ಮಲೆನಾಡ ಮಡಿಲಲ್ಲಿ `ಮಾಲ್ಗುಡಿ ಡೇಸ್’ ಮ್ಯೂಸಿಯಂ
ಮೈಸೂರು

ಮಲೆನಾಡ ಮಡಿಲಲ್ಲಿ `ಮಾಲ್ಗುಡಿ ಡೇಸ್’ ಮ್ಯೂಸಿಯಂ

August 9, 2020

ಮೈಸೂರು, ಆ.8 (ಪಿಎಂ)- ಇಂಗ್ಲಿಷ್‍ನ ಖ್ಯಾತ ಕಾದಂಬರಿಕಾರ ಆರ್.ಕೆ.ನಾರಾಯಣ್ ಅವರ `ಮಾಲ್ಗುಡಿ ಡೇಸ್’, ಅದೇ ಶೀರ್ಷಿಕೆಯಡಿ 1980ರ ದಶಕದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಧಾರಾವಾಹಿಯಾಗಿ ಮೂಡಿ ಬಂದು ಮನೆ ಮಾತಾಗಿತ್ತು.

ಕನ್ನಡ ಚಲನಚಿತ್ರ ರಂಗದಲ್ಲಿ ನಾಯಕ ನಟ ಮಾತ್ರವಲ್ಲದೆ, ನಿರ್ದೇಶನದಲ್ಲಿ ವಿಶಿ ಷ್ಟತೆಗೆ ಹೆಸರಾಗಿದ್ದ ಶಂಕರ್ ನಾಗ್ ನಿದೇ ರ್ಶನದಲ್ಲಿ ತೆರೆಕಂಡು ದೂರದರ್ಶನದಲ್ಲಿ ತನ್ನದೇ ಛಾಪು ಮೂಡಿಸಿದ್ದ ಮಾಲ್ಗುಡಿ ಡೇಸ್‍ನ ಹಲವು ದೃಶ್ಯಗಳ ಚಿತ್ರೀಕರಣಕ್ಕೆ ವೇದಿಕೆಯಾಗಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮದ ಹಳೇ ರೈಲ್ವೆ ನಿಲ್ದಾಣ.

ಈ ರೈಲ್ವೆ ನಿಲ್ದಾಣದಲ್ಲಿ ಧಾರಾವಾಹಿಗೆ ಅಗತ್ಯವಿರುವ ರೈಲ್ವೆ ನಿಲ್ದಾಣ ಸನ್ನಿವೇಶದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಧಾರಾ ವಾಹಿ ಉದ್ದಕ್ಕೂ ರೈಲ್ವೆ ನಿಲ್ದಾಣದ ದೃಶ್ಯ ಗಳು ಪ್ರಧಾನವಾಗಿ ಕಾಣಿಸಿಕೊಳ್ಳಲಿವೆ. ಧಾರಾವಾಹಿಯಲ್ಲಿ `ಆಗುಂಬೆ’ ಮಾಲ್ಗುಡಿ ಗ್ರಾಮವಾಗಿ ಮೂಡಿಬಂದಿದ್ದರೆ, ಅದರ ರೈಲ್ವೆ ನಿಲ್ದಾಣವಾಗಿ ಅರಸಾಳು ಹಳೇ ನಿಲ್ದಾಣ ಕಾಣಿಸಿಕೊಂಡಿದೆ.

