ರೋಗಕ್ಕೆ ತುತ್ತಾದ ಭತ್ತದ ಗದ್ದೆಗಳಿಗೆ  ಕೃಷಿ ಇಲಾಖೆ ಅಧಿಕಾರಿಗಳ ಭೇಟಿ
ಮೈಸೂರು

ರೋಗಕ್ಕೆ ತುತ್ತಾದ ಭತ್ತದ ಗದ್ದೆಗಳಿಗೆ ಕೃಷಿ ಇಲಾಖೆ ಅಧಿಕಾರಿಗಳ ಭೇಟಿ

October 28, 2021

ಮೈಸೂರು, ಅ.27(ಎಂಟಿವೈ)- ಬದಲಾಗು ತ್ತಿರುವ ಹವಾಮಾನ, ಅನುಕ್ರಮವಲ್ಲದ ಬೇಸಾಯ ಪದ್ಧತಿಯಿಂದ ಭತ್ತದ ಬೆಳೆಗೆ ರೋಗ ಬಾದೆ ಕಾಡುತ್ತಿದ್ದು, ರೈತರು ತಜ್ಞರ ಸಲಹೆ ಪಡೆದು ಔಷಧಿ ಸಿಂಪಡಿಸಿ ಬೆಳೆ ನಷ್ಟ ತಡೆ ಗಟ್ಟುವಂತೆ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಸಸ್ಯ ಸಂರಕ್ಷಣೆ ವಿಭಾಗದ ಪ್ರಾಧ್ಯಾಪಕರಾದ ಡಾ. ಸಿ.ಗೋವಿಂದರಾಜು ಸಲಹೆ ನೀಡಿದ್ದಾರೆ.

ಮೈಸೂರು ತಾಲೂಕಿನ ನಾಗನಹಳ್ಳಿಯಲ್ಲಿರುವ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆಯ ವತಿ ಯಿಂದ ನಾಗನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಗನಹಳ್ಳಿ, ಕಳಸ್ತವಾಡಿ, ಲಕ್ಷೀಪುರ, ಶ್ಯಾದನಹಳ್ಳಿ ಗ್ರಾಮಗಳ ಭತ್ತದ ಗದ್ದೆಗಳಿಗೆ ತಜ್ಞರ ತಂಡ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಈ ಭತ್ತದ ಬೆಳೆಗಳಲ್ಲಿ ಸಾರಜನಕದ ಕೊರತೆ ಉಂಟಾಗಿ, ಭತ್ತದ ಗರಿಗಳ ತುದಿಭಾಗವು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಒಣಗಲಾರಂಭಿಸುತ್ತಿದೆ. ಇದರ ನಿಯಂ ತ್ರಣಕ್ಕಾಗಿ ಒಂದು ಕ್ಯಾನ್ ನೀರಿಗೆ, 250 ಗ್ರಾಂ ಯೂರಿಯಾ ಮತ್ತು 250 ಗ್ರಾಂ ಪೊಟಾಷ್ ರಸ ಗೊಬ್ಬರವನ್ನು ಸೇರಿಸಿ, ಚೆನ್ನಾಗಿ ಕರಗಿಸಿ, ಸೋಸಿ ಸಿಂಪಡಣೆ ಮಾಡುವಂತೆ ಸಲಹೆ ನೀಡಿದರು.

