ಜಿಲ್ಲಾಧಿಕಾರಿಗಳ ಕಚೇರಿ ಬಳಿ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ಸಭೆ
News, ಮೈಸೂರು

ಜಿಲ್ಲಾಧಿಕಾರಿಗಳ ಕಚೇರಿ ಬಳಿ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ಸಭೆ

December 25, 2021

ಎಂಇಎಸ್ ಸಂಘಟನೆ ನಿಷೇಧಿಸಲು ಒಕ್ಕೊರಲಿನ ಆಗ್ರಹ

ಮೈಸೂರು, ಡಿ.೨೪(ಎಂಟಿವೈ)- ಬೆಳಗಾವಿಯಲ್ಲಿ ಪುಂಡಾಟಿಕೆ ಮೆರೆದ ಎಂಇಎಸ್ ಸಂಘಟನೆ ಕಾರ್ಯಕರ್ತರ ವಿರುದ್ಧ ದೇಶದ್ರೋಹ ಪ್ರಕರಣ ದಾಖ ಲಿಸಿ, ಪುಂಡಾಟಿಕೆ ಮರುಕಳಿಸದಂತೆ ತಡೆಗಟ್ಟುವ ನಿಟ್ಟಿನಲ್ಲಿ ಎಂಇಎಸ್ ಸಂಘ ಟನೆಯನ್ನು ನಿಷೇಧಿಸುವಂತೆ ಒಕ್ಕೊರಲಿನ ಆಗ್ರಹ ಕೇಳಿಬಂತು. ಮೈಸೂರು ಜಿಲ್ಲಾ ಧಿಕಾರಿ ಕಚೇರಿ ಬಳಿ ಶುಕ್ರವಾರ ಮದ್ಯಾಹ್ನ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯ ದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘ ಟನೆಗಳ ಮುಖಂಡರು, ಸಾಹಿತಿಗಳು, ರಾಜಕೀಯ ಮುಖಂಡರು ಒಕ್ಕೊರಲಿ ನಿಂದ ಎಂಇಎಸ್ ಸಂಘಟನೆಯ ನಿಷೇಧಕ್ಕೆ ಆಗ್ರಹಿಸಿದರು.

ಗಡಿಪಾರು ಮಾಡಬೇಕು: ಸಮಾ ವೇಶದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಬಿ.ಸುಬ್ರಹ್ಮಣ್ಯ ಮಾತನಾಡಿ, ದೇಶಪ್ರೇಮಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿರುವ ಎಂಇಎಸ್ ಸಂಘಟನೆಯನ್ನು ರಾಜ್ಯ ಸರ್ಕಾರ ಕೂಡಲೇ ನಿಷೇಧಿಸಬೇಕು. ಕಿಡಿಗೇಡಿಗಳನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಬೆಳಗಾವಿಯಲ್ಲಿ ಎಂಇಎಸ್ ಕಾರ್ಯ ಕರ್ತರಿಂದ ನಡೆದ ದುಷ್ಕೃತ್ಯ ಖಂಡ ನೀಯ. ಕನ್ನಡದ ಬಾವುಟ ದಹಿಸಿ ದವರಿಗೆ ಗುಂಡು ಹಾರಿಸಬೇಕಿತ್ತು. ದಾಂಧಲೆ ನಡೆಸಿದವರಿಗೆ ಶಿಕ್ಷೆ ವಿಧಿಸಿದ್ದರೆ ಸಂಗೊಳ್ಳಿ ರಾಯಣ್ಣ, ಬಸವಣ್ಣನವರಿಗೆ ಅಪಮಾನ ಮಾಡುತ್ತಿರಲಿಲ್ಲ. ಕೆಲವು ಕಿಡಿಗೇಡಿಗಳು ರಾಜ್ಯ ರಾಜ್ಯಗಳ ನಡುವೆ ಗಲಾಟೆ ಹಬ್ಬಿಸುತ್ತಿದ್ದಾರೆ. ಜನರ ಶಾಂತಿಗೆ ಭಂಗ ತರುತ್ತಿದ್ದಾರೆ. ರಾಜ್ಯದ ಮಹನೀಯರ ಪ್ರತಿಮೆ ಭಗ್ನಗೊಳಿಸಿ, ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಿರುವ ಹಿನ್ನೆಲೆಯಲ್ಲ್ಲಿ ಎಲ್ಲ ಪಕ್ಷಗಳು ಒಂದಾಗಬೇಕು ಎಂದರು.
ಎAಇಎಸ್‌ಗೆ ಸಂಸ್ಕೃತಿ ಇಲ್ಲ: ಬ್ರಿಟಿಷರ ವಿರುದ್ಧ ಹೋರಾಡಿ ಗಲ್ಲಿಗೇರಿಸಿಕೊಂಡ ಅಪ್ರತಿಮ ಹೋರಾಟಗಾರ ಸಂಗೊಳ್ಳಿ ರಾಯಣ್ಣರಂತೆ ಶಿವಾಜಿ ಮಹಾರಾಜರು ಮುಖ್ಯ. ರಾಯಣ್ಣ ಎಲ್ಲ ಜಾತಿ ಜನರನ್ನು ಸೇರಿಸಿಕೊಂಡು ದೊಡ್ಡ ಸಂಘಟನೆ ಕಟ್ಟಿದರು. ರಾಯಣ್ಣನ ಸೈನ್ಯಕ್ಕೆ ಬ್ರಿಟಿಷರು ಹೆದರಿದ್ದರು. ರಾಯಣ್ಣ ಮಹಾನ್ ದೇಶ ಭಕ್ತ. ಅಂತಹ ಮಹಾನ್ ರಾಷ್ಟçಪ್ರೇಮಿ ಯನ್ನು ಒಂದು ಜಾತಿ, ಮತಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಅವರು ಎಲ್ಲ ಜನಾಂಗದ ಪ್ರೀತಿ ಬಯಸಿದ್ದರು. ಪುಂಡಾಟಿಕೆ ತಡೆಗಟ್ಟಲು ಸರಿಯಾದ ಕ್ರಮ ಕೈಗೊಳ್ಳದ ಕಾರಣ ಎಂಇಎಸ್ ದಾಂದಲೆ ನಡೆಸುತ್ತಿದೆ. ಎಂಇಎಸ್‌ನ ವರಿಗೆ ಮಾನವೀಯತೆ, ಸಂಸ್ಕೃತಿ ಇಲ್ಲ. ಅವರನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಚಿಂತಕ ಪ್ರೊ. ಕೆ.ಎಸ್.ಭಗವಾನ್ ಒತ್ತಾಯಿಸಿದರು.

