ಕೋವಿಡ್-19: ಪಿಎಂ ಪರಿಹಾರ ನಿಧಿಗೆ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ 1.08 ಕೋಟಿ ರೂ. ದೇಣಿಗೆ
ಮೈಸೂರು

ಕೋವಿಡ್-19: ಪಿಎಂ ಪರಿಹಾರ ನಿಧಿಗೆ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ 1.08 ಕೋಟಿ ರೂ. ದೇಣಿಗೆ

April 4, 2020

ಮೈಸೂರು, ಏ.3(ಆರ್‍ಕೆಬಿ)- ಕೋವಿಡ್-19 ವಿರುದ್ಧ ಹೋರಾಟದಲ್ಲಿ ಭಾರತ ಸರ್ಕಾರವನ್ನು ಬೆಂಬಲಿಸಿ ಮೈಸೂ ರಿನ ಎನ್.ಆರ್. ಗ್ರೂಪ್‍ನ ಸೈಕಲ್ ಪ್ಯೂರ್ ಅಗರಬತ್ತಿ ಕಂಪನಿಯು `ಸಿಟಿಜನ್ ಅಸಿ ಸ್ಟೆನ್ಸ್ ಅಂಡ್ ರಿಲೀಫ್ ಇನ್ ಎಮರ್ಜೆನ್ಸಿ ಸಿಚುವೇಷನ್-ಪಿಎಂ ರಿಲೀಫ್ ಫಂಡ್’ಗೆ 1.08 ಕೋಟಿ ರೂ. ದೇಣಿಗೆ ನೀಡಿದೆ.

ದೇಶಾದ್ಯಂತ ಲಾಕ್‍ಡೌನ್ ಹಿನ್ನೆಲೆ ಯಲ್ಲಿ ಸಕ್ರಿಯವಾಗಿ ನೌಕರರ ಬೆಂಬಲಕ್ಕೆ ನಿಂತಿರುವ ಎನ್.ಆರ್.ಗ್ರೂಪ್‍ನ ಸೈಕಲ್ ಪ್ಯೂರ್ ಅಗರಬತ್ತಿ ಕಂಪನಿಯು ಇಂದಿನ ಜಾಗತಿಕ ಬಿಕ್ಕಟ್ಟಿನ ಸಂದರ್ಭ ದಲ್ಲಿ ಮೈಸೂರಿನ ಸರ್ಕಾರಿ ಆಸ್ಪತ್ರೆಗೆ 5 ವೆಂಟಿಲೇಟರ್‍ಗಳ ಕೊಡುಗೆ ನೀಡಿದೆ. ಜೊತೆಗೆ ಪರ್ಸನಲ್ ಪ್ರೊಟೆಕ್ಷ್ಷನ್ ಎಕ್ವಿಪ್ ಮೆಂಟ್ ಕಿಟ್ ಮತ್ತು ಮಾಸ್ಕ್‍ಗಳನ್ನು ವಿತರಿಸಿದೆ.

ಈ ಕುರಿತು ಮಾತನಾಡಿದ ಸೈಕಲ್ ಪ್ಯೂರ್ ಅಗರಬತ್ತಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ, ನಮ್ಮನ್ನು ನಾವು ಸುಧಾರಣೆ ಮಾಡಿಕೊಳ್ಳಲು ಇದು ಸಕಾಲ. ಲಾಕ್‍ಡೌನ್ ವೇಳೆಯಲ್ಲಿ ಎಲ್ಲರೂ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳ ಬೇಕು. ಕೋವಿಡ್-19 ಸೋಂಕಿತ ರೋಗಿ ಗಳಿಗೆ ಚಿಕಿತ್ಸೆ ನೀಡಲು ಹಗಲಿರುಳು ಶ್ರಮಿ ಸುತ್ತಿರುವ ಆರೊಗ್ಯ ಸಿಬ್ಬಂದಿ ಮತ್ತು ಪೊಲೀ ಸರ ಆರೋಗ್ಯ ರಕ್ಷಣೆಗಾಗಿ ಎಲ್ಲರೂ ಪ್ರಾರ್ಥಿ ಸಬೇಕು ಎಂದು ಮನವಿ ಮಾಡಿದ್ದಾರೆ.

Translate »