11ನೇ ದಿನವೂ ಬಡಜನರಿಗೆ ಆಹಾರ ವಿತರಿಸಿದ ಮಾಜಿ ಶಾಸಕ ಎಂಕೆಎಸ್
ಮೈಸೂರು

11ನೇ ದಿನವೂ ಬಡಜನರಿಗೆ ಆಹಾರ ವಿತರಿಸಿದ ಮಾಜಿ ಶಾಸಕ ಎಂಕೆಎಸ್

April 4, 2020

ಮೈಸೂರು, ಏ.3(ಆರ್‍ಕೆಬಿ)- ಕೋವಿಡ್ -19 ಹಾವಳಿಯಿಂದಾಗಿ ಇಡೀ ದೇಶ ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ನಿರಾಶ್ರಿತರು, ಕೂಲಿ ಕಾರ್ಮಿ ಕರು, ಬಡಜನರಿಗೆ ನೆರವಾಗುವ ದೃಷ್ಟಿ ಯಿಂದ ಸತತವಾಗಿ 11ನೇ ದಿನವಾದ ಶುಕ್ರ ವಾರವೂ ಮಾಜಿ ಶಾಸಕ ಎಂಕೆ. ಸೋಮಶೇಖರ್ ಮೈಸೂರಿನ ಧರ್ಮ ಸಿಂಗ್ ಕಾಲೋನಿ, ದೇವರಾಜ ಅರಸು ಕಾಲೋನಿ, ಹೊಸೂರಿನಲ್ಲಿನ 1500ಕ್ಕೂ ಹೆಚ್ಚು ಜನರಿಗೆ ಮಾಸ್ಕ್, ಕುಡಿಯುವ ನೀರು, ಆಹಾರದ ಪೊಟ್ಟಣಗಳನ್ನು ವಿತ ರಿಸಿದರು. ಈ ಸಂದರ್ಭ ಮುಖಂಡರಾದ ಗಣೇಶ್, ರಾಮು, ಪರಮೇಶ್ ವಸಂತ ಕುಮಾರ್, ಹರೀಶ್, ಬಾಬು, ಶೇಖರ್, ಸುನೀಲ್ ಇನ್ನಿತರರು ಉಪಸ್ಥಿತರಿದ್ದರು.

Translate »