ಒತ್ತಡ ನಿವಾರಣೆಗೆ ಸಂಗೀತವೇ ಮದ್ದು ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅಭಿಮತ
ಮಂಡ್ಯ

ಒತ್ತಡ ನಿವಾರಣೆಗೆ ಸಂಗೀತವೇ ಮದ್ದು ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅಭಿಮತ

March 6, 2020

ಕಿಕ್ಕೇರಿ, ಮಾ.5- ಸುಗಮ ಸಂಗೀತ ಪರೀಕ್ಷೆ, ಮಾನಸಿಕ ನೆಮ್ಮದಿಗೆ ಟಾನಿಕ್ ನಂತೆ ಕೆಲಸ ಮಾಡಲಿದೆ ಎಂದು ಆದರ್ಶ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.

ರಾಜ್ಯಾದ್ಯಂತ ಮಕ್ಕಳಿಗೆ ಪರೀಕ್ಷಾ ಭಯ ಎಂಬ ಒತ್ತಡ ನಿವಾರಣೆಗಾಗಿ ಬೆಂಗ ಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿ ಹಮ್ಮಿಕೊಂಡಿರುವ ‘ಕನ್ನಡ ಡಿಂಡಿಮ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿದ್ರಾಹೀನತೆ ಹಾಗೂ ಹಲವು ಮಾರಕ ರೋಗ ನಿವಾರಣೆಗೆ ಸಂಗೀತ ದಿವ್ಯೌಷಧವಾಗಿದ್ದು, ಪಶು ಪಕ್ಷಿ, ಗಿಡ ಮರಗಳು ಕೂಡ ಸಂಗೀತವನ್ನು ಅಸ್ವಾದಿಸು ತ್ತವೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಈಗಾಗಲೇ ಹೆಸರಾಂತ ಕಿದ್ವಾಯಿ, ನಿಮಾನ್ಸ್, ಜಯದೇವ ಮೊದಲಾದ ಆಸ್ಪತ್ರೆಗಳಲ್ಲಿ ನಿರಂತರವಾಗಿ ಸುಮಧುರ ಸಂಗೀತ, ವಾದ್ಯ ಲಹರಿಯನ್ನು ಅಳವಡಿಸಿ ಯಶಸ್ಸು ಕಾಣ ಲಾಗಿದೆ. ಹಲವು ಗೋಶಾಲೆಗಳಲ್ಲಿ ಸಂಗೀತ ಕೇಳುವ ಗೋವುಗಳು ಅತೀ ಹೆಚ್ಚು ಹಾಲು ಕೊಡುತ್ತಿರುವುದನ್ನು ಕಾಣಬಹುದಾಗಿದೆ ಎಂದು ಸಂಗೀತದ ರಹಸ್ಯವನ್ನು ಬಿಚ್ಚಿಟ್ಟರು.

ಹೀಗಿರುವಾಗ ಮಕ್ಕಳ ಮನಸ್ಸಿಗೆ ಅತ್ಯಂತ ಪರಿಣಾಮಕಾರಿಯಾಗಿ ಸುಗಮ ಸಂಗೀತ ಮದ್ದಾಗಿದೆ. ಪರೀಕ್ಷಾ ಸಮಯ ದಲ್ಲಿ ಮಾನಸಿಕ ಒತ್ತಡ, ಚಂಚಲತೆ, ಬೇಸರ ಕಳೆಯಲು ಲಘು ಸಂಗೀತ, ಸಂಗೀತ ನಾದ ತರಂಗಗಳ ಧ್ಯಾನದಿಂದ ಉಲ್ಲಾಸವಾಗಿ ಮರ ಗುಳಿತನಕ್ಕೆ ಟಾನಿಕ್‍ನಂತೆ ಕೆಲಸ ಮಾಡಿ ಹೆಚ್ಚು ಅಂಕಗಳಿಸಬಹುದಾಗಿದೆ ಎಂದರು.

