ಮೈಸೂರು, ಸೆ.29(ವೈಡಿಎಸ್)- ಕಾಡಂಚಿನ ಗ್ರಾಮಗಳಲ್ಲಿ ಜನರ ಮೇಲೆ ದಾಳಿ ನಡೆಸುವ, ಬೆಳೆನಾಶ ಮಾಡುವ ಪುಂಡ ಆನೆಗಳನ್ನು ಸೆರೆ ಹಿಡಿದು ಒಂದೇ ತಿಂಗಳಲ್ಲಿ ಪಳಗಿಸುವುದೇ ಮಾವುತರ ಗುರಿ ಎಂದು ದಸರಾ ಮಹೋತ್ಸವದ ಕುಮ್ಕಿ ಆನೆ ಕಾವೇರಿಯ ಮಾವುತ ಡೋಬಿ ಅಭಿಪ್ರಾಯಪಟ್ಟಿದ್ದಾರೆ.
ವನ್ಯಜೀವಿ ಸಪ್ತಾಹ ಹಿನ್ನೆಲೆಯಲ್ಲಿ ಕರ್ನಾ ಟಕ ಅರಣ್ಯ ಇಲಾಖೆ ವನ್ಯಜೀವಿ ವಿಭಾ ಗವು ಏಷ್ಯನ್ ಎಲಿಫೆಂಟ್ ಸಪೋರ್ಟ್ ಸಂಸ್ಥೆ ಸಹಯೋಗದಲ್ಲಿ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಆನೆಗಳ ಪಾತ್ರ ವಿವರಿ ಸುವ `ಮೈಸೂರು ದಸರಾ ಆನೆಗಳು’ ಸರಣಿ ವೆಬಿನಾರ್‍ನ 7ನೇ ಸಂಚಿಕೆಯಲ್ಲಿ (ದುಬಾರೆ ಆನೆ ಶಿಬಿರ ಹಾಗೂ ದಸÀರೆ ಇತರೆ ಆನೆಗಳ ಕುರಿತು) ಮಾತನಾಡಿದ ಅವರು, ದುಬಾರೆ ಆನೆ ಕ್ಯಾಂಪ್‍ನಲ್ಲಿ ಸೆರೆ ಹಿಡಿದ ಪುಂಡಾನೆಯನ್ನು ಕ್ರಾಲ್‍ನಲ್ಲಿ ಇಟ್ಟು ಪಳಗಿಸಲಾಗುತ್ತದೆ ಎಂದರು.
ಹೊಸದಾಗಿ ಸೆರೆ ಹಿಡಿದ ಯಾವುದೇ ಆನೆಯನ್ನು ಒಂದೇ ತಿಂಗಳಲ್ಲಿ ಪಳಗಿಸಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂಬ ಛಲ ಎಲ್ಲಾ ಮಾವುತರಲ್ಲಿಯೂ ಇರುತ್ತದೆ. ದುಬಾರೆ ಕ್ಯಾಂಪ್‍ನ ಎಲ್ಲಾ ಮಾವುತರು ಸೆರೆ ಹಿಡಿದ ಆನೆ ಹಾಗೂ ಕ್ಯಾಂಪ್‍ನಲ್ಲಿರುವ ಹಳೆ ಆನೆಗಳ ಮೇಲೆ ಹೆಚ್ಚಿನ ಒಲವಿಟ್ಟು ಕಾಪಾಡಿಕೊಳ್ಳುತ್ತಿದ್ದಾರೆ. ಹಲವು ವರ್ಷ ಗಳಿಂದ ದಸರಾ ಮಹೋತ್ಸವದಲ್ಲಿ ಕಾವೇರಿ ಆನೆ ಪಾಲ್ಗೊಳ್ಳುತ್ತಿದ್ದು, ಯಾವುದೇ ಅಹಿತ ಕರ ಘಟನೆಗೆ ಆಸ್ಪದ ನೀಡದೆ ಎಲ್ಲರ ಪ್ರೀತಿ -ವಿಶ್ವಾಸ ಗಳಿಸಿದೆ ಎಂದು ತಿಳಿಸಿದರು.
