ಮೈಸೂರು ಕುಂಬಾರಕೊಪ್ಪಲು ಮುಖ್ಯ ರಸ್ತೆಗೆ ಅಭಿವೃದ್ಧಿ ಭಾಗ್ಯ
ಮೈಸೂರು

ಮೈಸೂರು ಕುಂಬಾರಕೊಪ್ಪಲು ಮುಖ್ಯ ರಸ್ತೆಗೆ ಅಭಿವೃದ್ಧಿ ಭಾಗ್ಯ

September 30, 2020

ಮೈಸೂರು, ಸೆ.29(ಎಸ್‍ಬಿಡಿ)- ಮೈಸೂರಿನ ಕುಂಬಾರಕೊಪ್ಪಲು ಮುಖ್ಯರಸ್ತೆಗೆ ಅಂತೂ ಅಭಿವೃದ್ಧಿ ಭಾಗ್ಯ ಕಲ್ಪಿತವಾಗಿದೆ. ಹಲವು ವರ್ಷಗಳಿಂದ ದುರ್ಗಮ ಹಾದಿ ಯಂತಿದ್ದ ಈ ರಸ್ತೆಯನ್ನು 3.10 ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಸೂರ್ಯಬೇಕರಿ ಬಳಿಯಿಂದ ಕೆಆರ್‍ಎಸ್ ಮುಖ್ಯರಸ್ತೆವರೆಗೆ ಡಾಂಬರೀಕರಣ ಮಾಡಲಾಗು ತ್ತಿದೆ. ಕುಂಬಾರಕೊಪ್ಪಲು ಮುಖ್ಯರಸ್ತೆ ಕಿರಿದಾಗಿರುವ ಕಾರಣ ಇಕ್ಕೆಲಗಳಲ್ಲಿ ಮನೆಗಳ ಮುಂದಿರುವ ಜಗುಲಿಗಳನ್ನು ನಿವಾಸಿಗಳ ಅನುಮತಿಯೊಂದಿಗೆ ತೆರವುಗೊಳಿಸಿ, ಆ ಸ್ಥಳದಲ್ಲಿ ಚರಂಡಿ ನಿರ್ಮಿಸಲಾಗುತ್ತಿದೆ. ಇದರಿಂದ ರಸ್ತೆಯನ್ನೂ ಸ್ವಲ್ಪ ವಿಸ್ತರಿಸಬಹುದಾಗಿದೆ.

ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಮಂಗಳವಾರ ಕುಂಬಾರಕೊಪ್ಪಲು ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರಲ್ಲದೆ, ನಮ್ಮ ಕ್ಷೇತ್ರದಲ್ಲಿ ಕುಂಬಾರ ಕೊಪ್ಪಲು, ಮಂಚೇಗೌಡನ ಕೊಪ್ಪಲು, ಒಂಟಿಕೊಪ್ಪಲು, ಪಡುವಾರಹಳ್ಳಿ, ಮೇಟಗಳ್ಳಿ ಸೇರಿದಂತೆ ಹತ್ತಾರು ಹಳೆಯ ಗ್ರಾಮಗಳಿವೆ. ಈ ಗ್ರಾಮಗಳ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಚಾಮರಾಜ ಕ್ಷೇತ್ರದ ಅಧ್ಯಕ್ಷ ಸೋಮಶೇಖರ ರಾಜು, ಉಪಾಧ್ಯಕ್ಷÀ ಕುಮಾರ್‍ಗೌಡ, ಪ್ರಧಾನ ಕಾರ್ಯದರ್ಶಿ ಪುನೀತ್, ಯುವ ಮೋರ್ಚಾದ ಪ್ರಮೋದ್, ಜನ ಸ್ನೇಹಿ ಕೇಂದ್ರದ ನವೀನ್, ನರಸಿಂಹ, ಭೈರಪ ಮತ್ತಿತರರಿದ್ದರು.

 

 

Translate »