ಎಸ್‍ಬಿಎಂ ಬಡಾವಣೆ ಮ್ಯಾನ್‍ಹೋಲ್ ದುರಸ್ತಿಪಡಿಸಿದ ಗ್ರಾಪಂ ಸದಸ್ಯರು
ಮೈಸೂರು

ಎಸ್‍ಬಿಎಂ ಬಡಾವಣೆ ಮ್ಯಾನ್‍ಹೋಲ್ ದುರಸ್ತಿಪಡಿಸಿದ ಗ್ರಾಪಂ ಸದಸ್ಯರು

August 18, 2020

ಮೈಸೂರು, ಆ.17(ಎಂಕೆ)- ಮೈಸೂರಿನ ಬೋಗಾದಿ ಮುಖ್ಯರಸ್ತೆಯಲ್ಲಿರುವ ಎಸ್‍ಬಿಎಂ ಬಡಾವಣೆಯಲ್ಲಿ ಹಾಳಾಗಿದ್ದ ಯುಜಿಡಿ (ಒಳಚರಂಡಿ) ಮ್ಯಾನ್‍ಹೋಲ್‍ಗಳನ್ನು ಭಾನುವಾರ ದುರಸ್ತಿಗೊಳಿಸಲಾಯಿತು.

ಆ.6ರಂದು ‘ಮೈಸೂರು ಮಿತ್ರ’ ದಿನ ಪತ್ರಿಕೆಯಲ್ಲಿ ‘ಲಕ್ಷ ಲಕ್ಷ ಕೊಟ್ಟು ನಿವೇಶನ ಖರೀದಿಸಿ, ಸಾಲ ಮಾಡಿ ಮನೆಕಟ್ಟಿದವರ 23 ವರ್ಷದ ಗೋಳು ಕೇಳುವವರೇ ಇಲ್ಲ!’ ಶೀರ್ಷಿಕೆಯಡಿ ಬಡಾವಣೆಯಲ್ಲಿನ ಸಮಸ್ಯೆ ಗಳ ಕುರಿತು ವರದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ಬೋಗಾದಿ ಗ್ರಾಪಂ ಸದಸ್ಯರಾದ ಹೊನ್ನೇಗೌಡ, ಚಂದ್ರಶೇಖರ್, ಮ್ಯಾನ್ ಹೋಲ್‍ಗಳ ದುರಸ್ತಿ ಕಾರ್ಯ ಕೈಗೊಂಡರು.

ಶಾಶ್ವತ ಪರಿಹಾರಕ್ಕೆ ಒತ್ತಾಯ: 1500 ನಿವೇಶನಗಳಿರುವ ಬಡಾವಣೆಯಲ್ಲಿ ಹಲವು ಸಮಸ್ಯೆಗಳಿವೆ. ಕೆಲವೆಡೆ ಮ್ಯಾನ್‍ಹೋಲ್‍ಗಳು ತುಂಬಿ ಹರಿಯುತ್ತಲೇ ಇರುತ್ತವೆ. ಬಡಾವಣೆಯಲ್ಲಿ ಮನೆಗಳ ಸಂಖ್ಯೆ ಹೆಚ್ಚಾಗುತ್ತಿವೆ. ಯುಜಿಡಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು ಎಂದು ನಿವಾಸಿಗಳು ಒತ್ತಾಯಿಸಿದರು.

ಮುಡಾ ಅಧಿಕಾರಿಗಳು: `ಎರಡು ದಿನಗಳ ಹಿಂದೆ ಬಡಾವಣೆ ವೀಕ್ಷಣೆಗೆ ಬಂದಿದ್ದ ಮುಡಾ ಅಧಿಕಾರಿಗಳು ನಿವಾಸಿಗಳ ಅಹವಾಲು ಆಲಿಸದೇ ವಾಪಸ್ ಹೋಗಿದ್ದಾರೆ. ನಮ್ಮಿಂದ ತೆರಿಗೆ ಕಟ್ಟಿಸಿಕೊಳ್ಳುವವರೇ ಈ ರೀತಿ ಅಸಡ್ಡೆ ತೋರಿದರೆ ನಿವಾಸಿಗಳು ಯಾರನ್ನು ಕೇಳಬೇಕು? ಎಂದು ನಿವಾಸಿಗಳು ‘ಮೈಸೂರು ಮಿತ್ರ’ನಲ್ಲಿ ದೂರಿದರು.

Translate »