ಕೋಯಿಕೋಡ್, ಆ.8-ಕೇರಳದ ಕರೀಪುರ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪತನವಾದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 18 ಮಂದಿ ಮೃತಪಟ್ಟಿ ದ್ದಾರೆ ಎಂದು ಅಧಿಕೃತ ಪ್ರಕಟಣೆ ಹೊರ ಬಿದ್ದಿದ್ದು, ಈ ವಿಮಾನದ ಕಪ್ಪು ಪೆಟ್ಟಿಗೆ (ಬ್ಲಾಕ್ ಬಾಕ್ಸ್) ಅನ್ನು ಅಧಿಕಾರಿಗಳು ವಶಪಡಿಸಿಕೊಂಡು ತನಿಖೆ ಆರಂಭಿಸಿದೆ.
ಡಿಜಿಸಿಎ, ಎಎಐಬಿ ಮತ್ತು ವಿಮಾನ ಸುರಕ್ಷತಾ ವಿಭಾ ಗದ ಅಧಿಕಾರಿಗಳು ಈಗಾಗಲೇ ಕರೀಪುರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ವಿಮಾನದ ದಾಖಲೆಗಳನ್ನು ಡಿಜಿಟಲ್ ಮೂಲಕ ದಾಖಲಿಸಿಕೊಳ್ಳುವ ಕಪ್ಪು ಪೆಟ್ಟಿಗೆ, ಕಾಕ್‍ಪಿಟ್ ವಾಯ್ಸ್ ರೆಕಾರ್ಡರ್ ವಶಕ್ಕೆ ಪಡೆದಿದ್ದು, ಇವುಗಳಲ್ಲಿ ವಿಮಾನದ ದಕ್ಷತೆ, ವೇಗ, ಬ್ರೇಕಿಂಗ್ ಮುಂತಾದ ವಿಮಾನದ ಸ್ಥಿತಿಗತಿಗಳು ಹಾಗೂ ಪ್ರಯಾ ಣದ ವೇಳೆ ಪೈಲಟ್‍ಗಳ ನಡುವೆ ನಡೆದ ಸಂಭಾಷಣೆ ದಾಖಲಾಗಿರುತ್ತದೆ. ಇದು ಅಪಘಾತಕ್ಕೆ ಸಂಬಂಧ ಪಟ್ಟಂತೆ ತನಿಖೆ ನಡೆಸಲು ಸಹಾಯವಾಗಲಿದೆ.
ಅಪಘಾತ ಹೇಗಾಯಿತು?: ವಿಮಾನ ಹಾರಾಟ ಪತ್ತೆ ಹಚ್ಚುವ ಸ್ವೀಡನ್‍ನ ವೆಬ್ ಸೈಟ್ ಫ್ಲೈಟ್ ರಾಡಾರ್ 24, ವಾಣಿಜ್ಯ ವಿಮಾನಗಳ ಹಾರಾಟದ ಬಗ್ಗೆ ಮಾಹಿತಿ ನೀಡು ತ್ತದೆ. ಅದು ಹೇಳುವ ಪ್ರಕಾರ ಏರ್ ಇಂಡಿಯಾ ವಿಮಾನ ಶುಕ್ರವಾರ ಅಪಘಾತಕ್ಕೀಡಾಗುವ ಮುನ್ನ ಎರಡು ಬಾರಿ ಲ್ಯಾಂಡಿಂಗ್ ಆಗಲು ಯತ್ನಿಸಿತ್ತು. ವಿರುದ್ಧ ದಿಕ್ಕಿನಿಂದ ವಿಮಾನವನ್ನು ಇಳಿಸುವ ಮೊದಲು ನಿಗದಿತ ರನ್ ವೇಯಲ್ಲಿ ಇಳಿಸಲು ಪೈಲಟ್‍ಗೆ ಸಾಧ್ಯವಾಗಲಿಲ್ಲ. ಈ ಸಮಯದಲ್ಲಿ ವಿಮಾನವು ಜಾರಿ ಅಪಘಾತಕ್ಕೀಡಾಗಿದೆ.ವಿಮಾನ ಬಂದಿಳಿ ಯುವ ಸಮಯದಲ್ಲಿ ಅಧಿಕ ಮಳೆ ಇದ್ದ ಕಾರಣ ಪೈಲಟ್‍ಗೆ ರನ್ ವೇ ಅಷ್ಟೊಂದು ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ, ಇದು ಕೂಡ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಿದೆ.
ರೀಪುರ್ ವಿಮಾನ ನಿಲ್ದಾಣ ಪರ್ವತದ ಮೇಲೆ ನಿರ್ಮಿಸಲಾಗಿದ್ದು, ರನ್ ವೇಯ ಕೊನೆಗೆ ಅಷ್ಟೊಂದು ವಿಶಾಲವಾದ ಜಾಗವಿಲ್ಲ. ಪ್ರತಿಕೂಲ ಸನ್ನಿವೇಶ ಮತ್ತು ಕೈಕೊಟ್ಟ ಹವಾಮಾನ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
1990ರ ವಿಮಾನ ದುರಂತದಲ್ಲಿ ಬದುಕುಳಿದಿದ್ದ ಪೈಲಟ್ ದೀಪಕ್ ಸಾಥೆ: ಶುಕ್ರವಾರ ನಡೆದ ವಿಮಾನ ಅಪಘಾತ ದಲ್ಲಿ ಸಾವನ್ನಪ್ಪಿದ ವಿಂಗ್ ಕಮಾಂಡರ್ ಪೈಲಟ್ ದೀಪಕ್ ವಿ.ಸಾಥೆ 1990ರಲ್ಲಿ ನಡೆದಿದ್ದ ವಿಮಾನ ದುರಂತದಲ್ಲಿ ಪವಾಡ ಸದೃಶವಾಗಿ ಬದುಕುಳಿದಿದ್ದರು. ಅಂದಿನ ದುರಂತ ದಿಂದ ದೀಪಕ್ 6 ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿ ದ್ದರು. ಅವರ ದೇಹಕ್ಕೆ ಸಾಕಷ್ಟು ಗಾಯಗಳಾಗಿತ್ತು. ಅವರ ತಲೆಬುರುಡೆಗೆ ಗಾಯವಾಗಿತ್ತು. ಅವರು ಮತ್ತೆ ವಿಮಾನ ಚಲಾಯಿಸುತ್ತಾರೆ ಎಂದು ನಾವ್ಯಾರೂ ಕನಸಿನಲ್ಲೂ ಭಾವಿಸಿರಲಿಲ್ಲ. ಆದರೆ ಅವರು ಪವಾಡವೆಂಬಂತೆ ಸಾವನ್ನು ಗೆದ್ದು ಬಂದು ಮತ್ತೆ ವಿಮಾನ ಚಲಾಯಿಸಿದರು ಎಂದು ದೀಪಕ್ ಸೋದರ ಸಂಬಂಧಿ ನೀಲೇಶ್ ಸಾಥೆ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಮಾನ ದುರಂತದಲ್ಲಿ ಮೃತರಾದ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಗಂಭೀರವಾಗಿ ಗಾಯಗೊಂಡವರಿಗೆ ತಲಾ 2 ಲಕ್ಷ ರೂ. ಹಾಗೂ ಸಣ್ಣ ಪುಟ್ಟ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿ ಹಾರ ನೀಡಲಾಗುವುದು ಎಂದು ನಾಗರಿಕ ವಿಮಾನ ಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.