ಎಲ್ಲಾ ರಾಜ್ಯಗಳ ಡಿಜಿಪಿಗಳಿಗೆ ಪತ್ರ
ಬೆಂಗಳೂರು, ಏ.3 (ಕೆಎಂಶಿ)- ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಗೃಹ ಇಲಾಖೆ ಎಲ್ಲ ರಾಜ್ಯಗಳ ಪೊಲೀಸ್ ಅಧಿಕಾರಿಗಳಿಗೆ ಸೂಚನೆ.
ದೇಶದ ಹಲವೆಡೆ ವೈದ್ಯರು ಹಾಗೂ ಇತರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆಗಳು ಗಮನಕ್ಕೆ ಬಂದಿವೆ. ಈ ಬಗ್ಗೆ ಗೃಹ ಕಾರ್ಯದರ್ಶಿ ಎಲ್ಲ ರಾಜ್ಯಗಳ ಡಿಜಿಪಿಗಳಿಗೆ ನಿರ್ದೇಶನ ನೀಡಿದ್ದು ಕಠಿಣ ಕ್ರಮ ಜಾರಿಗೆ ಆದೇಶಿಸಿದೆ.
ದೇಶದಲ್ಲಿ ಇದುವರೆಗೆ 2301 ಕೊರೊನಾ ಪ್ರಕರಣ ದಾಖಲಾಗಿವೆ. 24 ಗಂಟೆಯಲ್ಲಿ 336 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ದೆಹಲಿಯ ಮರ್ಕಜ್ ತಬ್ಲೀಜ್ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 647 ಜನರಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಕೊರೊನಾ ಸೋಂಕು ಪತ್ತೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಸೇತು ಆಪ್ ಬಿಡುಗಡೆ ಮಾಡ ಲಾಗಿದೆ. ದೇಶಾದ್ಯಂತ ಇದುವರೆಗೆ 30 ಲಕ್ಷ ಜನ ಈ ಆಪ್ ಉಪಯೋಗಿ ಸುತ್ತಿದ್ದಾರೆ. ನಾಗರಿಕರು ಈ ಆಪ್ ಡೌನ್ ಲೋಡ್ ಮಾಡಿಕೊಂಡು ಕೊರೊನಾ ಮಾಹಿತಿ ಪಡೆಯಬಹುದಾಗಿದೆ. ದೇಶಾದ್ಯಂತ 182 ಲ್ಯಾಬ್‍ಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 130 ಸರ್ಕಾರಿ ಹಾಗೂ 52 ಖಾಸಗಿ ಲ್ಯಾಬ್‍ಗಳಿವೆ. ಇದುವರೆಗೆ 66 ಸಾವಿರ ಟೆಸ್ಟ್‍ಗಳನ್ನು ನಡೆಸಲಾಗಿದೆ. ನಿನ್ನೆ ಒಂದೇ ದಿನ 8 ಸಾವಿರ ಸ್ಯಾಂಪಲ್ಸ್ ಪರೀಕ್ಷೆ ಮಾಡಲಾಗಿದೆ.