ಜಿಲ್ಲಾ ಹಂತದಲ್ಲೇ ದ್ವಿತೀಯ ಪಿಯು ಮೌಲ್ಯಮಾಪನ: ಮರಿತಿಬ್ಬೇಗೌಡ ಆಗ್ರಹ
ಮೈಸೂರು

ಜಿಲ್ಲಾ ಹಂತದಲ್ಲೇ ದ್ವಿತೀಯ ಪಿಯು ಮೌಲ್ಯಮಾಪನ: ಮರಿತಿಬ್ಬೇಗೌಡ ಆಗ್ರಹ

May 25, 2020

ಮೈಸೂರು, ಮೇ 24(ಎಸ್‍ಬಿಡಿ)- ದ್ವಿತೀಯ ಪಿಯು ಅರ್ಥಶಾಸ್ತ್ರ ಉತ್ತರ ಪತ್ರಿಕೆ ಮೌಲ್ಯಮಾಪನ ಮಾದರಿಯಲ್ಲೇ ಎಲ್ಲಾ ವಿಷಯ ಗಳ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯವನ್ನೂ ಜಿಲ್ಲಾ ಹಂತದಲ್ಲೇ ನಡೆಸಬೇಕೆಂದು ವಿಧಾನ ಪರಿಷತ್ ಸದಸ್ಯ ಮರಿ ತಿಬ್ಬೇಗೌಡ ಆಗ್ರಹಿಸಿದ್ದಾರೆ.

