ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಹಿನ್ನೆಲೆ ಮೈಸೂರಲ್ಲಿ ಬಾಡಿಗೆದಾರರ ಮೇಲೆ ಪೊಲೀಸರ`ಸುರಕ್ಷಾ’ ಕಣ್ಣು
ಮೈಸೂರು

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಹಿನ್ನೆಲೆ ಮೈಸೂರಲ್ಲಿ ಬಾಡಿಗೆದಾರರ ಮೇಲೆ ಪೊಲೀಸರ`ಸುರಕ್ಷಾ’ ಕಣ್ಣು

November 27, 2022

ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರಿಕ್ ನಕಲಿ `ಆಧಾರ್’ ನೀಡಿ ಬಾಡಿಗೆ ಮನೆ ಪಡೆದ ಪರಿಣಾಮ
ಇನ್ನು ಮುಂದೆ ಮನೆ ಬಾಡಿಗೆಗೆ ನೀಡುವವರು ಸಂಬAಧಿಸಿದ ಪೊಲೀಸ್ ಠಾಣೆಗೆ ಮಾಹಿತಿ ನೀಡಲೇಬೇಕು
ಸುರಕ್ಷಾ ನಮೂನೆ ಭರ್ತಿ ಮಾಡಿ ಆಧಾರ್, ಪಾನ್ ಕಾರ್ಡ್, ಡಿಎಲ್ ಇತರೆ ದಾಖಲೆಗಳಲ್ಲಿ ಒಂದನ್ನು ಸಲ್ಲಿಸಬೇಕು

ಮೈಸೂರು, ನ.೨೬(ಎಸ್‌ಬಿಡಿ)- ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಶಾರಿಕ್ ನಕಲಿ ಆಧಾರ್ ಕಾರ್ಡ್ ನೀಡಿ ಮೈಸೂರಿನಲ್ಲಿ ನೆಲೆಸಿದ್ದ ಹಿನ್ನೆಲೆಯಲ್ಲಿ ಇಲ್ಲಿನ ಪೊಲೀಸರು ಬಾಡಿಗೆ ಮನೆಯಲ್ಲಿ ವಾಸವಿರುವವರ ಮಾಹಿತಿ ಪರಿಶೀಲನೆಗೆ ಮುಂದಾಗಿದ್ದಾರೆ.

ಮAಗಳೂರಿನಲ್ಲಿ ಇತ್ತೀಚೆಗೆ ಚಲಿಸು ತ್ತಿದ್ದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿ ಸಿತ್ತು. ಅದನ್ನು ಸಾಗಿಸುತ್ತಿದ್ದ ಶಾರಿಕ್ ಮೈಸೂರಿನ ಲೋಕನಾಯಕನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದ. ಕೊಠಡಿ ಬಾಡಿಗೆಗೆ ಪಡೆಯುವಾಗ ಆತ ಮನೆ ಮಾಲೀಕರಿಗೆ ನಕಲಿ ಆಧಾರ್ ಕಾರ್ಡ್ ನೀಡಿದ್ದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಿರುವ ಪೊಲೀಸರು, ಬಾಡಿಗೆದಾರರ ವಿವರವನ್ನು ಮನೆ ಮಾಲೀಕರಿಂದಲೇ ಸಂಗ್ರಹಿಸಿ ಅದರ ಅಸಲಿಯತ್ತು ಪರಿಶೀಲಿಸಲು ವಿಶೇಷ ಕ್ರಮ ಕೈಗೊಂಡಿದ್ದಾರೆ. ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಶನಿವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಸಂಬAಧ ಮಾಹಿತಿ ನೀಡಿ, ಮೈಸೂರು ಶಾಂತಿಯುತ ನಗರವಾ ಗಿದ್ದು, ಸಮಾಜ ವಿರೋಧಿ ಚಟುವಟಿಕೆ ಗಳು ನಡೆಯದಂತೆ ನಿಗಾ ವಹಿಸಲಿ ದ್ದೇವೆ. ಇದಕ್ಕೆ ಸಾರ್ವಜನಿಕರ ಸಹ ಕಾರ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಭೋಗ್ಯ ಹಾಗೂ ಬಾಡಿಗೆ ಪಡೆಯು ವವರ ವಿವರವನ್ನು ಮನೆ ಮಾಲೀಕರು ನಮಗೆ ನೀಡಬೇಕು. ಇದಕ್ಕಾಗಿ ಬಾಡಿ ಗೆಗಿರುವ ವ್ಯಕ್ತಿ ಅಥವಾ ಕುಟುಂಬದ ಮಾಹಿತಿ ಮತ್ತು ಪೇಯಿಂಗ್ ಗೆಸ್ಟ್ ಹೌಸ್‌ಗಳಲ್ಲಿ ವಾಸವಿರುವವರ ಮಾಹಿತಿಗೆ ಪ್ರತ್ಯೇಕ `ಸುರಕ್ಷಾ’ ನಮೂನೆಯನ್ನು ಸಿದ್ಧಪಡಿಸಲಾಗಿದೆ. ಎಲ್ಲಾ ಪೊಲೀಸ್ ಠಾಣೆಗಳಿಗೂ ವಿತರಿಸಲಾಗಿದ್ದು, ನಗರ ಪೊಲೀಸ್ ವೆಬ್‌ಸೈಟ್‌ನಲ್ಲೂ ಡೌನ್ ಲೋಡ್ ಮಾಡಿಕೊಳ್ಳಬಹುದು. ಬಳಿಕ ಭರ್ತಿ ಮಾಡಿದನಮೂನೆಯನ್ನು ಸಂಬAಧಪಟ್ಟ ಠಾಣೆಗೆ ನೀಡಿದರೆ ಬಾಡಿಗೆ ಅಥವಾ ಭೋಗ್ಯ ದಾರರು ನೀಡಿರುವ ಮಾಹಿತಿ ಹಾಗೂ ದಾಖಲೆ ಅಸಲಿಯೋ? ಅಥವಾ ನಕಲಿಯೋ? ಎನ್ನುವುದನ್ನು ಪರಿಶೀಲಿಸಿ ಹೇಳುತ್ತೇವೆ ಎಂದು ತಿಳಿಸಿದರು.