ಡಿಆರ್‍ಎಫ್‍ಓ ರಂಜನ್ ಮಾತನಾಡಿ, ಬ್ರಿಟಿಷರ ಕಾಲದಲ್ಲಿ ಆರಂಭಿಸಿದ ದುಬಾರೆ ಆನೆ ಕ್ಯಾಂಪ್ ಅತ್ಯಂತ ಹಳೆಯದು. ಈ ಕ್ಯಾಂಪನ್ನು ಆನೆಗಳಿಗೆ ತರಬೇತಿ ನೀಡಲು (ಯುದ್ಧದಲ್ಲಿ) ಬಳಸಿಕೊಳ್ಳಲಾಗುತ್ತಿತ್ತು. ಇಂದಿನವರೆಗೂ ದುಬಾರೆ ಆನೆ ಕ್ಯಾಂಪ್ ಪುಂಡಾನೆಗಳ ತರಬೇತಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದೆ. ಈ ಕ್ಯಾಂಪ್ ಪ್ರವಾಸಿ ತಾಣವೂ ಆಗಿದ್ದು, ಆನೆಗಳಿಗೆ ಸಂಬಂ ಧಿಸಿದ ಶೈಕ್ಷಣಿಕ ಮಾಹಿತಿಯನ್ನು ಪ್ರವಾಸಿ ಗರಿಗೆ ನೀಡುವ ಮೂಲಕ ವನ್ಯಜೀವಿ ಸಂರಕ್ಷಣೆಯಲ್ಲಿ ತನ್ನದೇಯಾದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಆರ್‍ಎಫ್‍ಓ ಅನನ್ಯ ಕುಮಾರ್ ಮಾತ ನಾಡಿ, ವನ್ಯಜೀವಿ ಸಂರಕ್ಷಣೆಯಲ್ಲಿ ಮುಂದಿನ ಯುವ ಪೀಳಿಗೆಯ ಸಹಭಾಗಿತ್ವ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾ ರ್ಹತೆಗೆ ಅನುಗುಣವಾಗಿ ಅರಣ್ಯ ಇಲಾಖೆ ಸೇರಬೇಕು. ಐಎಫ್‍ಎಸ್, ಕೆಎಫ್‍ಎಸ್ ಸೇರಿ ವಿವಿಧ ಹುದ್ದೆ ಅಲಂಕರಿಸಬಹು ದಾಗಿದೆ. ಆನೆಗಣತಿ, ಹುಲಿಗಣತಿ, ಕಾಡ್ಗಿಚ್ಚು ನಂದಿಸುವುದಕ್ಕೆ ಇಲಾಖೆ ಸ್ವಯಂಸೇವಕ ರನ್ನು ಬಳಸಿಕೊಳ್ಳುತ್ತಿದೆ. ಯುವಕ-ಯುವತಿ ಯರು ಇಲಾಖೆಗೆ ಸ್ವಯಂಸೇವಕರಾಗಿ ಸೇವೆ ಸಲ್ಲಿಸುವ ಮೂಲಕ ವನ್ಯಜೀವಿ ಸಂರಕ್ಷಣೆಯಲ್ಲಿ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು. ಆನೆಗಳ ಪಾಲಕ ನಯಾಜ್ ಪಾಷಾ, ಆನೆಗಳಿಗೆ ಸನ್ಹೆ ಅಥವಾ ಸೂಚನೆ ಯನ್ನು ಹೇಗೆ ಅಭ್ಯಾಸ ಮಾಡಿಸುತ್ತೇವೆ ಎಂದು ಹೇಳಿ, ಪ್ರಾತ್ಯಕ್ಷಿಕೆ ನೀಡಿದರು. ಇದೇ ವೇಳೆ ಪಟ್ಟದ ಆನೆ ವಿಕ್ರಮ, ದಸರಾ ಆನೆಗಳಾದ ಹರ್ಷ, ಗೋಪಿ, ಕಾವೇರಿ ಬಗ್ಗೆ ವಿವರಿಸಿದರು. ದುಬಾರೆ ಕ್ಯಾಂಪ್‍ನ 31 ಆನೆಗಳ ದೈನಂ ದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವ ವಿಡಿಯೋ ತುಣುಕನ್ನು ಪ್ರಸಾರ ಮಾಡಲಾಯಿತು.