ಸಂತ್ರಸ್ತರು ದೂರು ನೀಡದಿರುವುದೇ ಕಾಮುಕರಿಗೆ ವರದಾನವಾಗಿತ್ತು
ಮೈಸೂರು

ಸಂತ್ರಸ್ತರು ದೂರು ನೀಡದಿರುವುದೇ ಕಾಮುಕರಿಗೆ ವರದಾನವಾಗಿತ್ತು

August 30, 2021

ಹಲವು ಜೋಡಿಗಳ ಮೇಲೆ ದೌರ್ಜನ್ಯವೆಸಗಿಯುವತಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ದುರುಳರು
ಮೈಸೂರು, ಆ.೨೯(ಎಂಟಿವೈ)-ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾ ಚಾರವೆಸಗಿ ಬಂಧನಕ್ಕೊಳಗಾಗಿರುವ ಆರೋಪಿಗಳು ಬೆಟ್ಟದ ತಪ್ಪಲು ಸೇರಿದಂತೆ ನಿರ್ಜನ ಪ್ರದೇಶದಲ್ಲಿ ಯುವ ಜೋಡಿಗಳ ಮೇಲೆ ಹಲ್ಲೆ ಮಾಡಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿ ಹಣ, ಆಭರಣ ದೋಚಿದ ಬಗ್ಗೆ ತಿಳಿಸಿದ್ದು, ಸಂತ್ರಸ್ತರು ಪೊಲೀಸರಿಗೆ ದೂರು ನೀಡದಿರುವುದೇ ಇವರಿಗೆ ವರದಾನವಾಗಿತ್ತು ಎನ್ನಲಾಗಿದೆ.

ಅಜ್ಞಾತ ಸ್ಥಳದಲ್ಲಿ ಪೊಲೀಸರು ನಡೆಸುತ್ತಿರುವ ವಿಚಾರಣೆ ವೇಳೆ ಅತ್ಯಾಚಾರಿಗಳು ತಮ್ಮ ಕ್ರೌರ್ಯವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದು, ಕೆಲವು ಮಹತ್ತರ ವಿಚಾರ ವನ್ನು ಬಾಯ್ಬಿಡುತ್ತಿದ್ದಾರೆ ಎನ್ನಲಾಗಿದೆ. ಕೂಲಿ ಮಾಡಲು ತರಕಾರಿ ವಾಹನಗಳಲ್ಲಿ ಮೈಸೂರಿಗೆ ಆಗಮಿಸುತ್ತಿದ್ದ ದುಷ್ಟರ ಈ ತಂಡ ಎಪಿಎಂಸಿ ಸುತ್ತಮುತ್ತ ಬಾರ್ ಅಥವಾ ವೈನ್‌ಶಾಪ್‌ನಲ್ಲಿ ಮದ್ಯ ಖರೀದಿಸಿ ಮಾಂಸಾಹಾರಿ ಊಟವನ್ನು ಪಾರ್ಸಲ್ ತೆಗೆದುಕೊಂಡು ಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶದಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ನಿರ್ಜನ ಪ್ರದೇಶದಲ್ಲಿ ಮೈಮರೆತು ಏಕಾಂತದಲ್ಲಿದ್ದ ಯುವ ಜೋಡಿಯ ಮೇಲೆ ಎರಗುತ್ತಿದ್ದ ದುರುಳರು, ಅವರ ಬಳಿ ಇದ್ದ ಹಣ ಕಸಿದು ಮೈಮೇಲಿದ್ದ ಆಭರಣ ವನ್ನು ದೋಚುತ್ತಿದ್ದರು. ಅಲ್ಲದೇ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗು ತ್ತಿದ್ದರು. ಮೈಮುಟ್ಟುವುದು, ಕೆನ್ನೆ ಸವರುವುದು, ಮುತ್ತಿಡುವ ಮೂಲಕ ಪ್ರಿಯಕರನ ಎದುರಿಗೆ ಯುವತಿಯನ್ನು ಕಾಡುತ್ತಿದ್ದುದಾಗಿ ಆರೋಪಿಗಳೇ ಬಾಯ್ಬಿಟ್ಟಿದ್ದಾರೆ.

ಹಲವು ಯುವ ಜೋಡಿಯನ್ನು ದೋಚಿದ್ದರೂ ಹಾಗೂ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದರೂ, ಯಾರೊಬ್ಬರೂ ದೂರು ನೀಡಿರಲಿಲ್ಲ. ಪೋಷಕರ ಭಯದಿಂದ ದೂರು ನೀಡಲು ಪ್ರೇಮಿಗಳು ಹಿಂಜರಿಯುತ್ತಿದ್ದುದನ್ನೇ ಬಂಡವಾಳವಾಗಿಸಿಕೊAಡು ಈ ಆರೋಪಿಗಳು ಕೃತ್ಯ ಮುಂದುವರೆಸುತ್ತಿದ್ದರು. ಯುವ ಜೋಡಿಗಳನ್ನು ದೋಚಿದರೆ ಪ್ರಕರಣ ದಾಖಲಾಗುವುದಿಲ್ಲ ಎಂಬ ಮಾಹಿತಿಯನ್ನು ಅರಿತಿದ್ದ ಕಿಡಿಗೇಡಿಗಳು ಮೈಸೂರಿಗೆ ಬಂದಾಗಲೆಲ್ಲಾ ನಿರ್ಜನ ಪ್ರದೇಶದಲ್ಲಿ ಯುವ ಜೋಡಿಯಿಂದ ಹಣ ಮತ್ತು ಆಭರಣ ದೋಚಿ ಪರಾರಿಯಾಗುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Translate »