ನವದೆಹಲಿ, ಆ.8-ಕೃಷಿ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನವನ್ನು ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಬೆಳೆ ಕಟಾವು ಬಳಿಕದ ಕೃಷಿ ಚಟುವಟಿಕೆ ಗಳನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ `ಅಗ್ರಿ ಇನ್ ಫ್ರಾ ಫಂಡ್’ನಡಿಯಲ್ಲಿ 1 ಲಕ್ಷ ಕೋಟಿ ರೂ.ಗಳ ಹಣಕಾಸು ನೆರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದಂದು ವಿಡಿಯೋ ಕಾನ್ಫೆರನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.
ಈ ಯೋಜನೆಯು ರೈತರು ಬೆಳೆದ ಬೆಳೆಗಳನ್ನು ಸೂಕ್ತವಾಗಿ ಸಂರಕ್ಷಿ ಸಿಡಲು ಅಗತ್ಯ ವಿರುವ ಕೋಲ್ಡ್ ಸ್ಟೋರೇಜ್‍ಗಳು, ಉತ್ಪನ್ನ ಸಂಗ್ರಹ ಕೇಂದ್ರಗಳು, ಸಂಸ್ಕರಣಾ ವಿಭಾಗಗಳು ಸೇರಿದಂತೆ ಬೆಳೆಗಳಿಗೆ ಪೂರಕ ವಾಗಿರುವ ವ್ಯವಸ್ಥೆಗಳನ್ನು ತಳಮಟ್ಟದಲ್ಲಿ ರೂಪಿಸಲು ಈ ನಿಧಿ ಸಹಕಾರಿ ಯಾಗಲಿದೆ ಎಂಬ ಮಾಹಿತಿಯನ್ನು ಪ್ರಧಾನ ಮಂತ್ರಿಯವರ ಕಚೇರಿ ನೀಡಿದೆ. ಈ ಮೂಲಕ ದೇಶದ ರೈತರು ತಾವು ಬೆಳೆಯುವ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ಅಂದರೆ, ತಮ್ಮ ಬೆಳೆಗಳನ್ನು ವೈಜ್ಞಾನಿಕ ವಿಧಾನದಲ್ಲಿ ಶೇಖರಿಸಿ ಬಳಿಕ ಅವುಗಳಿಗೆ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಸೃಷ್ಟಿಯಾದ ಸಂದರ್ಭದಲ್ಲಿ ಅವುಗಳನ್ನು ಮಾರಾಟ ಮಾಡಲು ನಮ್ಮ ರೈತರಿಗೆ ಈ ಯೋಜನೆ ಯಿಂದ ರಚನೆಯಾಗುವ ವ್ಯವಸ್ಥೆ ಸಹಕಾರಿಯಾಗಲಿದೆ. ಇದರಿಂದಾಗಿ ಕೃಷಿ ಉತ್ಪನ್ನ ಗಳು ಬೇಡಿಕೆ ಕಳೆದುಕೊಂಡು ಅವುಗಳನ್ನು ಬೆಳೆದ ರೈತರು ಸಂಕಷ್ಟಕ್ಕೆ ಒಳಗಾಗುವುದು ತಪ್ಪಲಿದೆ. ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣಾ ಗುಣಮಟ್ಟ ಸುಧಾರಣೆಗೊಳ್ಳುವ ಮೂಲಕ ಅವುಗಳ ಮೌಲ್ಯವರ್ಧನೆಗೂ ಈ ವ್ಯವಸ್ಥೆ ಸಹಕಾರಿಯಾಗಲಿದೆ.