ಸರ್ಕಾರದ ವೈಫಲ್ಯ: ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಕರ್ನಾಟಕದಲ್ಲಿ ಸಂಗೊಳ್ಳಿ ರಾಯಣ್ಣ ಅವರಿಗೆ ಅಪಮಾನ ಮಾಡಿರುವವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು, ಇಲ್ಲದಿದ್ದರೆ ಗಲ್ಲಿಗೇರಿಸಬೇಕು. ಸ್ವಾಭಿಮಾನಕ್ಕೆ ಧಕ್ಕೆ ಮಾಡುತ್ತಿರುವವರನ್ನು ಬಿಡಬಾರದು. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೆ ಇಬ್ಬರು ಮಹನೀಯರ ಪ್ರತಿಮೆಗಳಿಗೆ ಅಪಮಾನವಾಗುತ್ತಿರಲಿಲ್ಲ. ಸರ್ಕಾರದ ವೈಫಲ್ಯದಿಂದ ಇಂತಹ ಘಟನೆ ನಡೆದಿದೆ ಎಂದು ಆಪಾದಿಸಿದರು.

ದಪ್ಪ ಚರ್ಮದ ಸರ್ಕಾರ: ತಿ.ನರಸೀ ಪುರದ ಯುವ ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್ ಮಾತನಾಡಿ, ಎಂಇಎಸ್ ಸಂಘಟನೆ ಗಡಿ ಭಾಗದಲ್ಲಿ ಕ್ಯಾತೆ ತೆಗೆಯುವುದು ಬಹಳ ಹಿಂದಿ ನಿಂದಲೂ ನಡೆದುಕೊಂಡು ಬಂದಿದೆ. ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್, ಬಸವಣ್ಣ ಜಾತ್ಯಾತೀತ ನಾಯಕರು. ಈ ಸರ್ಕಾರ ದಪ್ಪ ಚರ್ಮದ ಸರ್ಕಾರ. ಎಂಇಎಸ್ ಗಡಿಪಾರು ಮಾಡಬೇಕು. ಕಾನೂನು ತಂದು ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸÀಬೇಕು ಎಂದು ಒತ್ತಾಯಿಸಿದರು.

