ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಗೆ ಸಹಕರಿಸಿದರೆ ಕಠಿಣ ಕ್ರಮ: ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ಚರಿಕೆ
ಮೈಸೂರು

ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಗೆ ಸಹಕರಿಸಿದರೆ ಕಠಿಣ ಕ್ರಮ: ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ಚರಿಕೆ

November 17, 2021

ಮಕ್ಕಳ ರಕ್ಷಣೆಗಾಗಿ ಸಂಪರ್ಕಿಸಿ ದೂ.೧೦೯೮

೧೨೪೫೦ಕ್ಕೂ ಹೆಚ್ಚು ಮಕ್ಕಳಿಗೆ ರಕ್ಷಣೆ

ಮೈಸೂರು, ನ.೧೬(ಎಂಟಿವೈ)- ಹಲ ವಾರು ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ಪ್ರಕರಣ ಹೆಚ್ಚಾಗುತ್ತಿದ್ದು, ಇಂತಹ ಕಾನೂನು ಬಾಹಿರ ಕೃತ್ಯಕ್ಕೆ ಸಹಕರಿಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಾರಾಧ್ಯ ಎಚ್ಚರಿಸಿದ್ದಾರೆ.

ಮೈಸೂರಿನ ಬಲ್ಲಾಳ್ ವೃತ್ತದ ಸಮೀಪ ವಿರುವ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಕಚೇರಿ ಸಭಾಂಗಣದಲ್ಲಿ ಮಕ್ಕಳ ಸಹಾಯವಾಣ “ಮೈತ್ರಿ ಸಪ್ತಾಹ” ಕಾರ್ಯ ಕ್ರಮದ ಅಂಗವಾಗಿ ದೈಹಿಕ ಶಿಕ್ಷಕರಿಗೆ ಬಾಲ ನ್ಯಾಯ ಕಾಯ್ದೆ-೨೦೧೫, ಬಾಲ್ಯವಿವಾಹ ನಿಷೇಧ ಕಾಯ್ದೆ-೨೦೧೬ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-೨೦೧೨ ಕುರಿತು ಆಯೋಜಿಸಿದ್ದ ಕಾರ್ಯಾಗಾರ ವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು.
ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಿ ಸಂತ್ರಸ್ತ ಮಕ್ಕಳಿಗೆ ಆತ್ಮಸ್ಥೆöÊರ್ಯ ತುಂಬುವ ನಿಟ್ಟಿನಲ್ಲಿ ಮಕ್ಕಳ ಸಹಾಯವಾಣ -೧೦೯೮ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಹಲವು ಕಾನೂನುಗಳಿದ್ದರೂ ದೌರ್ಜನ್ಯದಂತಹ ಪ್ರಕರಣ ನಡೆಯುತ್ತಿರು ವುದು ವಿಷಾದಕರ ಸಂಗತಿ. ಹಲವು ಕಾರಣ ದಿಂದ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗು ತ್ತಿವೆ. ಮಕ್ಕಳ ಭವಿಷ್ಯ ಉಜ್ವಲಗೊಳಿಸಬೇಕಾ ದವರೇ ಬಾಲ್ಯವಿವಾಹ ಮಾಡುವ ಮೂಲಕ ಮಕ್ಕಳ ಭವಿಷ್ಯ ಕಮರುವಂತೆ ಮಾಡುತ್ತಿ ದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಮಕ್ಕಳ ಹಕ್ಕುಗಳ ಸಂರಕ್ಷಣೆ ಬಗ್ಗೆ ನಿರ್ಲಕ್ಷö್ಯ ವಹಿಸುವವರು ಎಂದಿಗೂ ಕ್ಷಮೆಗೆ ಅರ್ಹ ರಲ್ಲ. ಮಕ್ಕಳ ರಕ್ಷಣೆಗಾಗಿಯೇ ಇರುವ ಕಾಯ್ದೆ ಗಳನ್ನು ಎಲ್ಲರೂ ತಿಳಿದುಕೊಳ್ಳುವ ಅನಿ ವಾರ್ಯತೆ ಇದೆ. ಮಕ್ಕಳ ರಕ್ಷಣೆಗಾಗಿ ದುಡಿಯುತ್ತಿರುವ ಮಕ್ಕಳ ಸಹಾಯವಾಣ ಯೊಂದಿಗೆ ಕೈ ಜೋಡಿಸಿ ದೌರ್ಜನ್ಯಕ್ಕೆ ಒಳ ಗಾದ ಹಾಗೂ ಒಳಗಾಗುತ್ತಿರುವ ಮಕ್ಕಳ ರಕ್ಷಣೆಯನ್ನು ಮಾಡಲು ಮುಂದಾಗಬೇಕು. ದೈಹಿಕ ಶಿಕ್ಷಕರಿಗೆ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಾಗಾರ ಆಯೋ ಜಿಸಿರುವುದು ಶ್ಲಾಘನೀಯ ಎಂದರು.

ಆರ್‌ಎಲ್‌ಹೆಚ್‌ಪಿ-ಮಕ್ಕಳ ಸಹಾಯವಾಣ ನಗರ ಸಂಯೋಜಕ ಎಸ್.ಶಶಿಕುಮಾರ್, ಬಾಲ ನ್ಯಾಯ ಕಾಯ್ದೆ-೨೦೧೫, ಬಾಲ್ಯವಿವಾಹ ನಿಷೇಧ ಕಾಯ್ದೆ-೨೦೧೬ ಕುರಿತು ಮಾಹಿತಿ ನೀಡಿದರೆ, ಜಿಲ್ಲಾ ಸಂಯೋಜಕ ಧನರಾಜ್ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-೨೦೧೨ ಕುರಿತು ವಿವರಿಸಿದರು. ಕಾಯ ಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ಸಮನ್ವಯಾ ಧಿಕಾರಿ ಎಂ.ಕೆ.ನಾಗೇಶ್, ಟಿಪಿಇಒ, ಎಂ.ಆರ್. ಪಾಷಾ, ಇ.ಸಿ.ಓ ಮನೋಹರ್, ಮಕ್ಕಳ ಸಹಾಯವಾಣ ತಂಡದವರು ಇದ್ದರು.

Translate »