ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಮೈಸೂರಲ್ಲಿ ಭಾರೀ ಪ್ರತಿಭಟನೆ ಮೆರವಣ ಗೆಗೆ ವಿವಿಧ ಮಠಗಳ ಸ್ವಾಮೀಜಿಗಳಿಂದ ಚಾಲನೆ
News, ಮೈಸೂರು

ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಮೈಸೂರಲ್ಲಿ ಭಾರೀ ಪ್ರತಿಭಟನೆ ಮೆರವಣ ಗೆಗೆ ವಿವಿಧ ಮಠಗಳ ಸ್ವಾಮೀಜಿಗಳಿಂದ ಚಾಲನೆ

December 25, 2021

ಮೊಳಗಿದ ಜೈಕಾರ, ರಾರಾಜಿಸಿದ ಕನ್ನಡ ಧ್ವಜಗಳು

ವಿವಿಧ ಸಂಘಟನೆಗಳ ಸಾವಿರಾರು ಮಂದಿ ಭಾಗಿ

ಮೆರಗು ನೀಡಿದ ಕಂಸಾಳೆ, ಡೊಳ್ಳು ಕುಣ ತ, ಪೂಜಾ ಕುಣ ತ

ಕನ್ನಡಿಗರ ಕೆಣಕಿದರೆ ತಕ್ಕ ಶಾಸ್ತಿಯ ಎಚ್ಚರಿಕೆ

ಮೈಸೂರು, ಡಿ.೨೪(ಎಂಟಿವೈ)- ಸ್ವಾತಂತ್ರö್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಗೊಳಿಸಿದ ಹಾಗೂ ಕ್ರಾಂತಿಕಾರಿ ಬಸವಣ್ಣ ನವರ ಪ್ರತಿಮೆಗೆ ಮಸಿ ಬಳಿದು ಕನ್ನಡ ಬಾವುಟ ದಹಿಸಿದ ಮಹಾರಾಷ್ಟç ಏಕೀಕರಣ ಸಮಿತಿ (ಎಂಇಎಸ್)ಯನ್ನು ನಿಷೇಧಿಸು ವಂತೆ ಆಗ್ರಹಿಸಿ ಸಾಂಸ್ಕೃತಿಕ ನಗರಿ ಮೈಸೂ ರಲ್ಲಿ ಶುಕ್ರವಾರ ವಿವಿಧ ಸಂಘಟನೆಗಳ ಕಾರ್ಯ ಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಕರ್ನಾಟಕ ಪ್ರದೇಶ ಕುರುಬರ ಸಂಘ ಕರೆ ನೀಡಿದ್ದ ಈ ಪ್ರತಿ ಭಟನೆಯಲ್ಲಿ ವಿವಿಧ ಜಾತಿ, ಧರ್ಮಗಳ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ,ಹಿಂದುಳಿದ ವರ್ಗಗಳ ಒಕ್ಕೂಟ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಜಾತ್ಯಾ ತೀತ ಮನೋಭಾವದಿಂದ ಪಾಲ್ಗೊಂಡು ಎಂಇಎಸ್ ಕಾರ್ಯಕರ್ತರ ಪುಂಡಾ ಟಿಕೆಯನ್ನು ತೀವ್ರವಾಗಿ ಖಂಡಿಸಿದರು. ಅರಮನೆಯ ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಾಲ ಯದ ಮುಂಭಾಗದಲ್ಲಿ ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಹೊಸಮಠದ ಶ್ರೀ ಚಿದಾನಂದಸ್ವಾಮಿ ಹಾಗೂ ಉರಿಲಿಂಗಿಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಅವರುಗಳು ಪ್ರತ್ಯೇಕ ಮೂರು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿ ಸಲಾಗಿದ್ದ, ಸಂಗೊಳ್ಳಿ ರಾಯಣ್ಣ ಪ್ರತಿಮೆ, ಬಸವಣ್ಣರ ಪುತ್ಥಳಿ ಹಾಗೂ ಭುವನೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪ್ರತಿಭಟನಾ ಮೆರವಣ ಗೆಗೆ ಚಾಲನೆ ನೀಡಿದರು. ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಿಂದ ಆರಂಭ ವಾದ ಪ್ರತಿಭಟನಾ ಮೆರವಣ ಗೆ ದೊಡ್ಡ ಗಡಿಯಾರ ವೃತ್ತ, ಮಹಾತ್ಮಗಾಂಧಿ ವೃತ್ತ, ಚಿಕ್ಕಗಡಿಯಾರ ವೃತ್ತದ ಮೂಲಕ ದೇವರಾಜ ಅರಸ್ ರಸ್ತೆ, ಜೆಎಲ್‌ಬಿ ರಸ್ತೆ, ವಿನೋಬ ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಜಿಲ್ಲೆಯ ವಿವಿಧೆಡೆಯಿಂದ ಬೈಕ್‌ಗಳಲ್ಲಿ ಪಾಲ್ಗೊಂಡಿದ್ದ ಸಂಗೊಳ್ಳಿ ರಾಯಣ್ಣ ಹಾಗೂ ಬಸವಣ್ಣ ಅವರ ಅಭಿಮಾನಿಗಳು ಮೆರವಣ ಗೆಯುದ್ದಕ್ಕೂ ಜೈಕಾರ ಹಾಕುತ್ತ ಸಾಗಿದರು. ಮೆರವಣ ಗೆ ಯಲ್ಲಿ ಕನ್ನಡ ಭಾವುಟ ರಾರಾಜಿಸಿದವು.