ಡಿಸೆಂಬರ್‌ನೊಳಗೆ ನೀಡಿ: ಈಗಾಗಲೇ ಬಾಡಿಗೆ/ಭೋಗ್ಯ ನೀಡಿದ್ದರೂ ಈ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಯೊಂದಿಗೆ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಡಿಸೆಂಬರ್ ತಿಂಗಳೊಳಗೆ ನೀಡಬೇಕು. ಇದು ಸಾರ್ವಜನಿಕರ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಮಾಡುತ್ತಿರುವುದರಿಂದ ಎಲ್ಲರೂ ಸಹಕರಿಸಬೇಕು. ನಮ್ಮ ಮನವಿಯನ್ನು ನಿರ್ಲಕ್ಷಿö್ಯಸಿ ನಿಗದಿತ ನಮೂನೆಯಲ್ಲಿ ಬಾಡಿಗೆದಾರರ ಮಾಹಿತಿ ನೀಡದಿದ್ದರೆ ತಾವೇ ಹೊಣೆಗಾರರಾಗಬೇಕಾಗುತ್ತದೆ. ಒಂದು ವೇಳೆ ಬಾಡಿಗೆದಾರರು ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಅಂತಹವರಿಗೆ ಮನೆ ಅಥವಾ ಕೊಠಡಿ ನೀಡಿದ್ದ ಮಾಲೀಕರೂ ಭಾಗೀದಾರರಾಗುತ್ತಾರೆ. ಹಾಗಾಗಿ ಬಾಡಿಗೆದಾರರ ವಿವರವನ್ನು ಕಡ್ಡಾಯವಾಗಿ ನೀಡಬೇಕು. ಇದು ಮನೆ, ಕೊಠಡಿ, ಪಿಜಿ, ಸರ್ವೀಸ್ ಅಪಾರ್ಟ್ಮೆಂಟ್, ಹೋಂಸ್ಟೇ ಮಾಲೀಕರಿಗೂ ಅನ್ವಯವಾಗುತ್ತದೆ ಎಂದು ಹೇಳಿದರು.

