ಮಂಡ್ಯ ಸಮಗ್ರ ಅಭಿವೃದ್ಧಿ ಹರಿಕಾರ ಮಾದೇಗೌಡ
ಮಂಡ್ಯ

ಮಂಡ್ಯ ಸಮಗ್ರ ಅಭಿವೃದ್ಧಿ ಹರಿಕಾರ ಮಾದೇಗೌಡ

July 18, 2021

ಮಂಡ್ಯ,ಜು.17(ಮೋಹನ್‍ರಾಜ್)- ಗಾಂಧಿ ತತ್ವ ಮೈಗೂಡಿಸಿಕೊಂಡು ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಡಿಪಾಯ ಹಾಕಿದ ಜಿ.ಮಾದೇಗೌಡರು ಶಿಕ್ಷಣ, ಸಾಹಿತ್ಯ, ಸಂಸ್ಕøತಿ, ಕೈಗಾರಿಕೆ, ಆರೋಗ್ಯ, ಧಾರ್ಮಿಕ ಸೇರಿದಂತೆ ಹತ್ತು ಹಲವು ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನ-ಮಾನ ಗಳಿಸಿದ್ದಾರೆ. ಇಂತಹ ಗ್ರಾಮೀಣ ಗಾಂಧಿಗೆ ಮೈಸೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಗೌರವ ಕೂಡ ಸಂದಿದೆ.

ಗ್ರಾಮೀಣ ಪ್ರದೇಶದ ಯುವಕ, ಯುವತಿಯರಿಗೆ ವಿದ್ಯಾದಾಹವನ್ನು ನೀಗಲು ಭಾರತಿ ವಿದ್ಯಾ ಸಂಸ್ಥೆಯನ್ನು 1962ರಲ್ಲಿ ಆರಂಭಿಸಿ, ಇದೀಗ ಅದು ಬೃಹತ್ತಾಕಾರ ವಾಗಿ ಮಿನಿ ವಿಶ್ವ ವಿದ್ಯಾಲಯದಂತೆ ಭಾರತೀನಗರದಲ್ಲಿ ಬೆಳೆದು ನಿಂತಿದೆ.

ಪ್ರಾಥಮಿಕ ಶಾಲೆಯಿಂದ ಹಿಡಿದು ಇಂಜಿನಿಯರಿಂಗ್ ಪದವಿವರೆಗೂ ವಿವಿಧ ವಿಭಾಗವನ್ನು ಆರಂಭಿಸಿ ಪ್ರತಿ ವರ್ಷ ಐದಾರು ಸಾವಿರ ವಿದ್ಯಾರ್ಥಿಗಳು ವಿದ್ಯಾ ರ್ಜನೆ ಪಡೆಯುತ್ತಿದ್ದು, ಐನೂರಕ್ಕೂ ಹೆಚ್ಚು ಅಧ್ಯಾಪಕರು ಸೇವೆ ಸಲ್ಲಿಸುತ್ತಿದ್ದಾರೆ.

1988ರಲ್ಲಿ ಹನುಮಂತನಗರದಲ್ಲಿ ವಸತಿ ಶಾಲೆಯನ್ನು ಆರಂಭಿಸಿ, ಅಲ್ಲಿಯೇ ಆರೋಗ್ಯಧಾಮ, ಸುಂದರ ಪಾರ್ಕ್‍ನ್ನು ನಿರ್ಮಾಣ ಮಾಡುವ ಮೂಲಕ ಹೊಸ ದೊಂದು ಭಾಷ್ಯ ಬರೆದರು.

