ಕೊಲಂಬಿಯಾ ಏಷಿಯಾ ಆಸ್ಪತ್ರೆಯಿಂದ ಬೈಲುಕುಪ್ಪೆಯಲ್ಲಿ  ಬೃಹತ್ ಸಮುದಾಯ ಆರೋಗ್ಯ ತಪಾಸಣಾ ಶಿಬಿರ
ಮೈಸೂರು

ಕೊಲಂಬಿಯಾ ಏಷಿಯಾ ಆಸ್ಪತ್ರೆಯಿಂದ ಬೈಲುಕುಪ್ಪೆಯಲ್ಲಿ ಬೃಹತ್ ಸಮುದಾಯ ಆರೋಗ್ಯ ತಪಾಸಣಾ ಶಿಬಿರ

October 28, 2021

ಮೈಸೂರು,ಅ.27-ಮೈಸೂರಿನ ಕೊಲಂ ಬಿಯಾ ಏಷಿಯಾ ಆಸ್ಪತ್ರೆ (ಮಣಿಪಾಲ್ ಆಸ್ಪತ್ರೆಗಳ ಒಂದು ಘಟಕ), ಟಿಬೆಟನ್ ಹಾರ್ಟ್ ಫೌಂಡೇಷನ್ ಸಹಯೋಗ ದೊಂದಿಗೆ ಬೈಲುಕುಪ್ಪೆಯಲ್ಲಿ ಮೂರು ದಿನಗಳ ಕಮ್ಯೂನಿಟಿ ಮಲ್ಟಿ ಸ್ಪೆಷಾಲಿಟಿ ಮೆಗಾ ಕ್ಯಾಂಪ್ ಅನ್ನು ಅ.20ರಿಂದ 22 ರವರೆಗೆ ಆಯೋಜಿಸಲಾಗಿತ್ತು.

ಈ ವೇಳೆ ಟಿಬೆಟನ್ ಹಾರ್ಟ್ ಫೌಂಡೇ ಷನ್ ನಿರ್ದೇಶಕ ಟೆನ್‍ಜಿನ್ ಚೋನೈ ಮಾತ ನಾಡಿ, ಪ್ರಥಮ ಬಾರಿಗೆ ಟಿಬೆಟನ್ ಹಾರ್ಟ್ ಫೌಂಡೇಷನ್ ವತಿಯಿಂದ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಹಯೋಗದಲ್ಲಿ ಬೈಲು ಕುಪ್ಪೆಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳ ಲಾಗಿತ್ತು ಎಂದು ಹೇಳಿದರು.

ಶಿಬಿರದಲ್ಲಿ ಕಾರ್ಡಿಯಾಲಜಿಸ್ಟ್ ಡಾ. ಸಿ.ಬಿ.ಕೇಶವಮೂರ್ತಿ, ಇಎನ್‍ಟಿ ಸ್ಪೆಷಾ ಲಿಸ್ಟ್ ಡಾ.ಧಾತತ್ರಿ, ಯುರೋಲಜಿಸ್ಟ್ ಡಾ.ದಿನೇಶ್, ಆರ್ಥೋಪೆಡಿಷಿಯನ್ ಡಾ.ರವಿಕಿರಣ್, ಗ್ಯಾಸ್ಟ್ರೋಎಂಟರಾಲ ಜಿಸ್ಟ್ ಡಾ.ಅನೂಪ್ ಆಳ್ವಾ ಸೇರಿದಂತೆ ಹಿರಿಯ ವೈದ್ಯರು ಶಿಬಿರದಲ್ಲಿ ಭಾಗ ವಹಿಸಿದ್ದರು. ಈ ಶಿಬಿರದಲ್ಲಿ ಹಲವು ರೋಗಗಳ ಪತ್ತೆ ಮಾಡಿ, ಅವುಗಳನ್ನು ತಜ್ಞರ ಸಮಯೋಚಿತ ಚಿಕಿತ್ಸೆಯಿಂದ ಗುಣಪಡಿಸಬಹುದು ಎಂದರು.
ಸೆರಾ ಮೆ ಮೊನಾಸ್ಟ್ರಿ ಅಧ್ಯಕ್ಷ ಲೊಬ ಸಂಗ್ ತಷಿ ಮಾತನಾಡಿ, ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋ ಜಿಸಲು ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಪ್ರಯತ್ನವನ್ನು ಶ್ಲಾಘಿಸಿದರು. ಅಲ್ಲದೆ, ವೈದ್ಯರ ತಂಡ ಸರ್ಕಾರದ ಮಾರ್ಗ ಸೂಚಿಗಳನ್ನು ಅನುಸರಿಸುವ ಮೂಲಕ ಸಮುದಾಯದ ಜನರ ಆರೋಗ್ಯ ತಪಾ ಸಣೆ ಮಾಡಿದರು ಎಂದರು.

ವೈದ್ಯಕೀಯ ತಜ್ಞರ ಸಮಯೋಚಿತ ಮಧ್ಯಸ್ಥಿಕೆಯಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಸ್ಥಿತಿಗಳುಂಟಾಗುವುದು ತಪ್ಪುತ್ತದೆ ಎಂದು ನಾವು ನಂಬಿದ್ದು, ಈ ನಿಟ್ಟಿನಲ್ಲಿ ಶಿಬಿರವು ಆ ಉದ್ದೇಶ ವನ್ನು ಯಶಸ್ವಿ ಮಾಡಿದೆ ಎಂದರು.

ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಜನರಲ್ ಮ್ಯಾನೇಜರ್ ಡಾ. ಗೌತಮ್ ದಾಸ್ ಮಾತನಾಡಿ, ಮಲ್ಟಿ ಸ್ಪೆಷಾಲಿಟಿ ಮೆಗಾ ಕ್ಯಾಂಪ್ ಟಿಬೆಟನ್ ಸಮುದಾಯದ ಸೇವೆಗೆ ಒಂದು ಉತ್ತಮ ಅವಕಾಶ ಎಂದರು. ತಜ್ಞ ಹಾಗೂ ನುರಿತ ವೈದ್ಯರ ತಂಡ ದಿಂದ ಉತ್ತಮ ಗುಣಮಟ್ಟದ ಸೇವೆ ಗಳನ್ನು ನೀಡಲು ಸದಾ ಸಿದ್ಧರಾಗಿದ್ದೇವೆ ಎಂದ ಅವರು, ಆರೋಗ್ಯ ಸಮಸ್ಯೆ ಬಿಗ ಡಾಯಿಸುವ ಮುನ್ನ ಸಮಯಕ್ಕೆ ಸರಿ ಯಾಗಿ ವೈದ್ಯರಲ್ಲಿ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ತಿಳಿಸಿದರು.

Translate »