ರ್ಯಾಂಕ್ ವಿಜೇತರು ಸಂಗೀತ ಪ್ರಿಯರು: ಕಳೆದ ಸಾಲಿನಲ್ಲಿ ರ್ಯಾಂಕ್ ಪಡೆದ ಬಹುತೇಕರು ಸಂಗೀತಾಸಕ್ತರಾಗಿದ್ದು, ಇವರ ಗುಟ್ಟು ಸಂಗೀತಾಸಕ್ತಿಯೇ ಆಗಿದೆ. ಬೇಸರ ಕಳೆಯಲು ಮೊಬೈಲ್‍ನಿಂದ ದೂರವಿದ್ದು ಪಿಟೀಲು, ತಬಲಾ, ಕೊಳಲು, ಮ್ಯಾಂಡಲಿನ್ ನಂತಹ ಹತ್ತು ಹಲವು ವಾದನವನ್ನು ನುಡಿಸುತ್ತಿದ್ದವರು. ಜೊತೆಗೆ ಸಂಗೀತವನ್ನು ಗುನುಗುತ್ತಿದ್ದವರು ಎಂಬುದನ್ನು ಮರೆಯಬಾರದು. ಸಂಗೀತಕ್ಕೆ ಭಾಷೆ, ದೇಶ, ಪ್ರಾಂತ್ಯದ ಗಡಿ ಇಲ್ಲ. ಆತ್ಮವಿಶ್ವಾಸದ ಸಂಕೇತವಾಗಿರುವ ಸುಗಮ ಸಂಗೀತ, ಗೀತೆಗಳು ನವಚೈತನ್ಯ, ಉತ್ಸಾಹವನ್ನು ಇಮ್ಮಡಿಗೊಳಿಸಲಿದೆ. ಜೊತೆಗೆ ಪರೀಕ್ಷಾ ದೃಷ್ಟಿಯಿಂದಲೂ ಮರೆವಿಗೆ ಟಾನಿಕ್‍ನಂತೆ ಕೆಲಸ ಮಾಡಿ ಹೆಚ್ಚು ಅಂಕ ಗಳಿಸ ಬಹುದಾಗಿದೆ ಎಂದರು.

ಅಕಾಡೆಮಿ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಿರುಹೊತ್ತಿಗೆ ನೀಡಿ ಉತ್ತೇಜಿಸಲಾಯಿತು. 8,9 ಹಾಗೂ 10ನೇ ತರಗತಿಯ ವಿವಿಧ ಪದ್ಯಗಳನ್ನು ರಾಗವಾಗಿ ಹಾಡಿ ಮಕ್ಕಳಿಂದಲೂ ಹಾಡಿಸಿ, ಜೊತೆ ಗೊಂದಿಷ್ಟು ಹೆಸರಾಂತ ಕವಿಗಳ ಗೀತೆ ಯನ್ನು ಹಾಡಿಸಿ ನೆನಪಿನಲ್ಲಿ ಉಳಿಯುವಂತೆ ಮಾಡಿದರು. ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ಪುಷ್ಪಲತಾ ಕೃಷ್ಣಮೂರ್ತಿ ಅವರಿಗೆ ಶಾಲೆ ವತಿಯಿಂದ ಗೌರವಿಸಲಾಯಿತು.

ಪುಷ್ಪಲತಾ ಕೃಷ್ಣಮೂರ್ತಿ, ಮುಖ್ಯಶಿಕ್ಷಕ ಶಾಂತಪ್ಪಾಜಿ, ಕರವೇ ಜಿಲ್ಲಾ ಉಪಾಧ್ಯಕ್ಷ ಗುರುಮೂರ್ತಿ, ವೆಂಕಟರಾಮೇಗೌಡ, ಶಿವರಾಮಪ್ಪ, ಪಾಪಯ್ಯ, ಮಧು, ಕಲಾವತಿ, ತ್ರಿವೇಣಿನಾಯಕ್ ಇದ್ದರು.

Translate »