ಎಂಇಎಸ್ ಕಾರ್ಯಕರ್ತರನ್ನು ಸುಡಬೇಕು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಈ ಸಮಸ್ಯೆ ಜೀವಂತವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದು ನಮಗೇ ಸಂಬAಧ ಇಲ್ಲವೆಂಬAತೆ ವರ್ತಿಸುತ್ತಿವೆ. ಭಯೋತ್ಪಾದಕರು, ನಕ್ಸಲರಿಗಿಂತ ಎಂಇಎಸ್ ಸಂಘಟನೆಯವರು ಅಮಾ ನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಕನ್ನಡ ವಿರೋಧಿ ಕೃತ್ಯ ಎಸಗುವವರಿಗೆ ಕಂಡಲ್ಲಿ ಗುಂಡು ಹಾರಿಸಬೇಕು. ದೊಂಬಿ ಕೋರರು, ಗಲಾಟೆ ಮಾಡುವುದು ಸಾಮಾನ್ಯವಾಗಿದ್ದರೂ ಕನ್ನಡ ಧ್ವಜವನ್ನು ಸುಡುವುದು ಒಳ್ಳೆಯದಲ್ಲ. ನಕ್ಸಲರನ್ನು ಸುಡುವಂತೆ ಎಂಇಎಸ್ ಕಾರ್ಯಕರ್ತ ರನ್ನು ಸುಡಬೇಕು ಎಂದು ಆಗ್ರಹಿಸಿದರು.

ಸಮಾವೇಶದಲ್ಲಿ ಜಿಪಂ ಮಾಜಿ ಅಧ್ಯಕ್ಷರಾದ ಕೆ.ಮರೀಗೌಡ, ಬಿ.ಎಂ. ರಾಮು, ಕೆ.ಮಾರುತಿ, ಸಿ.ಜೆ.ದ್ವಾರಕೀಶ್, ಮಾಜಿ ಮೇಯರ್‌ಗಳಾದ ಅಯೂಬ್ ಖಾನ್, ಅನಂತು, ಟಿ.ಬಿ.ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಪಾಲಿಕೆ ಸದಸ್ಯರಾದ ಜೆ.ಗೋಪಿ, ಎಸ್‌ಬಿಎಂ ಮಂಜು, ಕೆ.ಜೆ.ರಮೇಶ್, ಪಾಲಿಕೆ ಮಾಜಿ ಸದಸ್ಯ ರಾದ ಶಿವಕುಮಾರ್, ಎಂ.ಕೆ.ಶAಕರ್, ಪ್ರಶಾಂತ್‌ಗೌಡ, ಕಮಲಮ್ಮ, ಎಂ.ಸಿ. ಚಿಕ್ಕಣ್ಣ, ಡಿ.ನಾಗಭೂಷಣ್, ಜಯಶಂಕರ ಸ್ವಾಮಿ, ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಕೆ.ಆರ್.ನಗರ ಮುಖಂಡ ಡಿ.ರವಿಶಂಕರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಎಂ.ಚAದ್ರಶೇಖರ್, ಮಾನಸ, ಕೆಪಿಸಿಸಿ ವಕ್ತಾರರಾದ ಹೆಚ್.ಎ.ವೆಂಕಟೇಶ್, ಮಂಜುಳ ಮಾನಸ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಮಹದೇವಪ್ಪ, ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಎಂ.ಮೋಹನ್ ಕುಮಾರ್ ಗೌಡ, ನಾಯಕ ಸಮಾಜದ ಮುಖಂಡ ಕಾಟೂರ್ ದೇವರಾಜ್, ದಲಿತ ಮುಖಂಡ ರೇವಣ್ಣ, ಮುಖಂಡರಾದ ಭಾಸ್ಕರ್ ಎಲ್.ಗೌಡ, ಟಿ.ಎಸ್.ರವಿಶಂಕರ್, ಎನ್.ಎಸ್.ಗೋಪಿನಾಥ್, ಚೌಹಳ್ಳಿ ಪುಟ್ಟಸ್ವಾಮಿ, ಡೈರಿವೆಂಕಟೇಶ್, ಜೋಗಿ ಮಂಜು, ಸೋಮಶೇಖರ್, ಬಸವರಾಜು, ಮೂರ್ತಿ, ನಾಗರಾಜು, ಹುಣಸೂರು ಬಸವಣ್ಣ, ಹರೀಶ್ ಮೊಗಣ್ಣ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.

Translate »