ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್‍ನಿಂದ ಮಾಸ್ಕ್, ಗ್ಲೌಸ್ ಕೊಡುಗೆ
ಮೈಸೂರು

ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್‍ನಿಂದ ಮಾಸ್ಕ್, ಗ್ಲೌಸ್ ಕೊಡುಗೆ

April 4, 2020

ಮೈಸೂರು,ಏ.3(ಎಂಟಿವೈ)- ಕೋವಿಡ್-19 ವೈರಾಣು ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ಸಿಬ್ಬಂದಿ ಹಾಗೂ ಅಗತ್ಯ ವುಳ್ಳವರಿಗಾಗಿ ಟಿವಿಎಸ್ ಮೋಟಾರ್ ಕಂಪನಿಯ ಸಾಮಾಜಿಕ ಸೇವಾ ವಿಭಾಗದ `ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್’ನಿಂದ ಕೊಡುಗೆಯಾಗಿ 10 ಸಾವಿರ ಮಾಸ್ಕ್ ಹಾಗೂ 3 ಸಾವಿರ ಗ್ಲೌಸ್‍ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.

ಮೈಸೂರಿನ ನಜರ್‍ಬಾದ್‍ನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ವೆಂಕಟೇಶ್ ಅವರಿಗೆ ಶುಕ್ರವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರ ಸಮ್ಮುಖದಲ್ಲಿ ಮಾಸ್ಕ್ ಮತ್ತು ಗ್ಲೌಸ್‍ಗಳನ್ನು ಟ್ರಸ್ಟ್ ಪದಾಧಿಕಾರಿಗಳು ಹಸ್ತಾಂತರಿಸಿದರು. ಮುಂದಿನ ದಿನದಲ್ಲಿ 10 ಲಕ್ಷ ಮಾಸ್ಕ್‍ಗಳನ್ನುನೀಡಲು ಉದ್ದೇಶಿಸಿರುವುದಾಗಿ ಹೇಳಿದರು

Translate »