ನೆರವಿಗೆ ಬಾರದ ಶಾಸಕ ರಾಮದಾಸ್ ವಿರುದ್ಧ  ವಿವಿಧ ಬಡಾವಣೆ ನಿವಾಸಿಗಳ ಪ್ರತಿಭಟನೆ
ಮೈಸೂರು

ನೆರವಿಗೆ ಬಾರದ ಶಾಸಕ ರಾಮದಾಸ್ ವಿರುದ್ಧ ವಿವಿಧ ಬಡಾವಣೆ ನಿವಾಸಿಗಳ ಪ್ರತಿಭಟನೆ

October 28, 2021

ಮೈಸೂರು, ಅ.27(ಆರ್‍ಕೆಬಿ)- ಇತ್ತೀ ಚೆಗೆ ಬಿದ್ದ ಧಾರಾಕಾರ ಮಳೆಯಿಂದ ಕೃಷ್ಣ ರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ನೂರಾರು ಮನೆ ಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ವಿವಿಧ ಬಡಾವಣೆಯ ನಿವಾಸಿಗಳು ಇಡೀ ರಾತ್ರಿ ಜೀವ ಭಯದಿಂದ ತತ್ತರಿಸುವಂತಾಗಿದೆ. ವ್ಯಕ್ತಿಯೊಬ್ಬ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಘಟನೆಯೂ ನಡೆದಿದೆ. ಹೀಗಿದ್ದೂ ಕ್ಷೇತ್ರದ ಶಾಸಕರಾಗಲೀ, ನಗರಪಾಲಿಕೆ, ಮುಡಾ ಅಧಿಕಾರಿಗಳಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿ, ಕೃಷ್ಣರಾಜ ಕ್ಷೇತ್ರದ ವಿವಿಧ ಬಡಾ ವಣೆಗಳ ನಿವಾಸಿಗಳು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಬುಧವಾರ ಮೈಸೂರು ನಗರಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.

ಐಶ್ವರ್ಯ ಬಡಾವಣೆ, ಸಾರಾ ಬಡಾವಣೆ, ಶ್ರೀರಾಂಪುರ 2ನೇ ಹಂತ, ಮಧುವನ ಬಡಾವಣೆ, ಜೆ.ಸಿ.ನಗರ, ಸಿದ್ದಾರ್ಥ ಬಡಾ ವಣೆ, ಸೂರ್ಯ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳ ನಿವಾಸಿಗಳು ಪ್ರತಿ ಭಟನೆಯಲ್ಲಿ ಭಾಗವಹಿಸಿ, ತಮಗೆ ಇಂತಹ ಸಂಕಷ್ಟದಲ್ಲಿ ನೆರವಾಗದ ಕ್ಷೇತ್ರದ ಶಾಸಕರ ನಿಲುವು ಖಂಡಿಸಿದರು. ಕ್ಷೇತ್ರದ ಶಾಸಕರು, ಜಿಲ್ಲಾಡಳಿತ, ನಗರಪಾಲಿಕೆ, ಮುಡಾ ಅಧಿ ಕಾರಿಗಳ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಈ ವೇಳೆ ಮಾತ ನಾಡಿದ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್, ಕ್ಷೇತ್ರದ ವಿವಿಧೆಡೆ ಚರಂಡಿಗಳು ಮುಚ್ಚಿ ಹೋಗಿವೆ. ರಸ್ತೆಗಳು ಹೊಂಡಮಯ ವಾಗಿವೆ. ಮಳೆ ನೀರು ಮನೆಗಳಿಗೆ ನುಗ್ಗು ತ್ತಿದೆ. ಉಕ್ಕಿ ಹರಿಯುತ್ತಿರುವ ರಾಜಕಾಲುವೆ ಯನ್ನು ದುರಸ್ತಿಪಡಿಸಿ ಮಳೆ ನೀರು ಸರಾಗ ವಾಗಿ ಹೋಗುವಂತೆ ಮಾಡಿಲ್ಲ. ಇಷ್ಟೆಲ್ಲಾ ಅವಾಂತರಗಳಾಗಿದ್ದರೂ ಶಾಸಕ ರಾಮ ದಾಸ್ ಸಂತ್ರಸ್ತರ ಭೇಟಿ ಮಾಡಿಲ್ಲ. ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದರು. ಶಾಸಕರು, ಮೋದಿ ಉತ್ಸವದಲ್ಲಿ ಮುಖ್ಯಮಂತ್ರಿ ಮತ್ತು ಎಲ್ಲಾ ಇಲಾಖೆ ಸಚಿವರಿಗೆ ಸನ್ಮಾನಿಸಿ, ಅವರಿಂದ ಮಾದರಿ ಕ್ಷೇತ್ರ ಎಂದು ಹೇಳಿಸಿದ್ದಾರೆ. ಅದರ ರೆಕಾರ್ಡಿಂಗ್‍ಗಳು ಮತ್ತು ಪತ್ರಿಕಾ ತುಣುಕುಗಳನ್ನು ದೆಹಲಿಗೆ ಕೊಂಡೊಯ್ದು ಮಂತ್ರಿಗಿರಿಗಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಇದೇನಾ ನಿಮ್ಮ ಮಾದರಿ ಕ್ಷೇತ್ರ ಎಂದು ಪ್ರಶ್ನಿಸಿದ ಅವರು, ರಾಜಕಾಲುವೆಯಲ್ಲಿ ಬಿದ್ದು ನೀರಿನಲ್ಲಿ ಕೊಚ್ಚಿಹೋದ ಚಂದ್ರೇ ಗೌಡನ ಕುಟುಂಬಕ್ಕೆ ಸಾಂತ್ವನ ಹೇಳುವ, ಪರಿಹಾರ ಕೊಡಿಸುವ ಕೆಲಸ ಮಾಡಿಲ್ಲ ಎಂದು ದೂರಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮೇಯರ್ ಸುನಂದಾ ಪಾಲನೇತ್ರ ಅವರಿಗೆ ಮನವಿ ಪತ್ರ ಸಲ್ಲಿಸಿ ದರು. ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಗಳಾದ ಎಂ.ನಾರಾಯಣ, ಟಿ.ಬಿ.ಚಿಕ್ಕಣ್ಣ, ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ಮಾಜಿ ಉಪಮೇಯರ್ ಪುಷ್ಪವಲ್ಲಿ, ಪಾಲಿಕೆ ಸದಸ್ಯರಾದ ಶೋಭಾ ಸುನೀಲ್, ಮಾಜಿ ಸದಸ್ಯ ಸುನೀಲ್, ಶಿವಣ್ಣ, ಕೆಪಿಸಿಸಿ ಸದಸ್ಯೆ ವೀಣಾ, ಕಾಂಗ್ರೆಸ್ ಮುಖಂಡರಾದ ಡೈರಿ ವೆಂಕಟೇಶ್, ಪ್ರದೀಪ್‍ಕುಮಾರ್, ಗುಣ ಶೇಖರ್ ಇನ್ನಿತರರು ಭಾಗವಹಿಸಿದ್ದರು.

Translate »