ಬೆಳಗಾವಿಯಿಂದ ವರ್ಚುವಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರು ಶನಿ ವಾರ ಮಾಲ್ಗುಡಿ ಮ್ಯೂಸಿಯಂ ಉದ್ಘಾಟಿಸಿ ದರು. ಅಲ್ಲದೆ, ಶಿವಮೊಗ್ಗ ರೈಲ್ವೆ ನಿಲ್ದಾಣ ದಲ್ಲಿ ಎರಡು ಲಿಫ್ಟ್‍ಗಳನ್ನೂ ಆನ್‍ಲೈನ್ ಮೂಲಕವೇ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಭಾರ ತೀಯ ರೈಲ್ವೆಯು ದೇಶದ ಜನತೆಯ ಜೀವನ ಭಾಗವಾಗಿದೆ. ಪ್ರಸ್ತುತ ಕೊರೊನಾ ವೈರಾಣು ಬಿಕ್ಕಟ್ಟಿನ ನಡುವೆ ಜನತೆಯ ಅಗತ್ಯತೆ ಪೂರೈ ಸಲು 24 ಗಂಟೆಯೂ ರೈಲ್ವೆ ಶ್ರಮಿಸುತ್ತಿದೆ. ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರದ ಅಗತ್ಯ ಸಹಕಾರ ಪಡೆಯುವಲ್ಲಿ ಶಿವಮೊಗ್ಗ ಸಂಸದರು ಯಶಸ್ವಿಯಾಗಿದ್ದಾರೆ. ಮತ್ತಷ್ಟು ಯೋಜನೆಗಳನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರದ ಕೊಡುಗೆ ಮುಖ್ಯ ಎಂದು ಹೇಳಿದರು.

ಮೈಸೂರಿನಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣ ಗರ್ಗ್ ಮಾತ ನಾಡಿ, ಶಿವಮೊಗ್ಗ ರೈಲ್ವೆ ವ್ಯಾಪ್ತಿಯಲ್ಲಿ 2.5 ಕೋಟಿ ರೂ. ಮೌಲ್ಯದ ಪ್ರಯಾಣಿ ಕರ ಸೌಲಭ್ಯ ಕಾರ್ಯ ಪೂರ್ಣಗೊಳಿಸ ಲಾಗಿದೆ. ಇದು ಮೈಸೂರು ವಿಭಾಗವು ಹೆಮ್ಮೆ ಪಡುವ ವಿಚಾರ. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ 11,500ಕ್ಕೂ ಹೆಚ್ಚು ಪ್ರಯಾಣಿ ಕರ ಅನುಕೂಲಕ್ಕಾಗಿ ಪ್ಲಾಟ್‍ಫಾರ್ಮ್ ಗಳಿಗೆ ಸಂಪರ್ಕ ಕಲ್ಪಿಸುವ 2 ಹೆಚ್ಚಿನ ಕ್ಷಮತೆ ಯುಳ್ಳ ಪ್ರಯಾಣಿಕರ ಲಿಫ್ಟ್‍ಗಳನ್ನು ಒದಗಿ ಸಲಾಗಿದೆ. 2019ರ ಸೆಪ್ಟೆಂಬರ್‍ನಲ್ಲಿ 1.05 ಕೋಟಿ ರೂ. ವೆಚ್ಚದಲ್ಲಿ ಪ್ರಸ್ತಾಪಿಸಲಾದ ಯೋಜನೆ ಇದು. ಈ ಸೌಲಭ್ಯವು ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ಹೆಚ್ಚು ಪ್ರಯೋಜನಕಾರಿ ಎಂದರು.

ಅರಸಾಳು ಹೊಸ ರೈಲ್ವೆ ನಿಲ್ದಾಣದಲ್ಲಿ 1.3 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮ ಗಾರಿ ಪೂರ್ಣಗೊಂಡಿವೆ. ಪ್ಲಾಟ್‍ಫಾರ್ಮ್, ಹೆಚ್ಚುವರಿ ಕುಡಿಯುವ ನೀರಿನ ಘಟಕಗಳು, ನೀರಿನ ಬೋರ್‍ವೆಲ್ ಮತ್ತು ಶೌಚಾ ಲಯಗಳು ಸೇರಿದಂತೆ ಹಲವು ಸೌಲಭ್ಯ ಗಳ ಸಂಬಂಧ ಕಾಮಗಾರಿ ಮುಗಿದಿದೆ. ರೈಲು ಸೇವೆಗಳು ಪುನರಾರಂಭ ಆಗುತ್ತಿ ದ್ದಂತೆ ಅರಸಾಳು ಹೊಸ ನಿಲ್ದಾಣದಲ್ಲಿ ಹೆಚ್ಚುವರಿ ಎರಡು ರೈಲುಗಳ ನಿಲುಗಡೆಗೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಶಿವಮೊಗ್ಗ ವ್ಯಾಪ್ತಿಯಲ್ಲಿ ವಿಶೇಷವಾಗಿ ಕುಮ್ಸಿ, ಆನಂದಪುರಂ ಮತ್ತು ಸಾಗರದಲ್ಲಿ ಇತರ ಕಾಮಗಾರಿಗಳನ್ನು ಪೂರ್ಣಗೊಳಿ ಸಲು ರಾಜ್ಯ ಸರ್ಕಾರದ ಅನುದಾನ ಪಡೆ ಯಲು ಶಿವಮೊಗ್ಗದ ಸಂಸದರು ನೆರ ವಾಗಬೇಕೆಂದು ಮನವಿ ಮಾಡಿದರು.

