ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ಹೋರಾಟ ತೀವ್ರಗೊಳಿಸಿದ ರೈತಸಂಘ
ಮೈಸೂರು

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ಹೋರಾಟ ತೀವ್ರಗೊಳಿಸಿದ ರೈತಸಂಘ

August 9, 2020

ಮೈಸೂರು, ಆ.8 (ಪಿಎಂ)- ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀ ವಾಜ್ಞೆ ಮೂಲಕ ಜಾರಿಗೆ ತಂದಿರುವುದನ್ನು ಖಂಡಿ ಸಿರುವ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕಾಯ್ದೆ ಹಿಂಪಡೆಯಲು ಆಗ್ರಹಿಸಿದೆ. `ನಮ್ಮ ಭೂಮಿ ಮಾರಾಟಕ್ಕಿಲ್ಲ, ಕಾರ್ಪೊರೇಟ್ ಕಂಪನಿ, ಬಂಡವಾಳಶಾಹಿ, ಭೂ ದಲ್ಲಾಳಿಗಳಿಗೆ ಗ್ರಾಮದೊಳಗೆ ಪ್ರವೇಶವಿಲ್ಲ’ ಎಂಬ ಫಲಕ ಅಳವಡಿ ಸುವ ಚಳವಳಿಗೆ ಶನಿವಾರ ಚಾಲನೆ ನೀಡಿದೆ.

`ಆ.8ರ ಕ್ವಿಟ್ ಇಂಡಿಯಾ ಚಳವಳಿ ಘೋಷಣೆ ದಿನದ ಸ್ಮರಣೆಯೊಂದಿಗೆ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧದ ಹೋರಾಟಕ್ಕೆ ಚಾಲನೆ ನೀಡ ಲಾಯಿತು. ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವ ರಾಜ ಅರಸು ಅವರ ಹುಟ್ಟೂರು ಪಿರಿಯಾಪಟ್ಟಣ ತಾಲೂಕಿನ ಬೆಟ್ಟದತುಂಗದಲ್ಲಿ ಗ್ರಾಮಸ್ಥರು, ರೈತರು, ದಲಿತ ಮುಖಂಡರ ಸಮ್ಮುಖ ಗ್ರಾಮದ ಮುಖ್ಯದ್ವಾರ ದಲ್ಲಿ ಫಲಕ ಅಳವಡಿಸಿ ಚಳವಳಿಗೆ ಮುನ್ನುಡಿ ಬರೆಯ ಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಅಂದು ಬ್ರಿಟಿಷ್ ಇಂಡಿಯಾದಲ್ಲಿ ಒಂದು ಕಂಪನಿ ದೇಶದ ಆಡಳಿತ ನಡೆಸಿತು. ಆದರೆ ಇಂದು ಹತ್ತಾರು ಕಂಪನಿಗಳು ದೇಶವನ್ನು ದಾಸ್ಯದ ಕಡೆಗೆ ಕೊಂಡೊಯ್ಯಲು ಸರ್ಕಾರವನ್ನೇ ನಿಯಂ ತ್ರಿಸುತ್ತಿವೆ. ರೈತ-ಕಾರ್ಮಿಕ ವಿರೋಧಿ ಕಾನೂನುಗಳು ಜಾರಿಗೆ ತರಲು ಕಂಪನಿಗಳು ಕಾರಣವಾಗುತ್ತಿವೆ ಎಂದು ಆರೋಪಿಸಿದರು.

ಎಷ್ಟೇ ಅಡ್ಡಿ ಆತಂಕಗಳು ಎದುರಾದರೂ ನಮ್ಮ ಭೂಮಿ ಮಾರಾಟ ಮಾಡಿ ಸಂಕಷ್ಟಗಳನ್ನು ಮೈ ಮೇಲೆ ಎಳೆದುಕೊಳ್ಳಬಾರದು. ಸಂಘಟಿತ ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ರಕ್ಷಣೆ ಮಾಡಿಕೊಳ್ಳ ಬೇಕು. ಗ್ರಾಮೀಣ ಜನತೆ ಪಕ್ಷಾತೀತವಾಗಿ ಒಂದಾಗಿ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಪ್ರಬಲ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ಬೆಟ್ಟಯ್ಯ ಕೋಟೆ ಮಾತನಾಡಿ, ಉಳುಮೆ ಮಾಡಲು ರೈತ ಭೂಮಿಗಾಗಿ ಸರ್ಕಾರಕ್ಕೆ ಅರ್ಜಿ ಹಾಕಿ ಕಾಯುತ್ತಿದ್ದಾನೆ. ಆದರೆ ಸರ್ಕಾರ ವ್ಯವಸಾಯ ಮಾಡಿ ದೇಶಕ್ಕೆ ಅನ್ನ ಹಾಕುವ ರೈತನಿಗೆ ಭೂಮಿ ನೀಡದೇ ಉಳ್ಳವನಿಗೆ ಭೂಮಿ ನೀಡಲು ಹೊರಟಿದೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು ಎಂದರು.

ಜನಚೇತನ ಟ್ರಸ್ಟ್‍ನ ಮುಖ್ಯಸ್ಥ ಪ್ರಸನ್ನ ಎನ್.ಗೌಡ ಮಾತನಾಡಿ, ಶತಮಾನಗಳ ಹೋರಾಟದ ಫಲವಾಗಿ ರೈತನಿಗೆ ಇಂದು ಭೂಮಿ ಸಿಕ್ಕಿದೆ. ಈಗ ಯಾವುದೇ ಅಡೆತಡೆ ಎದುರಾದರೂ ನಮ್ಮ ಭೂಮಿ ಕಸಿದು ಕೊಳ್ಳಲು ಬಿಡಬಾರದು ಎಂದರು.

ದಲಿತ ಸಂಘರ್ಷ ಸಮಿತಿ ಮುಖಂಡರಾದ ಆರ್. ಎಸ್.ದೊಡ್ಡಣ್ಣ, ಆಲಗೂಡು ಶಿವಕುಮಾರ್, ರಾಜ ಶೇಖರ್ ಕೋಟೆ, ಚುಂಚನಹಳ್ಳಿ ಮಲ್ಲೇಶ್, ತಾಪಂ ಸದಸ್ಯ ರಾಮು, ರೈತ ಸಂಘದ ಮುಖಂಡರಾದ ಹೊಸಕೋಟೆ ಬಸವರಾಜು, ಹೊಸೂರು ಕುಮಾರ್, ನೇತ್ರಾವತಿ, ಹೆಚ್.ಸಿ.ಲೋಕೇಶ್‍ರಾಜೇ ಅರಸ್, ವಕೀಲ ಜವರೇಗೌಡ ಮತ್ತಿತರರು ಪಾಲ್ಗೊಂಡಿದ್ದರು

Translate »