ಈವರೆಗೆ ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ವಿಭಾಗೀಯ ಮಟ್ಟದಲ್ಲಿ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಪ್ರಾಯೋಗಿಕ ವಾಗಿ ಅರ್ಥಶಾಸ್ತ್ರ ಪತ್ರಿಕೆ ಮೌಲ್ಯಮಾಪನ ಕಾರ್ಯ ವನ್ನು 10-12 ಜಿಲ್ಲೆಗಳಲ್ಲಿ ನಡೆಸಿರುವುದು ಸ್ವಾಗ ತಾರ್ಹ. ಆದರೆ ಕಲಾ ಮತ್ತು ವಾಣಿಜ್ಯ ವಿಭಾಗದ ಉಳಿದ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯವನ್ನು ಹಿಂದಿನಂತೆ ವಿಭಾಗೀಯ ಮಟ್ಟದಲ್ಲೇ ನಡೆಸಲು ಮುಂದಾಗಿದ್ದಾರೆ. ಇದರಿಂದ ಮೌಲ್ಯಮಾಪಕರಿಗೆ ತುಂಬಾ ತೊಂದರೆ. ವಿಭಾ ಗೀಯ ಮಟ್ಟದ ಕೇಂದ್ರದಲ್ಲಿ ಮೌಲ್ಯಮಾಪನ ನಡೆದರೆ ಆ ವ್ಯಾಪ್ತಿಯ ನಾಲ್ಕೈದು ಜಿಲ್ಲೆಗಳಿಂದ ಮೌಲ್ಯಮಾಪಕರು ಬರಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಬೇರೆ ಜಿಲ್ಲೆಗಳಿಂದ ಪ್ರಯಾಣಿಸು ವುದು ಕಷ್ಟ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಜ್ಞಾನ ವಿಭಾಗದ ಉತ್ತರ ಪತ್ರಿಕೆಗಳ ಮೌಲ್ಯ ಮಾಪನವನ್ನು ಈವರೆಗೂ ಬೆಂಗಳೂರು ಕೇಂದ್ರ ವೊಂದರಲ್ಲೇ ನಡೆಸಲಾಗಿದೆ. ವಿವಿಧ ಜಿಲ್ಲೆಗಳಿಂದ ಮೌಲ್ಯಮಾಪನಕ್ಕೆ ತೆರಳುವ ಉಪನ್ಯಾಸಕರಿಗೆ ಈ ಬಾರಿ ಊಟ-ವಸತಿಗೂ ಸಮಸ್ಯೆಯಾಗಲಿದೆ. ಕೊರೊನಾ ಹಿನ್ನೆಲೆಯಲ್ಲಿ ಹೋಟೆಲ್, ಲಾಡ್ಜ್, ಹಾಸ್ಟೆಲ್‍ಗಳಲ್ಲಿ ಉಳಿದುಕೊಳ್ಳಲು ಅವಕಾಶವಾಗದು.  10 ದಿನಗಳ ಕಾಲ ಬೆಂಗಳೂರಿನಲ್ಲೇ ಉಳಿದು, ಮೌಲ್ಯ ಮಾಪನ ಕಾರ್ಯದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಹಾಗಾಗಿ ಜಿಲ್ಲಾ ಹಂತದಲ್ಲಿ ಸಾಧ್ಯವಾಗದಿದ್ದರೂ ವಿಭಾಗೀಯ ಮಟ್ಟದಲ್ಲಾದರೂ ಮೌಲ್ಯಮಾಪನ ನಡೆಸಲು ಕ್ರಮ ಕೈಗೊಳ್ಳಬೇಕು. ಮೌಲ್ಯಮಾಪನ ಕಾರ್ಯದಲ್ಲಿ ಏನಾದರೂ ಅಕ್ರಮ ನಡೆಯುತ್ತದೆ ಎಂಬ ಅನುಮಾನವಿದ್ದರೆ ಉತ್ತರ ಪತ್ರಿಕೆಗಳನ್ನು `ಡಿ-ಕೋಡ್’ ಮಾಡಿಸಿ, ನಂತರ ಮೌಲ್ಯಮಾಪನಕ್ಕೆ ನೀಡಬಹುದು. ಹೀಗಾದರೆ ತಮ್ಮದೇ ವಿದ್ಯಾರ್ಥಿಯ ಉತ್ತರ ಪತ್ರಿಕೆ ಸಿಕ್ಕಿದರೂ ಉಪನ್ಯಾಸಕರು ಗುರುತಿಸಲು ಸಾಧ್ಯವಾಗುವುದಿಲ್ಲ. ಈಗಾಗಲೇ ಸಿಬಿಎಸ್‍ಇ 10ನೇ ತರಗತಿ ಉತ್ತರ ಪತ್ರಿಕೆಗಳನ್ನು `ಡಿ-ಕೋಡ್’ ಮಾಡಿ, ಶಿಕ್ಷಕರಿಗೆ ಒಪ್ಪಿಸಿ, ಮನೆಯಲ್ಲೇ ಮೌಲ್ಯಮಾಪನ ಮಾಡಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಲ್ಕು ವಿಭಾಗಗಳ ಬದಲಾಗಿ 10-12 ಜಿಲ್ಲಾ ಕೇಂದ್ರಗಳಲ್ಲಿ ಸ್ಥಳೀಯ ಉಪನ್ಯಾಸಕರನ್ನೇ ಬಳಸಿ ಕೊಂಡು ಮೌಲ್ಯಮಾಪನ ಮಾಡಿಸಿದರೆ 3-4 ದಿನ ಗಳಲ್ಲಿ ಕೆಲಸ ಮುಗಿಯುತ್ತದೆ. ಇಲಾಖೆಯ ವೆಚ್ಚವೂ ಕಡಿಮೆಯಾಗುತ್ತದೆ. ಉಪನ್ಯಾಸಕರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಒಳ್ಳೆಯದು. ವಿಶೇಷಚೇತ ನರು, ನಿವೃತ್ತಿ ಅಂಚಿನಲ್ಲಿರುವವರು, ಗರ್ಭಿಣಿಯರು, ಪುಟ್ಟ ಮಕ್ಕಳಿರುವ ಉಪನ್ಯಾಸಕಿಯರಿಗೆ ಮೌಲ್ಯ ಮಾಪನ ಕಾರ್ಯದಿಂದ ವಿನಾಯ್ತಿ ನೀಡಬೇಕು. ಮೌಲ್ಯಮಾಪನ ಕೇಂದ್ರಗಳಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರಲ್ಲಿ ಒತ್ತಾಯಿಸಿದ್ದಾರೆ.

 

 

Translate »