ಇದೇ ವೇಳೆ ಪವರ್‌ಸ್ವಾರ್ ಪುನೀತ್ ರಾಜ್‌ಕುಮಾರ್ ಭಾವಚಿತ್ರವನ್ನು ಹಿಡಿದು ಮೆರವಣ ಗೆಯಲ್ಲಿ ಸಾಗಿದ್ದು, ಕಂಡು ಬಂದಿತು. ಎಂಇಎಸ್ ಕಾರ್ಯಕರ್ತರು ಮತ್ತೆ ಪುಂಡಾಟಿಕೆ ಮುಂದುವರೆಸಿದರೆ ಕನ್ನಡಿಗರಿಂದ ತಕ್ಕ ಶಾಸ್ತಿ ಎದುರಿಸ ಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಮೆರವಣ ಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಕನ್ನಡಿಗರ ಒಗ್ಗಟ್ಟು ಪ್ರದರ್ಶಿಸಿದರು. ಕಂಸಾಳೆ, ಡೊಳ್ಳು ಕುಣ ತ, ಪೂಜಾ ಕುಣ ತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಮೆರವಣ ಗೆಗೆ ಮೆರಗು ನೀಡಿದವು. ಮೆರವಣ ಗೆಯಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಪ್ರತಿ ಭಟನಾಕಾರರು ತೆರಳಿದ್ದರಿಂದ ಪೊಲೀಸರ ಭದ್ರತಾ ಕರ್ತವ್ಯ ಸುಗಮವಾದಂತಾ ಯಿತು. ಮೆರವಣ ಯುದ್ಧಕ್ಕೂ ಸಂಗೊಳ್ಳಿ ರಾಯಣ್ಣನಿಗೆ ಜೈಕಾರ ಮಾರ್ಧನಿಸಿದರೆ, ಬಸವಣ್ಣನವರ ವಚನಧಾರೆಯೂ ಮನಸ್ಸಲ್ಲಿ ಜಾತೀಯತೆಯ ಅಂಧತ್ವ ಕವಿದಿರುವವರ ಕಣ್ತೆರೆಸುವ ಪ್ರಯತ್ನ ಮಾಡಿತು. ಮೆರವಣ ಗೆಯಿಂದ ಅಲ್ಲಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪ್ರತಿಭಟನಾ ಮೆರ ವಣ ಗೆಯಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕೆಪಿಸಿಸಿ ವಕ್ತಾರ ಹೆಚ್.ಎ.ವೆಂಕಟೇಶ್, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧಕ್ಷ ಬಿ.ಸುಬ್ರಹ್ಮಣ್ಯ, ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಕೆ.ಆರ್.ನಗರದ ಮುಖಂಡ ಡಿ.ರವಿಶಂಕರ್, ಜಿ.ಪಂ ಮಾಜಿ ಅಧ್ಯಕ್ಷ ರಾದ ಕೆ.ಮರೀಗೌಡ, ಬಿ.ಎಂ.ರಾಮು, ಮಾಜಿ ಮೇಯರ್‌ಗಳಾದ ಟಿ.ಬಿ.ಚಿಕ್ಕಣ್ಣ, ಪುಪ್ಷಲತಾ ಟಿ.ಬಿ.ಚಿಕ್ಕಣ್ಣ, ಪಾಲಿಕೆ ಮಾಜಿ ಸದಸ್ಯ ಎಂ.ಶಿವಣ್ಣ, ಪಾಲಿಕೆ ಸದಸ್ಯ ಜೆ.ಗೋಪಿ, ರಮೇಶ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು, ಕೆಪಿಸಿಸಿ ಕಾನೂನು ಘಟಕದ ರಾಜ್ಯ ಪ್ರದಾನ ಕಾರ್ಯದರ್ಶಿ ಕವಿತಾಕಾಳೆ, ಕರ್ನಾಟಕ ಕಾವಲು ಪಡೆಯ ರಾಜ್ಯಾಧ್ಯಕ್ಷ ಎಂ.ಮೋಹನ್‌ಕುಮಾರ್‌ಗೌಡ, ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮುಖಂಡರಾದ ಜೋಗಿ ಮಂಜು, ಕಾಡನಹಳ್ಳಿ ಸ್ವಾಮೀಗೌಡ, ಛಾಯ, ಎಂ.ಎ. ಕಮಲಾ ಅನಂತರಾಮು, ಕುಪ್ಯ ಭಾಗ್ಯಮ್ಮ, ಕುರುಬಾರ ಹಳ್ಳಿ ಪ್ರಕಾಶ್, ಗಂಧನಹಳ್ಳಿ ಹೇಮಂತ್, ಮೂಗೂರು ನಂಜುAಡ ಸ್ವಾಮಿ, ಎಸ್.ಆರ್. ರವಿ, ಸಿ.ಜೆ.ದ್ವಾರಕೀಶ್, ಕೆ.ಆರ್.ತಾಲೂಕು ಕುರುಬರ ಸಂಘದ ಅಧ್ಯಕ್ಷ ಚೀರನಹಳ್ಳಿ ಶಿವಣ್ಣ, ದಿಡ್ಡಹಳ್ಳಿ ಬಸವರಾಜು, ದೊರೆಸ್ವಾಮಿ, ಬಾಲಕೃಷ್ಣ, ಬಸವ ಬಳಗದ ಶೇಖರ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Translate »