ಗಣಪತಿ ಸಚ್ಚಿದಾನಂದ ಶ್ರೀಗಳ ಹುಟ್ಟುಹಬ್ಬ: ಸಾರ್ವಜನಿಕರಿಗೆ ಊಟ, ಸಿಹಿ ವಿತರಣೆ
ಮೈಸೂರು

ಗಣಪತಿ ಸಚ್ಚಿದಾನಂದ ಶ್ರೀಗಳ ಹುಟ್ಟುಹಬ್ಬ: ಸಾರ್ವಜನಿಕರಿಗೆ ಊಟ, ಸಿಹಿ ವಿತರಣೆ

May 27, 2021

ಮೈಸೂರು, ಮೇ 26-ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 79ನೇ ಹುಟ್ಟುಹಬ್ಬದ ಅಂಗವಾಗಿ ವಾರ್ಡ್ ನಂಬರ್ 55ರ ಮೇದರಕೇರಿಯಲ್ಲಿ ದತ್ತ ಪೀಠದ ವತಿ ಯಿಂದ ಊಟ, ಸಿಹಿಯನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಗರ ಪಾಲಿಕೆ ಸದಸ್ಯ ಮಾ ವಿ ರಾಮಪ್ರಸಾದ್ ಅವರು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಯವರು ಮೈಸೂರಿಗೆ ಒಂದು ಶಕ್ತಿಯಾಗಿ ದ್ದಾರೆ ಆಶ್ರಮದ ವತಿಯಿಂದ ಲಾಕ್‍ಡೌನ್ ಆರಂಭವಾದ ದಿನದಿಂದ ನಿತ್ಯ 3 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗು ತ್ತಿದೆ. ಅಲ್ಲದೆ ಸ್ವಾಮೀಜಿಯವರು ಬಡವರ ಬಗ್ಗೆ ಕಾಳಜಿ ಉಳ್ಳವರಾಗಿದ್ದು ಮಹಿಳೆಯ ರಿಗೆ ಹೊಲಿಗೆ ಯಂತ್ರ ಅಂಗವಿಕಲರಿಗೆ ವ್ಹೀಲ್ ಚೇರ್, ಕಲಾವಿದರಿಗೆ ಪೆÇ್ರೀತ್ಸಾಹ ಧನ ನೀಡು ವುದು ಸೇರಿದಂತೆ ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿನಯ್ ಬಾಬು, ಗೋವರ್ಧನ್ , ಶೋಧನ್, ಸಿ ಸಂದೀಪ್, ಶಿವಕುಮಾರ್ ಮುಂತಾದವರು ಭಾಗವಹಿಸಿದ್ದರು.

Translate »