ಮಂಡ್ಯ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ
ಮಂಡ್ಯ

ಮಂಡ್ಯ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ

March 6, 2020

ಬೇಸಿಗೆಯಲ್ಲಿ ನೀರಿನ ಬರ ಎದುರಿಸಲು  ಸಿದ್ಧರಾಗುವಂತೆ ಅಧ್ಯಕ್ಷರ ಸೂಚನೆ.!
ಮಂಡ್ಯ, ಮಾ.5(ನಾಗಯ್ಯ)- ಬೇಸಿಗೆ ಕಾಲ ಶುರುವಾಗುತ್ತಿರುವುದರಿಂದ ತಾಲೂಕಿ ನಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಯಾಗದಂತೆ ಮುಂಜಾಗ್ರತೆ ಕ್ರಮ ವಹಿಸುವಂತೆ ತಾಪಂ ಅಧ್ಯಕ್ಷೆ ಶಿವಕುಮಾರಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ವಿಭಾಗದ ಅಧಿಕಾರಿಗೆ ಸೂಚಿಸಿದರು.

ನಗರದ ತಾಪಂ ಸಭಾಂಗಣದಲ್ಲಿಂದು ಅಧ್ಯಕ್ಷೆ ಶಿವಕುಮಾರಿ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಎಲ್ಲೆಲ್ಲಿ ನೀರಿನ ಅಭಾವ ವಿದೆ ಎಂಬುದನ್ನೂ ಈಗಿನಿಂದಲೇ ಪರಿ ಶೀಲನೆ ನಡೆಸಬೇಕು, ಅಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳುವ ಕುರಿತು ಯೋಜನೆ ರೂಪಿಸ ಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಇಂಜಿನಿಯರ್ ಬಸವರಾಜು, ತಾಲೂಕಿ ನಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಎಲ್ಲಾ ಕಡೆ ಕೆರೆಕಟ್ಟೆಗಳು ತುಂಬಿದ್ದು, ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ. ಇಲಾಖೆಯಿಂದ ಕೊರೆಸಿದ ಕೊಳವೆ ಬಾವಿಗಳು ಸಫಲವಾಗಿವೆ. ಸಮಸ್ಯೆ ಕಂಡು ಬರುವ ಗ್ರಾಮಗಳಿಗೆ ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡಲು ಕ್ರಮ ವಹಿಸ ಲಾಗಿದೆ. ಅಲ್ಲದೆ, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಗ್ರಾಪಂಗಳಲ್ಲಿ 14ನೇ ಹಣಕಾಸು ಯೋಜನೆಯಲ್ಲಿ ಅನು ದಾನ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.

ವಿವಿಧ ಇಲಾಖೆಗಳಿಂದ ತೆಗೆದುಕೊಂಡಿ ರುವ ಕಾಮಗಾರಿಗಳು ವಿಳಂಬವಾಗುತ್ತಿರು ವುದರಿಂದ ನಿಮ್ಮ ಇಲಾಖೆ ಮೇಲೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಸದಸ್ಯರು ನೀವು ಖುದ್ದಾಗಿ ಹಾಜರಾಗಬೇಕು ಎಂದು ಒತ್ತಾಯಿಸಿದ್ದಾರೆ. ಆದ್ದರಿಂದ ಮುಂದಿನ ಸಾಮಾನ್ಯ ಸಭೆಗೆ ಹಾಜರಾಗಬೇಕು ಎಂದು ಅಧ್ಯಕ್ಷೆ ಶಿವಕುಮಾರಿ, ಇಒ ಗಂಗಯ್ಯ ಅವರು ಭೂ ಸೇನಾ ನಿಗಮದ ಕಾರ್ಯಪಾಲಕ ಇಂಜಿನಿಯರ್ ಸುರೇಶ್‍ಬಾಬು ಅವರಿಗೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ್‍ಬಾಬು, ನನಗೆ ಮಂಡ್ಯ, ಮದ್ದೂರು, ಮಳವಳ್ಳಿ ಮೂರು ತಾಲೂಕುಗಳು ಬರಲಿದ್ದು, ಒತ್ತಡಹೆಚ್ಚಿದೆ. ಆದ್ದರಿಂದ ಸಭೆಗೆ ಬರಲು ಸಾಧ್ಯವಾಗು ತ್ತಿಲ್ಲ. ನಮ್ಮ ಪರವಾಗಿ ಹೊರಗುತ್ತಿಗೆ ಇಂಜಿ ನಿಯರ್‍ಗಳನ್ನು ಕಳುಹಿಸಲಾಗುತ್ತಿತ್ತು. ಮುಂದಿನ ಸಭೆಗೆ ನಾನೇ ಖುದ್ದಾಗಿ ಹಾಜ ರಾಗುತ್ತೇನೆ ಎಂದು ತಿಳಿಸಿದರು.

ತುರ್ತು ರೋಗಿಗಳಿಗೆ ಡಯಾಲಿಸಿಸ್ ಚಿಕಿತ್ಸೆ ನೀಡದೆ ಹೊರಗೆ ಕಳುಹಿಸಲಾಗುತ್ತಿದೆ. ಇದರಿಂದ ಬಡ ರೋಗಿಗಳು ಪರದಾಡು ವಂತಾಗಿದೆ. ಅಲ್ಲದೆ, ಔಷಧಿಗಳು ಹಾಗೂ ಇತರೆ ಪರೀಕ್ಷೆಗಳಿಗೆ ಹೊರಗಡೆ ಮೆಡಿಕಲ್ ಅಂಗಡಿಗಳಿಗೆ ಬರೆಯಲಾಗುತ್ತಿದೆ. ಜಿಲ್ಲಾಸ್ಪತ್ರೆ ಯಲ್ಲಿ ಔಷಧಿಗಳು ಲಭ್ಯವಿದ್ದರೂ ಬೇರೆ ಕಡೆ ಬರೆಯುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ, ಇದರ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಮಿಮ್ಸ್ ನಿರ್ದೇ ಶಕರ ಗಮನಕ್ಕೆ ತರಲಾಗುವುದು ಎಂದು ಸಮಜಾಯಿಷಿ ನೀಡಿದರು.

ಅಧ್ಯಕ್ಷೆ ಶಿವಕುಮಾರಿ ಮಾತನಾಡಿ, ತಾಲೂಕಿನ ವಿವಿಧ ಆಸ್ಪತ್ರೆಗಳಲ್ಲಿ ರಾತ್ರಿ ಪಾಳಿ ಯಲ್ಲಿ ವೈದ್ಯರೇ ಇರುವುದಿಲ್ಲ. ಇದರಿಂದ ರೋಗಿಗಳು ಸಂಕಷ್ಟ ಎದುರಿಸುವಂತಾಗಿದೆ. ತಾಲೂಕಿನ ಶಿವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ವೈದ್ಯರ ನೇಮಕ ಮಾಡುವಂತೆ ಹೇಳಿದರು. ತಾಪಂ ಉಪಾಧ್ಯಕ್ಷೆ ಕವಿತಾ, ತಾಪಂ ಇಓ ಗಂಗಯ್ಯ, ಮುಖ್ಯ ಲೆಕ್ಕಾ ಧಿಕಾರಿ ಕೇಶವಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Translate »