ಮೈಸೂರು, ಮೇ 26(ಎಂಕೆ)- ಜಿಲ್ಲಾದ್ಯಂತ ಆಂಬುಲೆನ್ಸ್ ಸೇವೆ ಮತ್ತಷ್ಟು ಚುರುಕುಗೊಳಿಸಬೇಕೆಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಮ್ಮ ಕಚೇರಿಯಲ್ಲಿ ಬುಧವಾರ ಸಭೆ ನಡೆಸಿದ ಅವರು, ಆಂಬುಲೆನ್ಸ್ ಸೇವೆ ಬಗ್ಗೆ ದೂರು ಬರುತ್ತಿವೆ. ಈ ಸೇವೆಯನ್ನು ಮತ್ತಷ್ಟು ಬಲಪಡಿಸಲು ಆಂಬುಲೆನ್ಸ್ ವಿಭಾಗಕ್ಕೆ ಪ್ರತ್ಯೇಕ ನೋಡಲ್ ಅಧಿಕಾರಿ ನೇಮಿಸ ಲಾಗಿದೆ. ಆಂಬುಲೆನ್ಸ್ ಸೇವೆಯನ್ನು ಪಡೆ ಯಲು ಜಿಲ್ಲಾ ಕೋವಿಡ್ ವಾರ್ ರೂಂ ಸಹಾಯವಾಣಿ 0821-2424111ಗೆ ಕರೆ ಮಾಡಿ, ಯಾವುದೇ ಸಮಯದಲ್ಲಾದರೂ ಸೇವೆ ಪಡೆಯ ಬಹುದು ಎಂದರು.
ಜಿಲ್ಲಾದ್ಯಂತ ಆದ್ಯತಾ ವಲಯದ 22 ಕೆಟಗರಿಯ ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುತ್ತಿದ್ದು, ಈ ಕಾರ್ಯವನ್ನು ಶನಿವಾರದೊಳಗೆ ಪೂರ್ಣಗೊಳಿ ಸಬೇಕು ಎಂದು ಗಡುವು ವಿಧಿಸಿದರು.
ವ್ಯಾಕ್ಸಿನ್ ಪಡೆಯಲು ಯಾರಿಗೂ ತೊಂದರೆ ಆಗಬಾರದು. ಪ್ರಾಥಮಿಕ ಆರೋಗ್ಯ ಕೇಂದ್ರ ಗಳಿಗೆ ವ್ಯಾಕ್ಸಿನ್ ನೀಡುವ ಕಾರ್ಯಕ್ಕೆ ಗೈರು ಹಾಜರಾಗುವ ನರ್ಸ್‍ಗಳಿಗೆ ನೋಟಿಸ್ ನೀಡಿ ಎಂದು ಡಿಸಿ ನಿರ್ದೇಶನ ನೀಡಿದರು.