ಅಸಲೀಯತ್ತು ಪರಿಶೀಲನೆ: ಆಧಾರ್, ಪಾನ್‌ಕಾರ್ಡ್, ಡ್ರೆöÊವಿಂಗ್ ಲೈಸೆನ್ಸ್ ಇನ್ನಿತರ ದಾಖಲೆಗಳನ್ನು ನಕಲು ಮಾಡಿ ವಂಚಿಸಬಹುದು. ದಾಖಲೆ ಬಗ್ಗೆ ಏನಾದರೂ ಅನುಮಾನ ವಾದರೆ ಅದನ್ನು ಪೊಲೀಸರಿಗೆ ನೀಡಿದರೆ ಪರಿಶೀಲನೆ ನಡೆಸಿ ಅಸಲಿಯೋ? ನಕಲಿಯೋ? ಎಂದು ತಿಳಿಸುತ್ತೇವೆ. ಮನೆ ಕೆಲಸಕ್ಕೆ ಸೇರಿಸಿಕೊಳ್ಳುವಾಗ ಅವರ ಪೂರ್ವಾಪರ ತಿಳಿದು ಕೊಳ್ಳಲು ಈಗಾಗಲೇ ವ್ಯವಸ್ಥೆ ಜಾರಿಯಲ್ಲಿದೆ. ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಅರ್ಜಿ ನೀಡಿದರೆ ಪರಿಶೀಲಿಸಲಾಗುವುದು. ಇನ್ನು ಹೋಟೆಲ್‌ಗಳಲ್ಲಿ ಕೊಠಡಿ ಬಾಡಿಗೆ ನೀಡುವಾಗ ಆ ವ್ಯಕ್ತಿಯ ನಿಖರ ದಾಖಲೆ ಪರಿಶೀಲಿಸಿ, ಅದರ ಪ್ರತಿಯನ್ನು ಪಡೆದುಕೊಳ್ಳ ಬೇಕು. ನಾವು ರ‍್ಯಾಂಡಮ್ ಆಗಿ ಪರಿಶೀಲನೆ ನಡೆಸುತ್ತೇವೆ. ಕೊಠಡಿ ಬಾಡಿಗೆ ಪಡೆದವರ ನಿಖರ ದಾಖಲೆ ಸಂಗ್ರಹಿಸದ ಹೋಟೆಲ್‌ನವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಸಾಕಷ್ಟು ಕ್ರಮ: ಇನ್ನು ಮುಂದೆ ನಿಗದಿತವಾಗಿ ಮೊಹಲ್ಲಾ ಸಭೆಗಳನ್ನು ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಜನರಿಂದಲೇ ಮಾಹಿತಿ ಸಂಗ್ರಹಿಸಲಾಗುವುದು. ಹಿರಿಯ ನಾಗರಿಕರ ಸಭೆ, ಯೂತ್ ಕಮಿಟಿ ಮೀಟಿಂಗ್ ಹೀಗೆ ಈಗಾಗಲೇ ಅನುಷ್ಠಾನದಲ್ಲಿರುವ ಚಟುವಟಿಕೆ ಗಳಿಗೆ ಚುರುಕು ನೀಡಲಾಗುತ್ತದೆ. ನಗರದ ೯ ಗಡಿ ಪ್ರದೇಶದಲ್ಲಿ ವಾಹನಗಳ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ ೨೩ ಸ್ಥಳಗಳಲ್ಲಿ ರಾತ್ರಿ ಸಂಚರಿಸುವ ವಾಹನಗಳ ಮೇಲೆ ನಿಗಾ ಇಡಲಾಗಿದೆ. ೧ ವಾರದಿಂದ ರಾತ್ರಿ ೧೧ ಗಂಟೆ ನಂತರ ಅಂಗಡಿಗಳನ್ನು ಮುಚ್ಚಿಸಲಾಗು ತ್ತಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡಲಾಗುತ್ತಿದೆ. ರೌಡಿಶೀಟರ್‌ಗಳ ಚಟುವಟಿಕೆ ಬಗ್ಗೆ ನಿಗಾ ಇಡಲಾಗಿದ್ದು, ಕೆಲವರ ಗಡಿಪಾರಿಗೂ ಕ್ರಮ ಕೈಗೊಳ್ಳಲಾಗಿದೆ. ನಾನು ನಾಲ್ಕೆöÊದು ದಿನಗಳಿಂದ ಖಾಸಗಿ ವಾಹನದಲ್ಲಿ ಮೈಸೂರು ನಗರ ಸುತ್ತಿ ಎಲ್ಲವನ್ನೂ ಗಮನಿಸುತ್ತಿದ್ದೇನೆ. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡಬAದರೂ ಅದನ್ನು ಸರಿಪಡಿಸಲು ಖಂಡಿತವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.

