ಮೈಸೂರು, ನ.೧೬(ಆರ್‌ಕೆಬಿ)- ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪಿಯು ಮಂಡಳಿ ಪ್ರಕಟಿಸಿರುವ ಮಧ್ಯಂ ತರ ಪರೀಕ್ಷಾ ವೇಳಾಪಟ್ಟಿ ಅವೈಜ್ಞಾನಿಕವಾಗಿದೆ. ಯಥಾ ಪ್ರಕಾರದಂತೆ ಮಧ್ಯವಾರ್ಷಿಕ ಪರೀಕ್ಷೆಗಳನ್ನು ಕಾಲೇಜು ಮಟ್ಟದಲ್ಲಿ ವಿಕೇಂದ್ರೀಕೃತವಾಗಿ ನಡೆಸಿ, ಇದರ ಮೌಲ್ಯ ಮಾಪನ ಅಂತಿಮ ಪರೀಕ್ಷೆಗೆ ಒಳಪಡುವುದು ಬೇಡ. ಶೈಕ್ಷ ಣ ಕ ವೇಳಾಪಟ್ಟಿಯನ್ನು ವಿಸ್ತರಿಸಿ, ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗಳನ್ನು ಜೂನ್ ತಿಂಗಳಿಗೆ ನಿಗದಿಪಡಿಸ ಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‌ಓ) ಆಶ್ರಯ ದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ಜಮಾಯಿಸಿದ ಪಿಯು ವಿದ್ಯಾರ್ಥಿಗಳು ಪಿಯು ಮಂಡಳಿಯ ವಿರುದ್ಧ ಘೋಷಣೆ ಕೂಗಿದರು. ಹೊರಡಿಸಿರುವ ಸುತ್ತೋಲೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಸುತ್ತೋಲೆ ಪ್ರಕಾರ, ಈಗ ನಡೆಯುವ ಮಧ್ಯ ವಾರ್ಷಿಕ ಪರೀಕ್ಷೆಯನ್ನು ರಾಜ್ಯ ಬೋರ್ಡ್ ಪರೀಕ್ಷೆಯಾಗಿ ನಡೆಸಲಾಗುವುದು. ಅಂದರೆ, ಪ್ರಶ್ನೆಪತ್ರಿಕೆಗಳು ಕೇಂದ್ರ ಕಚೇರಿಯಿಂದ ಬರುತ್ತದೆ. ನ.೨೯ರಿಂದ ಪರೀಕ್ಷೆ ನಡೆಯಲಿದೆ. ಅಂದರೆ, ಕೇವಲ ೧೫ ದಿನಗಳಲ್ಲಿ ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಏಕಾಏಕಿ, ಯಾವುದೇ ಪೂರ್ವ ಸೂಚನೆ ಇಲ್ಲದೇ, ಪೂರ್ವ ತಯಾರಿ ಇಲ್ಲದೇ ಬೋರ್ಡ್ ಪರೀಕ್ಷೆ ಯೊಂದನ್ನು ಎದುರಿಸಲು ಸಿದ್ಧರಾಗಬೇಕೇ ಎಂದು ಪ್ರತಿ ಭಟನಾನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಇಷ್ಟು ಕಡಿಮೆ ಸಮಯದಲ್ಲಿ ಪರೀಕ್ಷೆಗೆ ಹೇಗೆ ತಯಾರಾಗುತ್ತಾರೆ? ಎಂದು ಪ್ರಶ್ನಿಸಿದ ಅವರು, ದ್ವಿತೀಯ ಪಿಯು ಶೈಕ್ಷಣ ಕ ವೇಳಾಪಟ್ಟಿ ಪ್ರಕಾರ, ಮೇ ೩ನೇ ವಾರ ತರಗತಿಗಳು ಆರಂಭವಾಗಿ, ಮಾ.೩ನೇ ವಾರಕ್ಕೆ ಅಂತಿಮ ಪರೀಕ್ಷೆಗಳು ನಡೆಯುತ್ತವೆ. ಈಗ ಕೋವಿಡ್ ಹಿನ್ನೆಲೆಯಲ್ಲಿ, ತರಗತಿಗಳು ಆರಂಭವಾಗಿದ್ದೇ ಆ.೩ನೇ ವಾರಕ್ಕೆ. ಏಪ್ರಿಲ್‌ನಲ್ಲಿ ಅಂತಿಮ ಪರೀಕ್ಷೆಗಳು ನಡೆಯುತ್ತವೆ ಎಂದು ಹೇಳಲಾಗಿದೆ. ರಾಜ್ಯ ಸರ್ಕಾರದ ಮಧ್ಯವಾರ್ಷಿಕ ಬೋರ್ಡ್ ಪರೀಕ್ಷೆ ರೀತಿ ನಡೆಯುತ್ತದೆ ಎಂಬ ಹಠಾತ್ ನಿರ್ಧಾರವು ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪೋಷÀಕರಲ್ಲಿ ಅತೀವ ಆತಂಕ ಸೃಷ್ಟಿಸಿದೆ. ಈ ಹಠಾತ್ ಹೇರಿಕೆಯು ಆತಂಕ, ದುಗುಡ ಹಾಗೂ ಖಿನ್ನತೆಯನ್ನು ಸೃಷ್ಟಿಸಿ, ಮಾನಸಿಕ ಒತ್ತಡವನ್ನು ಹೇರಿದೆ ಎಂದು ದೂರಿದರು.ಎಐಡಿಎಸ್‌ಒ ಪದಾಧಿಕಾರಿಗಳಾದ ಬಿ.ಜೆ.ಸುಭಾಷ್, ಚಂದ್ರಹಾಸ್, ಆಸಿಯಾ ಬೇಗಂ, ಮಯೂರ, ನಿತಿನ್, ಅಂಜಲಿ, ಕಾವ್ಯ, ಸುಶ್ಮಿತಾ, ಸುಮಂತ್, ಪ್ರಶಾಂತ್, ರಾಘ ವೇಂದ್ರ ಇನ್ನಿತರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.