ಕೊರೊನಾ ತಡೆ ಕಾರ್ಯಾಚರಣೆಗೆ ಹಣದ ಕೊರತೆ
ಮೈಸೂರು

ಕೊರೊನಾ ತಡೆ ಕಾರ್ಯಾಚರಣೆಗೆ ಹಣದ ಕೊರತೆ

April 4, 2020

ಬೆಂಗಳೂರು,ಏ.3(ಕೆಎಂಶಿ)- ಸರ್ಕಾರಿ ನೌಕರರ ವೇತನ ನೀಡುವುದು ಕಷ್ಟವಾಗಬಹುದು ಎಂಬ ಕಾರಣಕ್ಕಾಗಿ ಕೊರೊನಾ ವಿರುದ್ಧದ ಹೋರಾಟಕ್ಕೆ ಹಣ ಒದಗಿಸಲು ಸರ್ಕಾರದ ಉನ್ನತಾಧಿಕಾರಿಗಳು ಹಿಂದೇಟು ಹಾಕುತ್ತಿರುವ ಅಂಶ ಬೆಳಕಿಗೆ ಬಂದಿದೆ.

ಕೊರೊನಾ ಸಂಕಷ್ಟದಿಂದ ಎದುರಾಗಿರುವ ಆರ್ಥಿಕ ಸಂಕಷ್ಟದ ಕಾರಣಕ್ಕಾಗಿ ಸರ್ಕಾರದ ಬೊಕ್ಕ ಸಕ್ಕೆ ಬರುತ್ತಿರುವ ತೆರಿಗೆಯ ಪ್ರಮಾಣ ಕಡಿಮೆ ಯಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ವಿಕೋ ಪಕ್ಕೆ ಹೋಗಲಿದೆ ಎಂದು ಆತಂಕಗೊಂಡಿರುವ ಉನ್ನತಾಧಿಕಾರಿಗಳ ಪಡೆ ಸದ್ಯದ ಸಂಕಷ್ಟಕ್ಕೆ ನಿರೀಕ್ಷಿತ ಹಣ ಬಿಡುಗಡೆಯಾಗದಂತೆ ನೋಡಿಕೊಳ್ಳುತ್ತಿದೆ.

ಇದರ ಬದಲು ಕೇಂದ್ರದ ನೆರವು ಮತ್ತು ದಾನಿ ಗಳ ನೆರವಿನಲ್ಲೇ ಕೊರೊನಾ ಸಂಕಷ್ಟವನ್ನು ಎದು ರಿಸಬೇಕು ಎಂದು ಮುಖ್ಯಮಂತ್ರಿ ಗಳಿಗೆ ಸಲಹೆ ನೀಡಿದ್ದು, ಇದನ್ನು ಹೊರತುಪಡಿಸಿ ಅಲ್ಪಪ್ರಮಾಣದ ಹಣ ವನ್ನಷ್ಟೇ ಸರ್ಕಾರದ ಬೊಕ್ಕಸದಿಂದ ವೆಚ್ಚ ಮಾಡಬೇಕು ಎಂದು ಹೇಳಿದೆ.

ಸದ್ಯದ ಸ್ಥಿತಿಯಲ್ಲಿ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಯ ಸಲುವಾಗಿ ಮಾಸಿಕ 3 ಸಾವಿರ ಕೋಟಿ ರೂ.ಗಳಷ್ಟು ಹಣ ಬೇಕಿದ್ದು, ವಿವಿಧ ಬಾಬ್ತುಗಳಿಂದ ಸರ್ಕಾರದ ಬೊಕ್ಕಸಕ್ಕೆ ಬರುತ್ತಿದ್ದ ಹಣದ ಪ್ರಮಾಣ ಇಳಿಮುಖವಾಗಿದೆ. ಲಾಕ್‍ಡೌನ್ ಪರಿಸ್ಥಿತಿಯಿಂದ ರಾಜ್ಯ ಮಾತ್ರವಲ್ಲ, ದೇಶಕ್ಕೆ ದೇಶವೇ ಸಂಕಷ್ಟದಲ್ಲಿರುವುದರಿಂದ ಕೇಂದ್ರದಿಂದ ನಮಗೆ ದೊರೆ ಯಬೇಕಾದ ಹಣದಲ್ಲೂ ದೊಡ್ಡ ಪಾಲು ಸಿಗದೆ ಹೋಗಬಹುದು. ಹೀಗಾಗಿ ಪರ್ಯಾಯ ಮೂಲಗಳಿಂದ ಹಣ ಪಡೆಯಲು ಪ್ರಯತ್ನಿಸಬೇಕು. ಕೇಂದ್ರದ ನೆರವು ಪಡೆಯುವುದು ಸೇರಿದಂತೆ ಉದ್ಯಮಿಗಳಿಂದ, ದಾನಿಗಳಿಂದ ನೆರವು ಪಡೆಯಬೇಕು. ಹಾಗೆ ಮಾಡದೆ ಸರ್ಕಾ ರದ ಬೊಕ್ಕಸವನ್ನು ನೆಚ್ಚಿಕೊಂಡರೆ ಗಂಭೀರ ಪರಿಸ್ಥಿತಿ ಯನ್ನು ಎದುರಿಸಬೇಕಾಗುತ್ತದೆ. ಇದು ಯಾವ ಮಟ್ಟಕ್ಕೆ ಹೋಗಬಹುದು ಎಂದರೆ ರಾಜ್ಯ ಸರ್ಕಾರಿ ನೌಕರರ ವೇತನ, ಪಿಂಚಣಿ ಹಣವನ್ನು ಕೊಡಲೂ ಪರದಾ ಡುವ ಸ್ಥಿತಿಯನ್ನು ತರಬಹುದು. ಈ ಹಿಂದೆ ಸರ್ಕಾರಿ ನೌಕರರ ವೇತನ, ಪಿಂಚಣಿ ನೀಡಲು ಖಾಸಗಿ ಹಣ ಕಾಸು ಸಂಸ್ಥೆಗಳಿಂದ ಸಾಲ ಪಡೆಯಲಾಗಿದೆ ಎಂಬುದು ನಿಜ. ಹಾಗೆಯೇ ದೇವಾಲಯಗಳ ಹುಂಡಿಯಿಂದ ಹಣ ಪಡೆಯಲಾಗಿದೆ ಎಂಬುದೂ ನಿಜ. ಆದರೆ ಆ ಸಂದರ್ಭದಲ್ಲಿ ಸರ್ಕಾರಗಳು ಇಂತಹ ನೈಸರ್ಗಿಕ ಸಮಸ್ಯೆಗೆ ಗುರಿಯಾಗಿರಲಿಲ್ಲ. ಹೀಗಾಗಿ ಸರ್ಕಾರದ ಬೊಕ್ಕಸಕ್ಕಿರುವ ಹರಿವು ಕಡಿಮೆಯಾಗಿರುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದುವರಿಯಬೇಕು ಎಂದು ಈ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿ ದ್ದಾರೆ. ಈ ಮಧ್ಯೆ ಕೊರೊನಾ ವಿರುದ್ಧ ಹೋರಾಟ ನಡೆ ಸಲು ಕೈಗೊಂಡ ಹಲವು ತೀರ್ಮಾನಗಳಿಗೆ ಅಗತ್ಯ ವಾದ ಹಣದ ನೆರವನ್ನು ಪಡೆಯಲಾಗದೆ ಯಡಿಯೂರಪ್ಪ ಸಂಪುಟದ ಹಲವು ಸಚಿವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

Translate »