ಕೋವಿಡ್ ಕೇರ್ ಸೆಂಟರ್‍ಗೆ ಬೆಡ್‍ಶೀಟ್, ಬ್ಲಾಂಕೆಟ್ಸ್ ನೀಡಿದ ಇನ್ನರ್‍ವ್ಹೀಲ್ ಕ್ಲಬ್
ಮೈಸೂರು

ಕೋವಿಡ್ ಕೇರ್ ಸೆಂಟರ್‍ಗೆ ಬೆಡ್‍ಶೀಟ್, ಬ್ಲಾಂಕೆಟ್ಸ್ ನೀಡಿದ ಇನ್ನರ್‍ವ್ಹೀಲ್ ಕ್ಲಬ್

August 9, 2020

ಮೈಸೂರು, ಆ.8(ಎಂಟಿವೈ)- ಕೊರೊನಾ ಸೋಂಕಿಗೆ ತುತ್ತಾಗುವ ಪೌರ ಕಾರ್ಮಿಕರಿಗೆ ಚಿಕಿತ್ಸೆ ನೀಡಲು ಮೈಸೂರು ನಗರ ಪಾಲಿಕೆ ಹೊಸದಾಗಿ ಆರಂಭಿಸಿದ `ಕೋವಿಡ್ ಕೇರ್ ಸೆಂಟರ್’ಗೆ ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು 11,800 ರೂ. ಮೌಲ್ಯದ 50 ಬೆಡ್‍ಶೀಟ್, 50 ಬ್ಲಾಂಕೆಟ್ಸ್ ಹಾಗೂ ನೀರು ಕಾಯಿಸಲು 2 ಕೆಟಲ್ಸ್ ಕೊಡುಗೆಯಾಗಿ ನೀಡುವ ಮೂಲಕ ಕೊರೊನಾ ವಾರಿಯರ್‍ಗಳ ಹಿತಕಾಯಲು ಅಳಿಲು ಸೇವೆ ಸಲ್ಲಿಸಿದೆ.

ಮೈಸೂರು ಜಿಪಂ ಆವರಣದಲ್ಲಿ ಶನಿ ವಾರ ಬೆಳಗ್ಗೆ ಇನ್ನರ್‍ವ್ಹೀಲ್ ಕ್ಲಬ್ ಆಫ್ ಮೈಸೂರು ಪದಾಧಿಕಾರಿಗಳು ಬೆಡ್ ಶೀಟ್, ಬ್ಲಾಂಕೆಟ್ಸ್ ಹಾಗೂ 2 ವಾಟರ್ ಹೀಟರ್‍ಗಳನ್ನು ಪಾಲಿಕೆ ಆಯುಕ್ತ ಗುರು ದತ್ತ ಹೆಗಡೆ ಅವರಿಗೆ ಹಸ್ತಾಂತರಿಸಿದರು. ಬಳಿಕ ಗುರುದತ್ತ ಹೆಗಡೆ ಮಾತನಾಡಿ, ಕೋವಿಡ್ ಕೇರ್ ಸೆಂಟರ್‍ಗೆ ಅಗತ್ಯ ವಾಗಿದ್ದ ವಸ್ತುಗಳನ್ನು ನೀಡುವುದಕ್ಕೆ ಸಂಘ ಸಂಸ್ಥೆ ಗಳು ಮುಂದಾಗಬೇಕು. ಇನ್ನರ್‍ವ್ಹೀಲ್ ಕ್ಲಬ್ ಆಫ್ ಮೈಸೂರು ಉಪಯುಕ್ತ ವಸ್ತುಗಳನ್ನು ನೀಡಿರುವುದು ಶ್ಲಾಘನೀಯ ಎಂದರು.

ಇನ್ನರ್‍ವೀಲ್ ಕ್ಲಬ್ ಕಾರ್ಯದರ್ಶಿ ಉಮಾ ಮಹೇಶ್ ಮಾತನಾಡಿ, ಮಹಿಳೆ ಯರೇ ಇರುವ ನಮ್ಮ ಸಂಸ್ಥೆಗೆ 50 ವರ್ಷ ಗಳ ಇತಿಹಾಸವಿದೆ. ಈ ಸಾಲಿನಲ್ಲಿ `ಹೋಪ್’ ಶೀರ್ಷಿಕೆಯಡಿ ಸಮಾಜಸೇವೆ ಕೈಗೆತ್ತಿ ಕೊಳ್ಳಲಾಗಿದೆ. ಲಲಿತಮಹಲ್ ಹೆಲಿಪ್ಯಾಡ್ ಬಳಿ 100ಕ್ಕೂ ಹೆಚ್ಚು ಹಣ್ಣಿನ ಗಿಡ ನೆಡ ಲಾಗಿದೆ. ಪಾಲಿಕೆ ಆರೋಗ್ಯಾಧಿಕಾರಿ ಡಾ. ಡಿ.ಜಿ.ನಾಗರಾಜು ಅವರಿಂದ ಪಟ್ಟಿ ಪಡೆದು ಬೆಡ್‍ಶೀಟ್, ಬ್ಲಾಂಕೆಟ್ಸ್, ನೀರು ಬಿಸಿ ಮಾಡುವ ಕೆಟಲ್ಸ್ ನೀಡಲಾಗಿದೆ. ಎಂದರು.

ಇನ್ನರ್‍ವ್ಹೀಲ್ ಕ್ಲಬ್ ಆಫ್ ಮೈಸೂರು ಅಧ್ಯಕ್ಷೆ ಜೋತ್ಸ್ನಾ ರಾಯನ್ ಇರಾನಿ, ಸದಸ್ಯೆ ಸುಮತಿ ಘನತೆ, ಪಾಲಿಕೆ ಆರೋ ಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »