ಮೈಸೂರು, ಆ.17(ಪಿಎಂ)- ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮೈಸೂರು ರೈಲ್ವೆ ವಸ್ತು ಸಂಗ್ರಹಾಲಯದಿಂದ 5ರಿಂದ 10 ವರ್ಷದ ಮಕ್ಕಳಿಗೆ ಶನಿವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ವಸ್ತು ಸಂಗ್ರಹಾಲಯ ಆವರಣದಲ್ಲಿ ಮುಕ್ತ ಚಿತ್ರಕಲೆ ಸ್ಪರ್ಧೆ ನಡೆಸಲಾಯಿತು. ನಗರದ 50ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ತಮ್ಮ ಕಲಾಕೌಶಲ ಅನಾವರಣಗೊಳಿಸಿದರು. ರೈಲುಗಳು, ರೈಲು ಪ್ರಯಾಣ, ಅಥವಾ ರೈಲ್ವೆ ವಸ್ತು ಸಂಗ್ರಹಾ ಲಯದ ಯಾವುದೇ ವಿಷಯ ಕುರಿತಂತೆ ಚಿತ್ರಕಲೆ ರಚಿಸಲು ಸೂಚಿಸಲಾಗಿತ್ತು. ರೈಲ್ವೆ ಅಧಿಕಾರಿಗಳ ಆಯ್ಕೆ ಸಮಿತಿಯು ಮಕ್ಕಳ ಚಿತ್ರಕಲೆಯ ಮೌಲ್ಯಮಾಪನ ನಡೆಸಿ, 7 ಸಮಾಧಾನಕರ ಬಹುಮಾನ ಸೇರಿದಂತೆ 1 ಪ್ರಥಮ, 2 ದ್ವಿತೀಯ ಹಾಗೂ 1 ತೃತೀಯ ಬಹುಮಾನ ಘೋಷಿಸಿತು. ವೇದಶ್ರೀ ವಾಲಿಂಬೆ ಪ್ರಥಮ, ಹೆಬ ಡಿ.ಲಿಯೋನಾ, ವರ್ಷಿತಾ ದ್ವಿತೀಯ ಹಾಗೂ ಪಿ.ಮಯೂರ್ ತೃತೀಯ ಬಹುಮಾನ ಗಳಿಸಿದರು.
ನೈಋತ್ಯ ರೈಲ್ವೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣ ಗರ್ಗ್ ಬಹು ಮಾನ ವಿತರಿಸಿ ಮಾತನಾಡಿ, ಕಲೆಯಲ್ಲಿ ಸೃಜನಶೀಲತೆ ಪ್ರದರ್ಶಿಸಿದ ಮಕ್ಕಳನ್ನು ನೋಡಿ ಸಂತಸವಾಗಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳು ವುದು ಮುಖ್ಯ. ಸೋಲು-ಗೆಲುವು ನಂತ ರದ ವಿಷಯ. ಭಾಗವಹಿಸಿದವರೆಲ್ಲರೂ ತಮ್ಮ ವಿಶಿಷ್ಟ ಕಲೆಯನ್ನು ಅನಾವರಣ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ದರು. ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆ ಉಪಾಧ್ಯಕ್ಷೆ ಸುಭಾಶಿಣಿ ದೇವ ಸಹಾಯಂ, ಮೈಸೂರು ವಿಭಾಗದ ಹಿರಿಯ ವಿಭಾಗೀಯ ಮೆಕ್ಯಾನಿಕಲ್ ಇಂಜಿನಿ ಯರ್ ಶಾಂತಿಬಾಬು ಮತ್ತಿತರರಿದ್ದರು.