ದೋಷಪೂರಿತ ಮೀಟರ್: 24 ಆಟೋಗಳಿಗೆ ದಂಡ
ಮೈಸೂರು

ದೋಷಪೂರಿತ ಮೀಟರ್: 24 ಆಟೋಗಳಿಗೆ ದಂಡ

August 2, 2018

ಮೈಸೂರು: ದೇವರಾಜ ಸಂಚಾರ ಪೊಲೀಸ್ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಜಂಟಿಯಾಗಿ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ, ದೋಷಪೂರಿತ ಮೀಟರ್ ಅಳವಡಿಸಿ ವಂಚಿಸು ತ್ತಿದ್ದ 24 ಆಟೋ ರಿಕ್ಷಾಗಳ ವಿರುದ್ಧ ಪ್ರಕರಣ ದಾಖಲಿಸಿ 12 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ. ಮಂಗಳವಾರ ಮಧ್ಯಾಹ್ನ ಆಟೋ ತಪಾಸಣೆ ನಡೆಸುತ್ತಿದ್ದ ವೇಳೆ ದೋಷಪೂರಿತ ಮತ್ತು ನವೀಕರಣ ಮಾಡದ ಮೀಟರ್ ಅಳವಡಿಸಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆಟೋ ರಿಕ್ಷಾಗಳ ಚಾಲಕರಿಗೆ 500 ರೂ. ದಂಡ ವಿಧಿಸಲಾಯಿತು. ಮಕ್ಕಾಜಿ ಚೌಕ, ಗಾಂಧೀ ವೃತ್ತ ಮತ್ತು ಬಿ.ಎನ್.ರಸ್ತೆಯ ಪ್ರೀಪೆಡ್ ಆಟೋ ನಿಲ್ದಾಣಗಳಲ್ಲಿ ಪೊಲೀಸರು ತಪಾಸಣೆ ನಡೆಸಿದರು. ಕೆಲವು ಆಟೋಗಳಿಗೆ ಮಾತ್ರ ಹೊಸ ಮೀಟರ್ ಅಳವಡಿಸಲಾಗಿದ್ದು, ಬಹುತೇಕ ಆಟೋಗಳಲ್ಲಿ ಹಳೆಯ ಮೀಟರ್ ಅನ್ನೇ ಬಳಸುತ್ತಿರುವುದು ಕಂಡು ಬಂತು. ಇನ್ನೂ ಕೆಲವು ಆಟೋಗಳಲ್ಲಿ ಮೀಟರ್‍ಗಳೇ ಇರಲಿಲ್ಲ.

ಈ ವೇಳೆ ಆಟೋಗಳ ಮೀಟರ್‍ಗಳನ್ನು ವರ್ಷಕ್ಕೊಮ್ಮೆ ನವೀಕರಣ ಮಾಡಿಸಿಕೊಳ್ಳಬೇಕು. ದೋಷಪೂರಿತ ಮೀಟರ್‍ಗಳ ನವೀಕರಣಕ್ಕೆ ವಾರದ ಗಡುವು ನೀಡಲಾಗುತ್ತಿದೆ. ಇಲ್ಲವಾದಲ್ಲಿ ಪರಿಶೀಲನೆ ವೇಳೆ ಮತ್ತೊಮ್ಮೆ ಸಿಕ್ಕಿಬಿದ್ದರೆ 500 ದಂಡ ತೆರಬೇಕಾಗುತ್ತದೆ ಎಂದು ಕಾನೂನು ಮಾಪನ ಶಾಸ್ತ್ರ ಇಲಾಖೆ ಇನ್ಸ್‍ಪೆಕ್ಟರ್ ಕೆ.ಎಂ.ಮಹದೇವಸ್ವಾಮಿ ಎಚ್ಚರಿಕೆ ನೀಡಿದ

Translate »