ಮಂಡ್ಯದಲ್ಲಿ ಇಂದು ಜಾನಪದ ಜಾತ್ರೆ
ಮಂಡ್ಯ

ಮಂಡ್ಯದಲ್ಲಿ ಇಂದು ಜಾನಪದ ಜಾತ್ರೆ

March 6, 2020

ಮಂಡ್ಯ, ಮಾ.5(ನಾಗಯ್ಯ)- ನಗರದ ಮಹಿಳಾ ಸರ್ಕಾರಿ ಕಾಲೇಜು(ಸ್ವಾಯತ್ತ) ವತಿಯಿಂದ ಜಾನಪದ ಜಾತ್ರೆ ಕಾರ್ಯಕ್ರಮವನ್ನು ಮಾ.6(ನಾಳೆ )ರಂದು ಬೆಳಿಗ್ಗೆ 10ಕ್ಕೆ ಕಾಲೇಜಿನ ವನರಂಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಕೆ.ಬಿ.ನಾರಾಯಣ ತಿಳಿಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮವನ್ನು ಶಾಸಕ ಎಂ.ಶ್ರೀನಿವಾಸ್ ಉದ್ಘಾಟಿಸುವರು, ಖ್ಯಾತ ಜಾನಪದ ವಿದ್ವಾಂಸ ಡಾ.ಚಕ್ಕರೆ ಶಿವಶಂಕರ್ ಪ್ರಧಾನ ಭಾಷಣ ಮಾಡುವರು. ಕಾಲೇಜಿನ ಪ್ರಾಂಶುಪಾಲ ಪ್ರೊ.ನಾರಾಯಣ ಕೆ.ಬಿ.ನಾನು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಾಲೇಜು ಶಿಕ್ಷಣ ಇಲಾಖೆ ಮೈಸೂರು ಪ್ರಾದೇಶಿಕ ಕಚೇರಿ ಜಂಟಿ ನಿರ್ದೇಶಕ ಪ್ರೊ. ಮೂಗೇಶಪ್ಪ.ಆರ್, ಮಂಡ್ಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಉದಯ್‍ಕುಮಾರ್, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಿ.ಪಿ.ಸ್ವಾಮಿ ಆಗಮಿಸಲಿದ್ದಾರೆ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕಾಲೇಜಿನ ಕ್ರೀಡಾಂಗಣದಿಂದ ವೇದಿಕೆಯವರೆಗೆ ಅಲಂಕೃತಗೊಂಡ ಎತ್ತಿನ ಗಾಡಿಗಳಲ್ಲಿ ಅತಿಥಿಗಳ ಮೆರವಣಿಗೆ ಮಾಡಲಾಗುವುದು, ಮೆರವಣಿಗೆಯಲ್ಲಿ ತಮಟೆ, ನಗಾರಿ, ಪೂಜಾ ಕುಣಿತ, ಪಟಾ ಕುಣಿತ, ರಂಗ ಕುಣಿತ, ವೀರಭದ್ರನ ಕುಣಿತ, ವೀರಗಾಸೆ, ನಂದಿಕಂಬ, ಸೋಮನ ಕುಣಿತ, ಹುಲಿವೇಷ, ಡೊಳ್ಳು ಕುಣಿತ, ಮೊದಲಾದ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ ಎಂದು ಹೇಳಿದರು.

ಜಾತ್ರೆಯಲ್ಲಿ ವಿದ್ಯಾರ್ಥಿಗಳು, ಪೋಷಕರಿಂದ ತಯಾರಿಸಿದ ತಿಂಡಿ ತಿನಿಸುಗಳು ದೊರೆಯಲಿದ್ದು,, ಜಾನಪದ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದೆ. ವನರಂಗದಲ್ಲಿ ಜಾನಪದ ಕಲಾ ತಂಡಗಳ ಪ್ರದರ್ಶನ ನಡೆಯಲಿವೆ. ಅಪರೂಪದ ವಸ್ತುಗಳ ಪ್ರದರ್ಶನವನ್ನು ಜಾತ್ರೆಯಲ್ಲಿ ಮಾಡಲಾಗುವುದು ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎನ್.ಎಂ. ಮಹೇಶ್, ಜೆ.ಪಿ.ರವಿಕಿರಣ್, ಡಾ.ದಿವ್ಯಾ, ಡಾ.ಕೆಂಪಮ್ಮ, ಡಾ.ಶಿವರಾಜ್, ದೀಪಕ್‍ಕುಮಾರ್ ಇದ್ದರು.

Translate »