ದುಡಿಯುವ ಕೈಗೆ ಕೆಲಸ ನೀಡುವ ಉದ್ದೇಶದಿಂದ ಭಾರತೀ ಸಹಕಾರ ಸಕ್ಕರೆ ಕಾರ್ಖಾನೆ ಆರಂಭಿಸಲು ನಿರ್ಧರಿಸಿ, 1969ರಲ್ಲಿ ಕಾರ್ಖಾನೆಯ ಆರಂ ಭಿಸಿದರಲ್ಲದೆ, 1974ಕ್ಕೆ ಅದನ್ನು ಅಂತ್ಯ ಗೊಳಿಸಿದರು. ನಂತರ ಅದು ಚಾಂಷು ಗರ್ ಕಾರ್ಖಾನೆಯಾಗಿ ಸುತ್ತಮುತ್ತಲೂ ಹತ್ತಾರು ಹಳ್ಳಿಗಳ ಜೀವನಾಡಿಯಾಗಿ, ರೈತರ ಪಾಲಿನ ಸಂಜೀವಿನಿಯಾಗಿ ನಿಂತಿದೆ. ಈ ಕಾರ್ಖಾನೆಯು ಮಾದೇ ಗೌಡರ ದೂರದೃಷ್ಟಿಯ ಫಲವಾಗಿದೆ.
ಮಂಡ್ಯದಲ್ಲೊಂದು ಕ್ಷಯ ರೋಗ ಆಸ್ಪತ್ರೆ ನಿರ್ಮಿಸುವ ಸದುದ್ದೇಶದಿಂದ ಕೆ.ವಿ.ಶಂಕರೇಗೌಡರ ಬಳಿ ಮಾತುಕತೆ ನಡೆಸಿ, 1969ರಲ್ಲಿ ಬಿ.ಹೊಸೂರಿನಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಕ್ಷಯ ಮತ್ತು ಎದೆರೋಗಗಳ ಆಸ್ಪತ್ರೆಯನ್ನು ಆರಂಭಿಸಿ ದರು. ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಆಸ್ಪತ್ರೆ ಉದ್ಘಾಟಿಸಿದರು.

ಗಾಂಧಿ ಅವರಿಂದ ಪ್ರೇರಣೆಗೊಂಡು ಅವರ ತತ್ವಾದರ್ಶಗಳನ್ನು ಮೈಗೂಡಿಸಿ ಕೊಂಡ ಮಾದೇಗೌಡರು ಭಾರತೀನಗರ ದಲ್ಲೊಂದು ಸುಂದರ ಗಾಂಧಿ ಭವನ ವೊಂದನ್ನು ನಿರ್ಮಿಸಿ ಗ್ರಂಥಾಲಯ ಮಾಡುವ ಮೂಲಕ ಮೌಲ್ಯಯುತ ಪುಸ್ತಕ ಭsಂಡಾರ ನಿರ್ಮಿಸಿದರು. ಅದೇ ಮಾದರಿ ಯಲ್ಲಿ ಮಂಡ್ಯ ನಗರದ ಹೃದಯ ಭಾಗದ ವಿದ್ಯಾನಗರದಲ್ಲಿ ಬೃಹತ್ ಗಾಂಧಿ ಭವನ ನಿರ್ಮಿಸುವ ಮೂಲಕ ಮೌಲ್ಯಯುತ ಕೃತಿಗಳ ಸಂಗ್ರಹ, ಸ್ವಾತಂತ್ರ್ಯ ಹೋರಾಟ ಸಂದರ್ಭದ ಚಿತ್ರಣಗಳನ್ನು ಹಾಕಿ ಗಾಂಧಿ ಹೋರಾಟದ ಬದುಕನ್ನು ಸಾರ್ವಜನಿ ಕರು ಹಾಗೂ ವಿದ್ಯಾರ್ಥಿಗಳಿಗೆ ಕಣ್ಣುಕಟ್ಟು ವಂತೆ ನಿರ್ಮಿಸಿ ಕೊಟ್ಟಿದ್ದಾರೆ.

ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಕೈಗಾರಿಕೆ ಜೊತೆಜೊತೆಗೆ ಮಾದೇಗೌಡರು, ಧಾರ್ಮಿಕ ಕ್ಷೇತ್ರದಲ್ಲೂ ಅಪಾರ ಸೇವೆ ಸಲ್ಲಿಸಿದ್ದಾರೆ. 1988ರಲ್ಲಿ ಭಾರತೀ ನಗರದಲ್ಲಿ ಆತ್ಮಲಿಂಗೇಶ್ವರನ ದೇವಾಲಯ ನಿರ್ಮಿಸುವ ಮೂಲಕ ಶಿವನನ್ನು ಪ್ರತಿಷ್ಠಾ ಪಿಸಿದರಲ್ಲದೆ, ಪ್ರವಾಸಿಗರಿಗೆ ಅನು ಕೂಲವಾಗುವ ನಿಟ್ಟಿನಲ್ಲಿ ಸಮುದಾಯ ಭsವನ, ಪ್ರತಿ ವರ್ಷ ಧನಗಳ ಜಾತ್ರೆ, ಬಡ ಬಗ್ಗರ ಕಲ್ಯಾಣ ಕಾರ್ಯಕ್ರಮಗಳಿಗೆ ಗೌಡರು ನಾಂದಿ ಹಾಡಿದರು.
46 ಎಕರೆ ವಿಸ್ತೀರ್ಣದ ಎತ್ತರ ಭಾಗದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಆತಲಿಂಗೇಶ್ವರ ಕ್ಷೇತ್ರವನ್ನು ನಿರ್ಮಿಸಿದ್ದಾರೆ. ಪಾವನಗಂಗ, ಸುಂದರವಾದ ಕೊಳ, ಉದ್ಯಾನವನ ಹೀಗೆ ಇದೊಂದು ಪ್ರವಾಸಿ ತಾಣವೇ ಆಗಿ ಮಾರ್ಪಟ್ಟಿದೆ.

ಏಳು ಬಾರಿ ಶಾಸಕರಾಗಿ, ಎರಡು ಬಾರಿ ಸಂದರಾಗಿ ಗಂಡುಮೆಟ್ಟಿದ ನಾಡಿನ ಕೀರ್ತಿ ಪತಾಕೆಯನ್ನು ರಾಜ್ಯ, ರಾಷ್ಟ್ರ ಮಟ್ಟಕ್ಕೆ ಹಾರಿಸಿದ ಕೀರ್ತಿ ಜಿ.ಮಾದೇಗೌಡರಿಗೆ ಸಲ್ಲುತ್ತದೆ. ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯನ್ನು ಸ್ಥಾಪಿಸಿ ಆ ಮೂಲಕ ಕಾವೇರಿ ಚಳವಳಿಯ ಹೋರಾಟ ನಡೆಸಿ ದವರು. ಕಾವೇರಿಯ ಮಧ್ಯಂತರ ತೀರ್ಪು ಬಂದಾಗ 100 ದಿನಗಳ ಕಾಲ ಗೌಡರು ಸರ್ಕಾರದ ವಿರುದ್ಧ ಪಾಂಚಜನ್ಯ ಮೊಳ ಗಿಸಿದವರು. ಇದರಿಂದ ಜೈಲುವಾಸ ಅನುಭsವಿಸಿದರು. ಆ ಸಂದಭರ್sದಲ್ಲಿ ಕಾವೇರಿ ಸೈನ್ಯ ಕಟ್ಟಿ ಹೊಸ ಪಕ್ಷಕ್ಕೆ ನಾಂದಿ ಹಾಡಿದ್ದರೆ ಗೌಡರ ಗತ್ತೇ ಬದಲಾಗು ತ್ತಿತ್ತು. ಪುತ್ರ ವ್ಯಾಮೋಹದಿಂದಾಗಿ ಕಾವೇರಿ ಚಳವಳಿಯನ್ನು ಹೊಳೆಯಲ್ಲಿ ಹೋಮ ಮಾಡಿದರೆಂಬ ಅಪವಾದವೂ ಗೌಡರನ್ನು ಅಂಟಿಕೊಂಡಿದೆ.
ರಾಜಕೀಯ ದೀಕ್ಷೆ ತೊಟ್ಟ ಜಿ. ಮಾದೇಗೌಡರು ಗಾಂಧಿ ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡು ಗಾಂಧಿ ಭವನದ ನಿರ್ಮಾಣ ಮಾಡಿ, ಯುವ ಜನತೆ ಗೊಂದು ಹೊಸ ಸಂದೇಶವನ್ನು ನೀಡ ಲೊರಟರು. ಇಂತಹ ಮಿನಿ ವಿಶ್ವವಿದ್ಯಾ ನಿಲಯ ವಾದ ಜಿ.ಮಾದೇಗೌಡ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುವುದು ಜಿಲ್ಲೆಗೆ ಸಂದ ಗೌರವ.

Translate »