ಮೈಸೂರು, ಜೂ.14(ಎಸ್‍ಬಿಡಿ)- ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ವ್ಯಕ್ತಿ ಯೊಬ್ಬರು ಶನಿವಾರ ರಾತ್ರಿ ಆಯತಪ್ಪಿ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆ, ಮಲೆಯೂರು ಗ್ರಾಮದ ಗುರುಸ್ವಾಮಿ(35) ಮೃತರು.
ಮೈಸೂರಿನಲ್ಲಿ ಎಂ-ಸ್ಯಾಂಡ್, ಜಲ್ಲಿ, ಇಟ್ಟಿಗೆ ಇನ್ನಿತರೆ ಕಟ್ಟಡ ಸಾಮಗ್ರಿಗಳ ಪೂರೈಕೆದಾರರಾಗಿದ್ದ ಗುರುಸ್ವಾಮಿ, ಕುಂಬಾರಕೊಪ್ಪಲಿನಲ್ಲಿ ಬಾಡಿಗೆ ರೂಂನಲ್ಲಿ ವಾಸವಿದ್ದರು. ಕಟ್ಟಡದ 2ನೇ ಮಹಡಿಯಲ್ಲಿ ರೂಂ ಇದ್ದು, ಶನಿವಾರ ಸಂಜೆ 7.30ರಲ್ಲಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ನೆರೆಹೊರೆಯವರು ಅವರನ್ನು ಆದಿತ್ಯ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಆದರೆ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯರಾತ್ರಿ 2 ಗಂಟೆ ವೇಳೆಯಲ್ಲಿ ಕೊನೆಯುಸಿರೆಳೆದರೆಂದು ಪೊಲೀಸರು ತಿಳಿಸಿದ್ದಾರೆ. ಮೇಟಗಳ್ಳಿ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.