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, `ಮ್ಯೂಸಿಯಂ ಮಾಲ್ಗುಡಿ’ ಉದ್ಘಾಟನೆಯಿಂದ ಇಲ್ಲಿನ ಪ್ರವಾಸೋ ದ್ಯಮದಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗಲಿದೆ. ಇದಕ್ಕಾಗಿ ಸುರೇಶ್ ಅಂಗಡಿ ಅವರಿಗೆ ಧನ್ಯವಾದ ತಿಳಿಸಿದರಲ್ಲದೆ, ಕೋಚಿಂಗ್ ಟರ್ಮಿನಲ್ ಡಿಪೆÇೀ, ಕರ್ನಾಟಕದ ವಿವಿಧ ಭಾಗಗಳನ್ನು ಸಂಪರ್ಕಿ ಸುವ ಅನೇಕ ಹೊಸ ಮಾರ್ಗಗಳು ಸೇರಿ ದಂತೆ ಈ ಪ್ರದೇಶಕ್ಕೆ ವಿವಿಧ ಹೊಸ ಅಭಿವೃದ್ಧಿ ಯೋಜನೆಗಳನ್ನು ಮಂಜೂರು ಮಾಡಿರು ವುದಕ್ಕಾಗಿ ರೈಲ್ವೆ ಸಚಿವ ಪಿಯೂಶ್ ಗೋಯಲ್ ಮತ್ತು ರಾಜ್ಯ ಖಾತೆ ಸಚಿವ ರಿಗೆ ಧನ್ಯವಾದ ಅರ್ಪಿಸಿದರು.

ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿ ಸಲು ರಾಜ್ಯ ಸರ್ಕಾರದ ಆರ್ಥಿಕ ನೆರವು ಪಡೆಯಲಾಗುವುದು. ಶಿವಮೊಗ್ಗ ನಿಲ್ದಾಣ ದಲ್ಲಿ ಲಿಫ್ಟ್‍ಗಳನ್ನು ಒದಗಿಸಿದಕ್ಕೆ ಮತ್ತು ರಿಂಗ್ ರಸ್ತೆಗಾಗಿ ಶಿವಮೊಗ್ಗ ರೈಲ್ವೆ ನಿಲ್ದಾ ಣದ ಮುಂಭಾಗದಲ್ಲಿರುವ ಭೂಮಿ ಸುಗಮಗೊಳಿಸಿರುವುದಕ್ಕೆ ಪ್ರಧಾನ ವ್ಯವ ಸ್ಥಾಪಕರು ಮತ್ತು ವಿಭಾಗೀಯ ವ್ಯವ ಸ್ಥಾಪಕರಿಗೆ ಧನ್ಯವಾದ ತಿಳಿಸಿದರು.

ನೈಋತ್ಯ ರೈಲ್ವೆಯ ಪ್ರಧಾನ ವ್ಯವ ಸ್ಥಾಪಕರಾದ ಎ.ಕೆ.ಸಿಂಗ್ (ಹುಬ್ಬಳ್ಳಿ ಯಿಂದ ಭಾಗಿ), ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಪ್ರಿಯಾ ಶೆಟ್ಟಿ, ವಿಭಾಗದ ಹೆಚ್ಚುವರಿ ವ್ಯವಸ್ಥಾಪಕ ಎ.ದೇವ ಸಹಾಯಂ ಮತ್ತಿತರರು ಪಾಲ್ಗೊಂಡಿದ್ದರು.

Translate »