ಹತ್ಯೆ ಆರೋಪಿಗೆ ಜೀವಾವಧಿ ಶಿಕ್ಷೆ
ಕೊಡಗು

ಹತ್ಯೆ ಆರೋಪಿಗೆ ಜೀವಾವಧಿ ಶಿಕ್ಷೆ

March 6, 2020

ಮಡಿಕೇರಿ, ಮಾ.5- ತನ್ನ ಸೋದರ ಮಾವನ ಮೇಲೆ ಹಲ್ಲೆ ನಡೆಸಿ, ಹತ್ಯೆ ಗೈದಿದ್ದ ಆರೋಪಿಗೆ ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾ ವಧಿ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ. ಚೇರಂಬಾಣೆಯ ಸುರೇಶ್ ಎಂಬಾ ತನೆ ಶಿಕ್ಷೆಗೆ ಗುರಿಯಾದ ಅಪರಾಧಿ.

ಘಟನೆ ವಿವರ: 2019ರ ಏಪ್ರಿಲ್ 9ರಂದು ಸಂಜೆ 7 ಗಂಟೆಗೆ ಚೇರಂಬಾಣೆಯ ಜೀವನ್ ಎಂಬುವರ ತೋಟದ ಲೈನ್ ಮನೆಗೆ ಬಂದ ರಾಜು ಎಂಬುವರ ತಂಗಿಯ ಮಗ ಸುರೇಶ್, ಸೋದರತ್ತೆ ಮತ್ತು ಆಕೆಯ ಮಗನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭ ಅದನ್ನು ಪ್ರಶ್ನಿಸಿದ ರಾಜು ಅವರು ಸುರೇಶನ ತಲೆಗೆ ಹೊಡೆದಿದ್ದಾನೆ. ಈ ಸಂದರ್ಭ ಆರೋಪಿ ಸುರೇಶ್ ರಾಜು ವನ್ನು ಎಳೆದುಕೊಂಡು ಹೋಗಿ ಬಚ್ಚಲು ಕೋಣೆಗೆ ತಳ್ಳಿ ದೊಣ್ಣೆಯಿಂದ ತೀವ್ರವಾಗಿ ಹಲ್ಲೆ ನಡೆಸಿದ್ದನು. ಇದನ್ನು ತಡೆಯಲು ಹೋದ ರಾಜು ಅವರ ಪತ್ನಿ ಮತ್ತು ಮಗನಿಗೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ತದನಂತರದ ರಾಜು ಬಾತ್ ರೂಂ ಕೋಣೆಯೊಳಗೆ ಮಲಗಿದ ಸ್ಥಿತಿಯಲ್ಲೇ ಸಾವನಪ್ಪಿದ್ದ.

ಈ ಘಟನೆ ಬಗ್ಗೆ ಮೃತ ರಾಜುವಿನ ಪತ್ನಿ ಭಾಗಮಂಡಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿದ್ದರು. ಕೊಲೆ ಮಾಡಿದ ಆರೋಪದಲ್ಲಿ ಸುರೇಶ್‍ನನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ದೋಷಾರೋ ಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವೀರಪ್ಪ ವಿ. ಮಲ್ಲಾಪುರ ಅವರು ಆರೋಪಿ ಸುರೇಶ, ರಾಜು ಅವರನ್ನು ಕೊಲೆ ಮಾಡಿರುವುದು ಸಾಬೀತಾಗಿದೆ ಎಂದು ತೀರ್ಪು ನೀಡಿದರು. ಕೊಲೆ ಮಾಡಿದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು ರೂ.25 ಸಾವಿರ ದಂಡ, ಹಲ್ಲೆ ಮಾಡಿದ ಅಪರಾಧಕ್ಕಾಗಿ 1 ವರ್ಷ ಸಜೆ, ಕೊಲೆ ಬೆದರಿಕೆ ಹಾಕಿದ ಅಪರಾಧಕ್ಕಾಗಿ 6 ತಿಂಗಳು ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಅಪ ರಾಧಿಯಿಂದ ವಸೂಲಾಗುವ ದಂಡದ ಹಣದಲ್ಲಿ 20 ಸಾವಿರ ರೂ.ಗಳನ್ನು ಮೃತ ರಾಜುವಿನ ಪತ್ನಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ.

ಸರಕಾರದ ಪರವಾಗಿ ಪ್ರಭಾರ ಸರಕಾರಿ ಅಭಿಯೋಜಕಿ ಎಂ. ಕೃಷ್ಣವೇಣಿ ಮತ್ತು ಡಿ. ನಾರಾಯಣ ವಾದ ಮಂಡಿಸಿದ್ದರು.

Translate »