`ಆಧಾರ್’ ಆಧಾರವಾಗಬೇಕಿದ್ದರೆ ಕಾಲ ಕಾಲಕ್ಕೆ ನವೀಕರಿಸಿಕೊಳ್ಳಿ…
ಮೈಸೂರು

`ಆಧಾರ್’ ಆಧಾರವಾಗಬೇಕಿದ್ದರೆ ಕಾಲ ಕಾಲಕ್ಕೆ ನವೀಕರಿಸಿಕೊಳ್ಳಿ…

November 27, 2022

ಸರ್ಕಾರದ ಹೊಸ ಹೊಸ ಯೋಜನೆಗಳ ಪ್ರಯೋಜನ ಪಡೆಯಲು ಇದು ಅನಿವಾರ್ಯ

ಕನಿಷ್ಠ ೧೦ ವರ್ಷಕ್ಕೊಮ್ಮೆ ಸಮರ್ಪಕ ಮಾಹಿತಿಯೊಂದಿಗೆ ನವೀಕರಿಸಿಕೊಳ್ಳುವುದು ಅವಶ್ಯ

ಬಿಟ್ಟು ಹೋದ ಇಲ್ಲವೇ ಹೊಸ ಮಾಹಿತಿ ಸೇರ್ಪಡೆಗೂ ಅವಕಾಶವಿದೆ

ಮೈಸೂರು,ನ.೨೬(ಎಂಟಿವೈ)- ಹತ್ತು ವರ್ಷದ ಹಿಂದೆ ಪಡೆದ ಆಧಾರ್ ಕಾರ್ಡ್ ಪ್ರಸ್ತುತವಲ್ಲ. ಸರ್ಕಾರಗಳ ಆಯಾ ಕಾಲದ ಪ್ರಯೋ ಜನ ಪಡೆಯಬೇಕಿದ್ದರೆ ಹೊಂದಿರುವ ಅಗತ್ಯ ದಾಖಲೆ ನೀಡಿ, ಆಧಾರ್ ಕಾರ್ಡ್ ನವೀಕರಿಸಿಕೊಳ್ಳುವುದು ಅವಶ್ಯ. ಇದರ ಬಗ್ಗೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ವು ಸಲಹೆ ನೀಡಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ. ಅಪೂರ್ಣ ಮಾಹಿತಿ ಹಾಗೂ ಅಗತ್ಯ ದಾಖಲೆ ನೀಡದೆ ಯಾವಾಗಲೋ ಮಾಡಿಸಿ ಕೊಂಡ ಆಧಾರ್ ಕಾರ್ಡ್ ಪ್ರಸ್ತುತ ನಿರುಪಯುಕ್ತವಾಗ ಬಹುದು. ಯುಐಡಿಎಐ ನೀಡಿರುವ ಸೂಚನೆ ಮೇರೆಗೆ ೨೦೦೯ರಂದು ಆಧಾರ್ ಕಾರ್ಡ್ ಮಾಡಿಸಿಕೊಂಡಿರುವವರು ಅಗತ್ಯ ದಾಖಲೆ ನೀಡಿ, ಈಗ ನವೀಕರಣ ಮಾಡಿಸಿಕೊಳ್ಳ ಬೇಕಾಗಿದೆ. ಪಡಿತರ ಚೀಟಿ, ಬ್ಯಾಂಕ್ ಖಾತೆ, ಮೊಬೈಲ್ ಸಿಮ್ ಕಾರ್ಡ್, ವಿದ್ಯಾರ್ಥಿ ವೇತನ, ಸಾಲ ಸೌಲಭ್ಯ ಸೇರಿದಂತೆ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವುದು, ಸಮಗ್ರ ಮಾಹಿತಿ ಹೊಂದಿರುವ ಆಧಾರ್ ಕಾರ್ಡ್ದಾರರಿಗೆ ಮಾತ್ರ ಸಾಧ್ಯವಾಗುತ್ತದೆ. ಹಲವು ಫಲಾನುಭವಿಗಳು ಆಧಾರ್ ಕಾರ್ಡ್ ದೋಷದಿಂದಾಗಿ ನಾನಾ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಯುಐಡಿಎಐ ೧೦ ವರ್ಷದ ಹಿಂದೆ ಮಾಡಿಸಿಕೊಂಡಿರುವ ಆಧಾರ್ ಕಾರ್ಡ್ಗೆ ಲೇಟೆಸ್ಟ್ ಮಾಹಿತಿ ನೀಡಿ, ಅಪ್ಡೇಟ್ ಮಾಡಿಸಿಕೊಳ್ಳಲು ಸೂಚನೆ ನೀಡಿದೆ.