ಭತ್ತದಲ್ಲಿ ಕಾಂಡ ಕೊರಕದ ಬಾಧೆ ಕಂಡು ಬಂದರೆ ಕ್ಲೋರೋಫೈರಿಫಾಸ್ ಕೀಟನಾಶಕವನ್ನು ಒಂದು ಲೀಟರ್ ನೀರಿಗೆ 2 ಮಿ.ಲೀ.ನಂತೆ ಬೆರೆಸಿ, ಸಿಂಪಡಣೆ ಮಾಡಬೇಕು. ಭತ್ತದಲ್ಲಿ ಈಗ ಕಾಣಿಸಿ ಕೊಳ್ಳ್ಳುತ್ತಿರುವ ಬೆಂಕಿರೋಗವು, ಪ್ರಸ್ತುತ ಮೋಡ ಕವಿದ ವಾತಾವರಣ ಹಾಗೂ ದಿಢೀರ್ ಬಿಸಿಲಿನ ತಾಪವೇ ರೋಗಾಣುಗಳು ಹರಡಲು ಕಾರಣ ವಾಗಿದೆ. ಇದರಿಂದ ಗರಿಗಳ ಮೇಲೆ ವಜ್ರ್ರಾಕಾರದ ಕಂದು ಮಚ್ಚೆಗಳುಂಟಾಗುತ್ತದೆ. ಈ ಮಚ್ಚೆಗಳ ಮಧ್ಯ ಭಾಗವು ಬೂದಿ ಬಣ್ಣದಿಂದ ಕೂಡಿರುತ್ತದೆ. ತೆನೆಯ ಕೆಳಭಾಗದಲ್ಲಿ ಕತ್ತಿನ ಮೇಲೆ ಕಪ್ಪು ಅಥವಾ ಕಂದು ಬಣ್ಣದ ಮಚ್ಚೆ ಕಾಣಿಸಿಕೊಂಡು ತೆನೆ ಜೊಳ್ಳಾಗು ತ್ತದೆ. ಕೆಲವೊಂದು ಸಮಯದಲ್ಲಿ ಕತ್ತಿನ ಭಾಗವು ಮುರಿದು ತೆನೆ ಜೋತು ಬೀಳುವುದುಂಟು. ಈ ರೋಗದ ನಿರ್ವಹಣೆಗೆ ಟ್ರೈಸೈಕ್ಲೋ ಜೋಲ್ ಶಿಲೀಂಧ್ರ ನಾಶಕವನ್ನು ಒಂದು ಲೀಟರ್ ನೀರಿಗೆ 0.6 ಗ್ರಾಂನಂತೆ ಬೆರೆಸಿ ಸಂಪೂರ್ಣ ಗದ್ದೆ ತೊಯ್ಯುವಂತೆ ಸಿಂಪರಣೆ ಮಾಡಬೇಕು ಎಂದು ರೈತರಿಗೆ ಸಲಹೆ ನೀಡಿದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಾ.ಕೆ.ಪಿ.ವೀರಣ್ಣ ಮಾತನಾಡಿ, ಬೆಳೆ ಕಟಾವು ಮಾಡುವಾಗ ನೆಲಸಮಕ್ಕೆ ಕಟಾವು ಮಾಡಬೇಕು. ಬೆಳೆ ಕಟಾವಾದ ಮೇಲೆ ಮಾಗಿ ಉಳುಮೆ ಮಾಡಿ, ಬದುಗಳನ್ನು ಸ್ವಚ್ಛಗೊಳಿಸಿ, ತಜ್ಞರು ಶಿಫಾರಸ್ಸು ಮಾಡಿದ ಪ್ರಮಾಣದಷ್ಟು ರಸಗೊಬ್ಬರ ಬಳಕೆ ಮಾಡ ಬೇಕು. ಹೆಚ್ಚು ಹೆಚ್ಚು ಸಾವಯವ ಗೊಬ್ಬರಗಳನ್ನು ಭೂಮಿಗೆ ಸೇರಿಸುವುದರಿಂದ ಮಣ್ಣಿನಲ್ಲಿ ಸೂಕ್ಷ್ಮ ಜೀವಿಗಳ ಚಟುವಟಿಕೆ ಹೆಚ್ಚಿ ರೋಗ ನಿರೋಧಕ ಶಕ್ತಿ ಸ್ಥಾಪನೆಯಾಗಲಿದೆ ಎಂದರು. ಈ ಸಂದರ್ಭ ದಲ್ಲಿ ಕೃಷಿ ಅಧಿಕಾರಿ ಜೀವನ್, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಎಸ್.ಜೆ.ಹೇಮಂತ್, ತಾಂತ್ರಿಕ ವ್ಯವ ಸ್ಥಾಪಕ ಮಧುಸೂದನ್, ರೈತರಾದ ಸತ್ಯನಾರಾ ಯಣ, ಕರುಣಾಕರ್, ಚಲುವರಾಜು, ರಮೇಶ್, ದೇವರಾಜು ಮತ್ತು ಚಂದನ್ ಹಾಜರಿದ್ದರು.

Translate »