ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ
ಮೈಸೂರು

ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ

May 3, 2018

ಮೈಸೂರು: ಮಾಡಿದ ಸಾಲಕ್ಕೆ ಹೆದರಿ ವ್ಯಕ್ತಿಯೋರ್ವ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಮೈಸೂರು ತಾಲೂಕು ಹಿನಕಲ್‍ನಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಗ್ರಾಮದ ಹುಂಡಿ ಬೀದಿ ನಿವಾಸಿ ಸುಂದರೇಶ್ (30) ಆತ್ಮಹತ್ಯೆಗೆ ಶರಣಾದವರು, ಮೂಲತಃ ಪಾಂಡವಪುರದವರಾದ ಆತ, ಗ್ಯಾಂಬ್ಲಿಂಗ್ ಚಟಕ್ಕೆ ಬಿದ್ದು ಸಾಲ ಮಾಡಿಕೊಂಡಿದ್ದು, ಸಾಲಗಾರರು ಪೀಡಿಸುತ್ತಿದ್ದರಿಂದ ಹೆದರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Translate »