ಸಲ್ಲಿಸಬೇಕಾದ ದಾಖಲೆ: ಆಧಾರ್ ಕಾರ್ಡ್ ನವೀಕರಣ ಕ್ಕಾಗಿ ಸಾರ್ವಜನಿಕರು ವೋಟರ್ ಐಡಿ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಡ್ರೆöÊವಿಂಗ್ ಲೈಸೆನ್ಸ್ ಹಾಗೂ ಪಾಸ್‌ಪೋರ್ಟ್ ಸೈಜ್‌ನ ೩ ಫೋಟೊದೊಂದಿಗೆ ನಿಗದಿತ ಫಾರಂ ಭರ್ತಿ ಮಾಡಿ ಸಲ್ಲಿಸಬೇಕಾಗಿದೆ. ನವೀಕರಣ ವೇಳೆ ವಿಳಾಸ ಬದಲಾಗಿದ್ದರೆ, ಇನ್ಷಿಯಲ್ ಬದಲಾವಣೆ, ಮೊಬೈಲ್ ನಂಬರ್ ಬದಲಿಸುವುದೂ ಸೇರಿದಂತೆ ಕೆಲ ಮಾಹಿತಿ ಬದಲಿಸಬೇಕಾದರೆ ಅದಕ್ಕೆ ಪೂರಕವಾದ ದಾಖಲೆ ಹಾಜರುಪಡಿಸಬೇಕು. ಸಾರ್ವಜನಿಕರು ನೀಡುವ ಮಾಹಿತಿಗೆ ಅನುಗುಣವಾಗಿ ಇತ್ತೀಚಿನ ಚಿತ್ರದೊಂದಿಗೆ ಒಂದು ತಿಂಗ ಳೊಳಗೆ ಹೊಸ ಆಧಾರ್ ಕಾರ್ಡ್ ಕೈ ಸೇರಲಿದೆ.

ಸುಲಭ ವಿಧಾನ: ಈ ಹಿಂದೆ ಆಧಾರ್ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತ ಜನರು ಕಾಣುತ್ತಿದ್ದರು. ಆದರೆ, ಈಗ ಸುಲಭ ವಿಧಾನದಲ್ಲಿ ಆಧಾರ್ ಕಾರ್ಡ್ ನವೀಕರಣ ಮಾಡಿಸಿಕೊಳ್ಳ ಬಹುದಾಗಿದೆ. ಆನ್‌ಲೈನ್‌ನಲ್ಲೂ ನವೀಕರಣ ಮಾಡಿಕೊಳ್ಳ ಬಹುದಾಗಿದೆ. ಇಲ್ಲದಿದ್ದರೆ ಮೈಸೂರಲ್ಲಿರುವ ಆಧಾರ್ ಕೇಂದ್ರಗಳಲ್ಲೂ ಮಾಡಿಕೊಳ್ಳಬಹುದಾಗಿದೆ.
ಸರಸ್ವತಿಪುರಂ ಕೇಂದ್ರ: ಮೈಸೂರಿನ ಸರಸ್ವತಿಪುರಂ ನಲ್ಲಿರುವ ಆಧಾರ್ ಕೇಂದ್ರದಲ್ಲಿ ೫ ಯೂನಿಟ್‌ಗಳಿದ್ದು, ದಾಖಲೆ ಪರಿಶೀಲನೆ, ವಿಚಾರಣೆ, ನವೀಕರಣಕ್ಕೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಯುಐಡಿಎಐ ನೇರ ಸಂಪರ್ಕವಿರುವ ಸರಸ್ವತಿಪುರಂ ಆಧಾರ್ ಕೇಂದ್ರದಲ್ಲಿ ಆಧಾರ್ ಕಾರ್ಡ್ ನವೀಕರಣ, ಬಾಲ ಆಧಾರ್, ತಿದ್ದುಪಡಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನೇರವಾಗಿ ಮುಖ್ಯ ಕಚೇರಿಗೆ ಮಾಹಿತಿ ರವಾನೆಯಾಗುವುದರಿಂದ ಸಾರ್ವ ಜನಿಕರಿಗೆ ಪುನರ್ ನವೀಕೃತ ಆಧಾರ್ ಕಾರ್ಡ್ ಬಹು ಬೇಗನೆ ಕೈಸೇರಲಿದೆ. ಈ ಕೇಂದ್ರದಲ್ಲಿ ದಿನಕ್ಕೆ ೮೦೦ ರಿಂದ ೧೨೦೦ ಮಂದಿಗೆ ಆಧಾರ್ ಕಾರ್ಡ್ ಮಾಡಿಕೊಡುವ ಸೌಲಭ್ಯವಿದೆ. ಗ್ರಾಮೀಣ ಪ್ರದೇಶ ಜನರಿಗೆ ಈ ಕೇಂದ್ರ ಉಪಯುಕ್ತವಾಗಲಿದೆ. ಎಟಿಎಂ ಮಾದÀರಿಯ ಆಧಾರ್ ಕಾರ್ಡ್ಗೆ ಈ ಕೇಂದ್ರದಲ್ಲಿ ನೋಂದಣ ಮಾಡಿಕೊಳ್ಳ ಲಾಗುತ್ತಿದೆ. ೫೦ ರೂ. ಶುಲ್ಕ
ಪಾವತಿಸಿ ಆಧಾರ್ ಪಿವಿಸಿ ಕಾರ್ಡ್ ನೋಂದಣ ಮಾಡಿಕೊಳ್ಳಬಹುದಾಗಿದೆ. ತಿಂಗಳ ನಂತರ ಎಟಿಎಂ ಕಾರ್ಡ್ ಮಾದರಿಯ ಆಧಾರ್ ಕಾರ್ಡ್ ಅಂಚೆ ಮೂಲಕ ಮನೆಗೆ ತಲುಪಲಿದೆ. ಅದು ಸದಾ ಜೊತೆಯಲ್ಲಿರಿಸಿಕೊಳ್ಳಲು ಸಹಕಾರಿಯಾಗಲಿದೆ.

