೂಕಿನ ಸಾರ್ವಜನಿಕಆಸ್ಪತ್ರೆಯಲ್ಲಿಕ್ಲಿಯರ್‍ಮೆಡಿಆಸ್ಪತ್ರೆಯ ಸಹಕಾರದಿಂದಕ್ಯಾನ್ಸರ್ ಖಾಯಿಲೆ ತಪಾಸಣಾ ಶಿಬಿರ, ನಂಜನಗೂಡುತಾಲೂಕು ಸಾರ್ವಜನಿಕಆಸ್ಪತ್ರೆಯಲ್ಲಿ ನಾರಾಯಣ ಹೃದಯಾಲಯದ ನೆರವಿನೊಂದಿಗೆ ಹೃದಯ ಸಂಬಂಧಿ ಖಾಯಿಲೆ ತಪಾಸಣಾ ಶಿಬಿರ, ಹೆಚ್.ಡಿ.ಕೋಟೆತಾಲೂಕಿನ ಸಾರ್ವಜನಿಕಆಸ್ಪತ್ರೆಯಲ್ಲಿ ಬೃಂದಾವನಆಸ್ಪತ್ರೆಯ ನೆರವಿನೊಂದಿಗೆ ಹೃದ್ರೋಗತಪಾಸಣಾ ಶಿಬಿರ ನಡೆಸಲುಕ್ರಮ ಕೈಗೊಳ್ಳಲಾಗಿದೆ.

ಜನರಆರೋಗ್ಯಕಾಪಾಡುವ ನಿಟ್ಟಿನಲ್ಲಿಆರೋಗ್ಯ ಮೇಳ:ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ಮಾತನಾಡಿ, ದಸರಾ ಮಹೋತ್ಸವದಲ್ಲಿಇದೇ ಮೊದಲ ಬಾರಿಗೆಜಿಲ್ಲೆಯಎಲ್ಲಾತಾಲೂಕು ಕೇಂದ್ರಗಳಲ್ಲೂ ಆರೋಗ್ಯ ಮೇಳ ನಡೆಸಲಾಗುತ್ತಿದೆ. ಜಿಲ್ಲಾಡಳಿತದ ಸೂಚನೆ ಮೇರೆಗೆ ಖಾಸಗಿ ಆಸ್ಪತ್ರೆಗಳ ಸಹಕಾರ ಪಡೆದುಆರೋಗ್ಯ ಮೇಳ ಆಯೋಜಿಸ ಲಾಗಿದೆ. ಯಾರಿಗಾದರೂತೀವ್ರತರನಾದಆರೋಗ್ಯ ಸಮಸ್ಯೆಕಂಡು ಬಂದರೆ, ಆರೋಗ್ಯಕರ್ನಾಟಕ ಸೇರಿದಂತೆ ಸರ್ಕಾರದಯಾವುದಾದರೂಕಾರ್ಯಕ್ರಮದೊಂದಿಗೆಚಿಕಿತ್ಸೆ ನೀಡುವುದಕ್ಕೆಕ್ರಮಕೈಗೊಳ್ಳಲಾಗಿದೆ. ಆರೋಗ್ಯ ಮೇಳದಲ್ಲಿ ಪ್ರಮುಖವಾಗಿ ಹೃದ್ರೋಗತಪಾಸಣೆಗೆ ಹೆಚ್ಚಿನ ಗಮನ ಹರಿಸಲಾಗುತ್ತದೆ. ಜನರ ಬೇಡಿಕೆಗೆಅನುಗುಣವಾಗಿ ಹೃದ್ರೋಗತಪಾಸಣೆಗೆ ಮೇಳ ನಡೆಸಲಾಗುತ್ತಿದೆ. ಇದರೊಂದಿಗೆಇನಿತರಆರೋಗ್ಯ ಸಮಸ್ಯೆಯ ಬಗ್ಗೆಯೂತಪಾಸಣೆ ಮಾಡಿಚಿಕಿತ್ಸೆ ನೀಡಲಾಗುತ್ತದೆ. ಜನರುಆರೋಗ್ಯ ಮೇಳದ ಸದುಪಯೋಗಪಡೆದುಕೊಳ್ಳಬೇಕು ಎಂದರು.

Translate »