ಹೊಸ ಪಾರ್ಕಿಂಗ್ ವ್ಯವಸ್ಥೆ: ನಗರದ ಪ್ರಮುಖ ವಾಣ ಜ್ಯ ಪ್ರದೇಶದಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಅನುವಾಗುವ ರೀತಿಯಲ್ಲಿ ಪರಿಶೀಲನೆ ನಡೆಸಿ ಪ್ರಸ್ತಾವನೆ ನೀಡುವಂತೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಹಾಗೂ ಸಂಚಾರ ಎಸಿಪಿಗೆ ಸೂಚನೆ ನೀಡಿದ್ದೇನೆ. ನಂತರ ಹೊಸ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ.

`ಸುರಕ್ಷಾ’ ನಮೂನೆಯಲ್ಲೇನಿದೆ?
ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾಗೋತ್ ತಮ್ಮ ಮೊದಲ ಸುದ್ದಿಗೋಷ್ಠಿಯಲ್ಲಿ ವಿಶೇಷ `ಸುರಕ್ಷಾ’ ಕ್ರಮದ ಅವಶ್ಯಕತೆಯನ್ನು ತಮ್ಮ ಸಂಬAಧಿಕರೊಬ್ಬರ ಹತ್ಯೆ ಘಟನೆಯನ್ನು ಉದಾಹರಿಸಿ ತಿಳಿಸಿದರು. ನಮ್ಮ ಸಂಬAಧಿಕರೊಬ್ಬರ ಮಕ್ಕಳಿಬ್ಬರು ವಿದೇಶದಲ್ಲಿದ್ದಾರೆ. ಹಾಗಾಗಿ ಅವರೊಬ್ಬರೇ ಮನೆಯಲ್ಲಿದ್ದರು. ಮೇಲಂತಸ್ತಿನ ಮನೆಯನ್ನು ಬಾಡಿಗೆ ನೀಡಿದ್ದರು. ಅಲ್ಲಿದ್ದ ವ್ಯಕ್ತಿ ಕೋವಿಡ್ ಸಂದರ್ಭದಲ್ಲಿ ಅನೇಕ ಬಾರಿ ಅಜ್ಜಿ ಹಣ ಕೊಡಿ ಎಂದು ಪಡೆದಿದ್ದ. ಒಮ್ಮೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಅವರನ್ನು ಹತ್ಯೆ ಮಾಡಿ, ಚಿನ್ನಾಭರಣ ದೋಚಿ ಪರಾರಿಯಾದ. ಇಂತಹ ಹಲವು ಘಟನೆಗಳು ನಡೆದಿವೆ. ಹಾಗಾಗಿ ಅಸಲಿ ದಾಖಲೆಗಳ ಪಡೆದು ಪೂರ್ವಾಪರ ತಿಳಿದು ಬಾಡಿಗೆ ನೀಡಬೇಕು ಎಂದು ತಿಳಿಸಿದರು. ಬಾಡಿಗೆ ಮನೆಯಲ್ಲಿರುವ ವ್ಯಕ್ತಿ ಅಥವಾ ಕುಟುಂಬದವರ ಮಾಹಿತಿಯನ್ನು `ಸುರಕ್ಷಾ’ ನಮೂನೆ ೧ರಲ್ಲಿ ಸಲ್ಲಿಸಬೇಕು. ಪೇಯಿಂಗ್ ಗೆಸ್ಟ್ಹೌಸ್‌ನಲ್ಲಿದ್ದವರ ವಿವರವನ್ನು `ಸುರಕ್ಷಾ’ ನಮೂನೆ ೨ರಲ್ಲಿ ಸಲ್ಲಿಸಬೇಕು. ಎರಡರಲ್ಲೂ ಮಾಲೀಕರು ಹಾಗೂ ಬಾಡಿಗೆದಾರರ ಪೂರ್ಣ ಮಾಹಿತಿಯ ಜೊತೆಗೆ ಬಾಡಿಗೆದಾರರ ಪಾಸ್‌ಪೋರ್ಟ್, ಓಟರ್ ಐಡಿ, ಆಧಾರ್ ಕಾರ್ಡ್, ಡಿಎಲ್, ಪಡಿತರ ಚೀಟಿ ಇದರಲ್ಲಿ ಯಾವುದಾದರೊಂದು ದಾಖಲೆ ಪ್ರತಿಯನ್ನು ಲಗತ್ತಿಸಬೇಕು ಎಂದರು.

Translate »