ವಿಜಯನಗರ ಕೇಂದ್ರ: ಮೈಸೂರಿನ ವಿಜಯನಗರದ ಕಾಳಿದಾಸ ರಸ್ತೆಯಲ್ಲಿ ರುವ ಆಧಾರ್ ಕೇಂದ್ರವೂ ಸಾರ್ವ ಜನಿಕರಿಗೆ ಸೇವೆ ಒದಗಿಸುತ್ತಿದೆ. ಈ ಕೇಂದ್ರದಲ್ಲೂ ೫ ಯೂನಿಟ್‌ಗಳಿದ್ದು, ದಿನಕ್ಕೆ ೮೦೦ರಿಂದ ೧೨೦೦ ಜನರ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿ ಕೊಡುವ ವ್ಯವಸ್ಥೆ ಇದೆ. ವಿಜಯನಗರ, ಹಿನಕಲ್, ಕೂರ್ಗಳ್ಳಿ ಸೇರಿದಂತೆ ಸುತ್ತಮುತ್ತ ಲಿನ ಗ್ರಾಮಗಳ ಜನರಿಗೆ ಈ ಕೇಂದ್ರದಲ್ಲಿ ಆಧಾರ್ ಕಾರ್ಡ್ ಸೌಲಭ್ಯ ಒದಗಿಸುತ್ತಿದೆ.
ವಿವಿಧೆಡೆ ಸೇವೆ ಲಭ್ಯ: ಜನರಿಗೆ ಆಧಾರ್ ಕಾರ್ಡ್ ತಿದ್ದುಪಡಿ ಸೌಲಭ್ಯ ಕೆಲ ಸ್ಥಳಗಳಲ್ಲಿ ದೊರೆಯುತ್ತಿದೆ. ಮೈಸೂರು ಒನ್ ಕೇಂದ್ರ, ಬಿಎಸ್‌ಎನ್‌ಎಲ್ ಕಚೇರಿ, ಕೆಲವು ಖಾಸಗಿ ಏಜೆನ್ಸಿಗಳ ಮೂಲಕವೂ ಆನ್‌ಲೈನ್ ಮೂಲಕ ತಿದ್ದುಪಡಿ ಮಾಡಿಸಿಕೊಳ್ಳುವ ವ್ಯವಸ್ಥೆ ಇದೆ.

ತಿದ್ದುಪಡಿಗೆ ಶುಲ್ಕ
ಆಧಾರ್ ಕಾರ್ಡ್ ನವೀಕರಣಕ್ಕೆ ವಿವಿಧ ದಾಖಲೆಗಳ ವಿವರ ನಮೂದಿಸಲು ಒಬ್ಬರಿಗೆ ೫೦ ರೂ, ಬಯೋಮೆಟ್ರಿಕ್ ಸೇರಿದಂತೆ ತಿದ್ದುಪಡಿ ಮಾಡಲು ೧೦೦ ರೂ., ಪಿವಿಸಿ ಕಾರ್ಡ್ಗಾದರೆ ೫೦ ರೂ. ಪಾವತಿಸಬೇಕಾಗಿದೆ. ೫ ವರ್ಷದ ಹಿಂದೆ ಬಯೋಮೆಟ್ರಿಕ್ (ಬೆರಳಚ್ಚು) ಸೇರಿದಂತೆ ಇನ್ನಿತರ ಮಾಹಿತಿ ನೀಡಿ ನವೀಕರಣ ಮಾಡಿಸಿಕೊಂಡಿರುವವರು ಮತ್ತೆ ನವೀಕರಣ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಬಯೋ ಮೆಟ್ರಿಕ್ ಆಗದೇ ಇರುವವರು, ವಿಳಾಸ ಬದಲಾಗಿದ್ದರೆ ತಿದ್ದುಪಡಿ ಮಾಡಿಸಿಕೊಳ್ಳಬೇಕಾಗಿದೆ.

Translate »